

ನವದೆಹಲಿ: ದುಬೈನಲ್ಲಿ ನಿಗದಿಯಾಗಿರುವ ಎರಡು ತಿಂಗಳ ರಾಷ್ಟ್ರೀಯ ಈಜು ತರಬೇತಿ ಶಿಬಿರದಿಂದ ಏಷ್ಯಾಡ್ ಕಂಚಿನ ಪದಕ ವಿಜೇತ ವೀರ್ಧವಳ್ ಖಾಡೆ ಹೊರಗುಳಿಯಲಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಖಾಡೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಭಾರತೀಯ ಈಜು ಫೆಡರೇಷನ್ (ಎಸ್ಎಫ್ ಐ) ತಿಳಿಸಿದೆ. ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆಯಲು ಈ ಶಿಬಿರ ಭಾರತೀಯ ಈಜುಪಟುಗಳ ಪಾಲಿಗೆ ಮಹತ್ವ ಪಡೆದಿದೆ. 28 ವರ್ಷದ ಖಾಡೆ, ಕರ್ನಾಟಕದ ಶ್ರೀಹರಿ ನಟರಾಜ್, ಕುಶಾಗ್ರ ರಾವತ್ ಜತೆಗೂಡಿ ದುಬೈಗೆ ತೆರಳಬೇಕಿತ್ತು. ಖಾಡೆ ಮಹಾರಾಷ್ಟ್ರದಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ರಾಷ್ಟ್ರೀಯ ಶಿಬಿರಕ್ಕೆ ಸಜನ್ ಪ್ರಕಾಶ್ ಕೂಡ ಹೊಸದಾಗಿ ಸೇರ್ಪಡೆಗೊಳ್ಳಲಿದ್ದಾರೆ. ಸದ್ಯ ಫ್ಲುಕೆಟ್ನಲ್ಲಿ ಕಳೆದ ಫೆಬ್ರವರಿಯಿಂದ ತರಬೇತಿ ಪಡೆಯುತ್ತಿದ್ದಾರೆ. ಪ್ರದಿಪ್ ಕುಮಾರ್, ಫಿಸಿಯೋ ಜತೆಗೂಡಿ ಪ್ರಕಾಶ್ ಮಂಗಳವಾರ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಕರೊನಾ ವೈರಸ್ ಭೀತಿಯಿಂದ ಮಾರ್ಚ್ 25 ರಿಂದ ಭಾರತದಲ್ಲಿ ಈಜುಕೊಳಗಳು ಬಂದ್ ಆಗಿದ್ದವು.