

ಲಖನೌ: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್, ಹೊಸದೊಂದು ದಾಖಲೆ ಬರೆದಿದ್ದು, ವಿರಾಟ್ ಕೊಹ್ಲಿಯನ್ನ ಹಿಂದಿಕ್ಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 7,000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೆ.ಎಲ್ ರಾಹುಲ್ 7000 ರನ್ ಗಳಿಸಲು 197 ಇನ್ನಿಂಗ್ಸ್ ತೆಗೆದುಕೊಂಡು, ಮೊದಲ ಸ್ಥಾನದಲ್ಲಿದ್ದಾರೆ. 212 ಇನ್ನಿಂಗ್ಸ್ಗಳ ಮೂಲಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ರಾಹುಲ್ ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧ ಶತಕ ಗಳಿಸುವ ಮೂಲಕ ಐಪಿಎಲ್ ವೃತ್ತಿಜೀವನದ 33ನೇ ಅರ್ಧಶತಕ ಪೂರೈಸಿದ್ದಾರೆ.
ಕೆ.ಎಲ್.ರಾಹುಲ್ 197, ಕೊಹ್ಲಿ 212, ಶಿಖರ್ ಧವನ್ 246, ಸುರೇಶ್ ರೈನಾ 241 ಹಾಗೂ ರೋಹಿತ್ ಶರ್ಮಾ 258 ಇನ್ನಿಂಗ್ಸ್ ಮೂಲಕ ಟಿ-20 ಕ್ರಿಕಟ್ನಲ್ಲಿ 7000 ರನ್ ಪೂರೈಸಿದ್ದಾರೆ.
ಐಪಿಎಲ್ನಲ್ಲಿ ವೇಗದ ಅರ್ಧ ಶತಕವನ್ನು ದಾಖಲಿಸಿದ ದಾಖಲೆ ಇಂದಿಗೂ ಕೆ.ಎಲ್.ರಾಹುಲ್ ಹೆಸರಿನಲ್ಲಿದೆ. 2018ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲಿದ್ದ ರಾಹುಲ್, ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ 14 ಎಸೆತದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು.
ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಸತತ ಟೀಕೆಗಳಿಗೆ ಉತ್ತರಿಸಿದ್ದಾರೆ. ಕೆ.ಎಲ್.ರಾಹುಲ್ ಕಳೆದ ಕೆಲ ಸಮಯಗಳಿಂದ ಮಂಕಾಗಿದೆ. ಜತೆಗೆ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ರಾಹುಲ್ ಸರಾಗವಾಗಿ ರನ್ ಕಲೆಹಾಕಲು ಪರದಾಟ ನಡೆಸುತ್ತಿದ್ದು, ಮತ್ತೆ ಹಿಂದಿನ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ.