

ನವದೆಹಲಿ: ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಇವರಿಬ್ಬರ ಟೆಸ್ಟ್(Boxing Day Test ) ಆಟಗಳ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ ಎಂದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಕಿಡಿಕಾರಿದ್ದಾರೆ.
ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನ 5ನೇ ದಿನದಾಟದಲ್ಲಿ ಭಾರತದ ಪರ ಕಣಕ್ಕಿಳಿದಿದ್ದ ರೋಹಿತ್ ಮತ್ತು ವಿರಾಟ್ ಬ್ಯಾಟಿಂಗ್ನಲ್ಲಿ ಮತ್ತೊಮ್ಮೆ ವಿಫಲ ಕಂಡರು. ಇದರಿಂದ ಟೀಂ ಇಂಡಿಯಾ 187 ರನ್ಗಳಿಂದ ಹೀನಾಯವಾಗಿ ಸೋತಿತು.
ಈ ಪಂದ್ಯದ ಕೊನೆಯ ದಿನದಾಟದಲ್ಲಿ ರೋಹಿತ್ 9 ರನ್ ಮತ್ತು ಕೊಹ್ಲಿ 5 ರನ್ಗಳನ್ನು ಹೊಡೆದು ಪೆವಿಲಿಯನ್ ಸೇರಿದರು. ಕಳೆದ ವರ್ಷದಲ್ಲಿ ರೋಹಿತ್ ಮತ್ತು ಕೊಹ್ಲಿ ಟೆಸ್ಟ್ನಲ್ಲಿ ಉತ್ತಮ ಪದರ್ಶನ ನೀಡುವ ಮೂಲಕ 24ಕ್ಕಿಂತ ಹೆಚ್ಚು ಸರಾಸರಿ ಇದ್ದರು. ಆದರೆ, ಈ ಬಾರಿ(ಈ ವರ್ಷ) ರೋಹಿತ್ ಎರಡು ಶತಕ ಹಾಗೂ ಎರಡು ಅರ್ಧ ಶತಕಗಳಿಸಲಷ್ಟೇ ಶಕ್ತರಾಗಿದ್ದಾರೆ. ಅದೇರೀತಿ ಕೊಹ್ಲಿ ಒಂದು ಶತಕ, ಆಫ್ ಸಂಚ್ಯೂರಿ ಗಳಿಸಿದ್ದಾರೆ. ಹೀಗಾಗಿ, ಈ ಬಾರಿ ಇಬ್ಬರು ಆಟಗಾರರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ಸಂಜಯ್ ಮಂಜ್ರೆಕರ್,''ರೋಹಿತ್ ಶರ್ಮಾ ಮತ್ತು ಕೊಹ್ಲಿ ನಡುವೆ ಟೆಸ್ಟ್ ಬ್ಯಾಟಿಂಗ್ನಲ್ಲಿ ಯಾವುದೇ ಹೊಲಿಕೆ ಇಲ್ಲ ಎಂದು ನಾನು ಹೇಳಲೇಬೇಕು. ಹೌದು, ಕೊಹ್ಲಿ ಟೆಸ್ಟ್ ಶ್ರೇಷ್ಠ ಬ್ಯಾಟರ್ ಮತ್ತು ರೋಹಿತ್ ಉತ್ತಮ ಟೆಸ್ಟ್ ಬ್ಯಾಟರ್. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅವರು ಆಟವಾಡುತ್ತಿದ್ದಾರೆ.
ಇಬ್ಬರನ್ನು ಒಂದೇ ಮಾನದಂಡದಲ್ಲಿ ಅಳೆಯುವುದು ಸರಿಯಲ್ಲ ಎಂದು ಟೀಕಕಾರರಿಗೆ ತೀರುಗೇಟು ನೀಡಿದ್ದಾರೆ. ‘ಈ ಇಬ್ಬರ ಪದೇಪದೆ ಬ್ಯಾಟಿಂಗ್ ವೈಫಲ್ಯಕ್ಕೆ ಕೋಚ್ ಕಾರಣನಾ ಎಂದು ನಾನು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)