ಹುಷಾರ್​, ಈ 4 ಹಣ್ಣುಗಳು ಮಧುಮೇಹಿಗಳಿಗೆ ವಿಷವಿದ್ದಂತೆ!; ವೈದ್ಯರ ಸಲಹೆ ಇಲ್ಲದೆ ಎಂದಿಗೂ ತಿನ್ನಲೇಬೇಡಿ | Fruits

dk - 2025-03-11T185619.894
Published on

Fruits: ಇಂದಿನ ಕೆಟ್ಟ ಜೀವನಶೈಲಿಯಿಂದಾಗಿ ಜನರಿಗೆ ಅನೇಕ ರೀತಿಯ ರೋಗಗಳು ಬರುತ್ತಿವೆ. ಕೆಲವು ಕಾಯಿಲೆಗಳು ಮಾರಕವಾಗಿದ್ದರೆ ಇನ್ನೂ ಕೆಲವ ಜೀವನಪರ್ಯಂತ ನಮ್ಮ ಜತೆಗೆ ಇರುತ್ತದೆ. ಅಂತವುಗಳಲ್ಲಿ ಮಧುಮೇಹಿ ಒಂದು. ಇದನ್ನು ಸಾಮಾನ್ಯವಾಗಿ ಶುಗರ್​ ಕಾಯಿಲೆ ಎಂತಲೂ ಕರೆಯುತ್ತಾರೆ.

ಮಧುಮೇಹದಿಂದ ಬಳುತ್ತಿರುವ ಜನರ ದೇಹದಲ್ಲಿನ ಸಕ್ಕರೆಯನ್ನು ಅಂದರೆ, ಗ್ಲೂಕೋಸ್​ ಅನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಮದಾಗಿ ಅವರಿಗೆ ಶುಗರ್​ ಕಾಯಿಲೆ ಬರುತ್ತದೆ. ಹೀಗಾಗಿ, ಮಧುಮೇಹಿಗಳು ಆಹಾರ ಸೇವನೆ ಮತ್ತು ಪಾನಿಗಳನ್ನು ಸೇವಿಸಸುವುದರಲ್ಲಿ ಎಚ್ಚರಿಕೆಯಿಂದರಬೇಕು. ಅಲ್ಲದೆ, ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುವ ಪಾನೀಯ ಹಾಗೂ ಹಣ್ಣುಗಳನ್ನು ತಿನ್ನಬಾರದು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಹೀಗಾಗಿ ಇಂತಹ ಹಣ್ಣುಗಳನ್ನು ಮಧುಮೇಹಿಗಳು ತಿನ್ನ ಬಾರದು? ಯಾಕೆ ಎಂದು ನೋಡೋಣ..

ಈ 4 ಹಣ್ಣುಗಳು ಮಧುಮೇಹಿಗಳಿಗೆ ವಿಷವಿದ್ದಂತೆ..!

1.ಬಾಳೆಹಣ್ಣು

ಹಣ್ಣುಗಳ ರಾಜ ಎಂದರೆ ಮಾವಿನಹಣ್ಣು ಎಂದು ಹೇಳಲಾಗುತ್ತೆ. ಆದರೆ, ವಾಸ್ತವವಾಗಿ ಬಡವರ, ಶ್ರೀಮಂತರ ಕೈಗಟುವ ಹಣ್ಣು ಎಂದರೆ ಅದು ಬಾಳೆಹಣ್ಣು. ಇದರಲ್ಲಿ ಅಧಿಕ ಸಕ್ಕರೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೆಟ್​ಗಳು ಇವೆ. ಇದನ್ನು ತಿನ್ನುವುದರಿಂದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ, ಮಧುಮೇಹಿಗಳು ಬಾಳೆಹಣ್ಣು ತಿನ್ನಬಾರದು.

2.ದ್ರಾಕ್ಷಿ

ಇವುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆಯೂ ಇರುತ್ತದೆ. ಇದರ ಗ್ಲೈಸೆಮಿಕ್ ಸೂಚ್ಯಂಕವೂ ತುಂಬಾ ಹೆಚ್ಚಿದ್ದು, ಇದು ದೇಹದಲ್ಲಿನ ಸಕ್ಕರೆಯ ಸಮತೋಲನವನ್ನು ತೊಂದರೆಗೊಳಿಸುತ್ತದೆ.

3.ಕಲ್ಲಂಗಡಿ

ಕಲ್ಲಂಗಡಿಯಲ್ಲಿ ಸಾಕಷ್ಟು ನೈಸರ್ಗಿಕ ಸಕ್ಕರೆಯೂ ಇರುತ್ತದೆ. ಮಧುಮೇಹ ರೋಗಿಗಳು ಇದನ್ನು ತಿಂದರೆ ನಿಮ್ಮ ಸಕ್ಕರೆಯನ್ನು ಹೆಚ್ಚಿಸಬಹುದು.

4.ಮಾವು

ಮಾವನ್ನು ಹಣ್ಣುಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಜನರು ಈ ಹಣ್ಣನ್ನು ಬಹಳ ಇಷ್ಟದಿಂದ ತಿನ್ನುತ್ತಾರೆ. ಮಾವಿನ ಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಹೆಚ್ಚಾಗಿದೆ. ಇದಲ್ಲದೆ, ಇದು ಉತ್ತಮ ಪ್ರಮಾಣದ ಸುಕ್ರೋಸ್ ಮತ್ತು ಫ್ರಕ್ಟೋಸ್ ಅನ್ನು ಸಹ ಹೊಂದಿದೆ, ಆದ್ದರಿಂದ ಮಧುಮೇಹ ರೋಗಿಗಳು ಇದರಿಂದ ದೂರವಿರಬೇಕು.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net