Delhi Capitals ತಂಡದ ನಾಯಕನಾಗುವ ಅವಕಾಶ ತಿರಸ್ಕಾರ; ನಿರಾಕರಣೆಯ ಬಗ್ಗೆ ಕಾರಣ ಬಿಚ್ಚಿಟ್ಟ ಕೆ.ಎಲ್.ರಾಹುಲ್!

dk - 2025-03-11T221221.498
Published on

Delhi Capitals: ಟೀಮ್​ ಇಂಡಿಯಾದ ವಿಕೆಟ್ ಕೀಪರ್ ಕಮ್​ ಬ್ಯಾಟರ್ ಕನ್ನಡಿಗ ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕನಾಗುವ ಅವಕಾಶವನ್ನು ತಿರಸ್ಕರಿಸಿದ್ದಾರೆ ಎಂದು ಮಂಗಳವಾರ ವರದಿಯಾಗಿದೆ.

ವರದಿಯ ಪ್ರಕಾರ, ದೆಹಲಿ ಮೂಲದ ತಂಡವನ್ನು ಮುನ್ನಡೆಸಲು ಫ್ರಾಂಚೈಸ್ ಮಾಲೀಕರು ಕೇಳಿದ್ದರು, ಆದರೆ ಅವರು 2025ರ ಲೀಗ್ ಆವೃತ್ತಿಯಲ್ಲಿ ಆಟಗಾರನಾಗಿ ಕೊಡುಗೆ ನೀಡಲು ಬಯಸಿದ್ದಾರೆ ಎಂದು ಹೇಳುವ ಮೂಲಕ ನಾಯಕತ್ವದ ಪಾತ್ರವನ್ನು ತಿರಸ್ಕರಿಸಿದರು. ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ರಾಹುಲ್, ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ದೆಹಲಿ ಮೂಲದ ಫ್ರಾಂಚೈಸಿಯಿಂದ 14 ಕೋಟಿ ರೂ.ಗೆ ಸಹಿ ಹಾಕಲ್ಪಟ್ಟದ್ದಾರೆ.

ಅಕ್ಷರ ಪಟೇಲ್​ ಉತ್ತಮ

ಅಕ್ಷರ್ ಪಟೇಲ್ 2019 ರಿಂದ Delhi Capitals ತಂಡದ ಜೊತೆಗಿದ್ದಾರೆ. ಉತ್ತಮ ಆಟಗಾರನಾಗಿದ್ದಾನೆ. ಡಿಸಿ ತಂಡಕ್ಕೆ ಪಟೇಲ್​ ಸೂಕ್ತ ಎಂದು ಕೆ.ಎಲ್. ರಾಹುಲ್​ ಹೇಳಿದ್ದಾರೆ ಎಂದು ​​Delhi Capitals ತಂಡದ ಮ್ಯಾನೇಜ್​ಮೆಂಟ್​​ ಅಧಿಕಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಅಕ್ಷರ್ ಪಟೇಲ್ ಹೊಸ ನಾಯಕ!

ರಾಹುಲ್ ಅವರಿಂದ ನಿರಾಕರಣೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಈಗ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಹೊಸ ನಾಯಕನನ್ನಾಗಿ ಘೋಷಿಸಲು ಸಜ್ಜಾಗಿದೆ ಎಂದು ಹೇಳಲಾಗಿದೆ. ಇನ್ನು ಅಕ್ಷರ್​ ಪಟೇಲ್​ 2019ರಲ್ಲಿ ಐಪಿಲ್​ಗೆ ಪಾದರ್ಪಣೆ ಮಾಡಿದ್ದು ಅಲ್ಲಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net