ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟ ವಿರಾಟ್ ಕೊಹ್ಲಿ

kohli instagram
Published on

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಅವರು ಈಗ 75 ದಶಲಕ್ಷ ಹಿಂಬಾಲಕರನ್ನು ಸಂಪಾದಿಸಿದ ಏಷ್ಯಾದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆ ಸಂಪಾದಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮಂಗಳವಾರದ ವೇಳೆಗೆ ಕೊಹ್ಲಿ 75.6 ದಶಲಕ್ಷ ಹಿಂಬಾಲಕರನ್ನು (ಫಾಲೋವರ್ಸ್‌) ಸಂಪಾದಿಸಿದ್ದಾರೆ. ಫೇಸ್‌ಬುಕ್‌ನಲ್ಲಿ 36.9 ದಶಲಕ್ಷ ಮತ್ತು ಟ್ವಿಟರ್‌ನಲ್ಲಿ 37.3 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ವಿರಾಟ್ ಕೊಹ್ಲಿ, ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತೀಯರಾಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 40 ದಶಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಏಷ್ಯಾದ ಏಕೈಕ ಸೆಲೆಬ್ರಿಟಿ ಎನಿಸಿರುವ ವಿರಾಟ್ ಕೊಹ್ಲಿ, ವಿಶ್ವದಲ್ಲಿ ಈಗ 29ನೇ ಸ್ಥಾನಕ್ಕೇರಿದ್ದಾರೆ. ಕ್ರೀಡಾಪಟುಗಳ ಪೈಕಿ ಅವರು 4ನೇ ಅತ್ಯಧಿಕ ಹಿಂಬಾಲಕರನ್ನು ಹೊಂದಿದ್ದಾರೆ ಮತ್ತು ಕ್ರಿಕೆಟಿಗರ ಪೈಕಿ ಅತ್ಯಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಫುಟ್‌ಬಾಲ್ ತಾರೆಯರಾದ ಕ್ರಿಶ್ಚಿಯಾನೊ ರೊನಾಲ್ಡೊ (238 ದಶಲಕ್ಷ), ಲಿಯೋನೆಲ್ ಮೆಸ್ಸಿ (164) ಮತ್ತು ನೇಮರ್ (141) ಮೊದಲ 3 ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net