ಬಾರ್ಸಿಲೋನಾ ಕ್ಲಬ್‌ನಲ್ಲೆ ಉಳಿದ ಲಿಯೊನೆಲ್ ಮೆಸ್ಸಿ..!

messi for web
Published on

ಬಾರ್ಸಿಲೋನಾ: ಮುಂಬರುವ ಆವೃತ್ತಿಯಲ್ಲೂ ಬಾರ್ಸಿಲೋನಾ ಕ್ಲಬ್ ತಂಡದಲ್ಲೇ ಉಳಿಯುವುದಾಗಿ ಫುಟ್‌ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಪ್ರಕಟಿಸಿದ್ದಾರೆ. ಇದರೊಂದಿಗೆ ಹಲವು ದಿನಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಅರ್ಜೆಂಟೀನಾ ಫುಟ್‌ಬಾಲ್ ತಾರೆ ತೆರೆ ಎಳೆದಿದ್ದಾರೆ. ಪ್ರಸಕ್ತ ಆವೃತ್ತಿ ಮುಕ್ತಾಯದ ಬಳಿಕ ಕ್ಲಬ್ ತೊರೆಯುವುದಾಗಿ ಮೆಸ್ಸಿ ಪ್ರಕಟಿಸಿದ್ದರು. ಇದರೊಂದಿಗೆ ಕಳೆದ 15 ದಿನಗಳಿಂದಲೂ ಮೆಸ್ಸಿ ಕ್ಲಬ್ ತೊರೆಯುತ್ತಾರೆ, ಬೇರೆ ಕ್ಲಬ್‌ಗಳು ಅವರಿಗೆ ಆಹ್ವಾನ ನೀಡುತ್ತಿವೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದವು. ಇದೀಗ 2021ರ ಜೂನ್ ವರೆಗೂ ಮೆಸ್ಸಿ ಬಾರ್ಸಿಲೋನಾ ಕ್ಲಬ್‌ನಲ್ಲೇ ಉಳಿಯಲಿದ್ದಾರೆ.

ಒಂದು ವೇಳೆ ಮಧ್ಯದಲ್ಲಿಯೇ ಕ್ಲಬ್ ತೊರೆದಿದ್ದರೂ 700 ಮಿಲಿಯನ್ ಯುರೋಸ್ ಕಟ್ಟಬೇಕಿತ್ತು. ಇದು ನನ್ನಿಂದ ಆಗದ ಕೆಲಸ ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ. ಕ್ಲಬ್ ಆಧ್ಯಕ್ಷ ನನಗೆ ಈ ಷರತ್ತು ವಿಧಿಸಿದ್ದರು ಎಂದು ಮೆಸ್ಸಿ ಹೇಳಿದ್ದಾರೆ. ಬದಲಿಗೆ ನಾನು ಕ್ಲಬ್‌ನಲ್ಲೇ ಮತ್ತೊಂದು ಋತು ಮುಂದುವರಿಯಲು ಬಯಸಿದ್ದೇನೆ. ಇದಕ್ಕೆ ಯಾವುದೇ ಷರತ್ತುಗಳನ್ನು ಮೆಸ್ಸಿ ವಿಧಿಸಿಲ್ಲ ಎನ್ನಲಾಗಿದೆ.

ನನ್ನ ಪಾಲಿಗೆ ಇದೊಂದು ಕೆಟ್ಟ ವರ್ಷವಾಗಿತ್ತು. ನಾನು ಬಾರ್ಸಿಲೋನಾದಲ್ಲೇ ಮುಂದುವರಿಯಲು ನಿರ್ಧರಿಸಿದ್ದೇನೆ. ನನ್ನ ವೃತ್ತಿ ಜೀವನವನ್ನು ಕ್ಲಬ್‌ನಲ್ಲೇ ಅಂತ್ಯಗೊಳಿಸಲು ಇಷ್ಟಪಡುತ್ತೇನೆ ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ. ಆಗಸ್ಟ್ 14 ರಂದು ಚಾಂಪಿಯನ್ಸ್ ಲೀಗ್‌ನ ಎಂಟರಘಟ್ಟದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ 2-8 ರಿಂದ ಬೆರ್ಯನ್ ಮ್ಯೂನಿಚ್ ತಂಡಕ್ಕೆ ಶರಣಾಗಿತ್ತು. ಇದರಿಂದ ಬೇಸರಿಕೊಂಡಿದ್ದ ಮೆಸ್ಸಿ ತಂಡ ತೊರೆಯುವುದಾಗಿ ಬಹಿರಂಗವಾಗಿ ಪ್ರಕಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net