

Kavya Maran: ನಿನ್ನೆ (ಏ.25) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಎಸ್ಆರ್ಎಚ್ ಮತ್ತು ಸಿಎಸ್ಕೆ ನಡುವಿನ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ 5 ವಿಕೆಟ್ಗಳ ಸುಲಭ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ಸನ್ರೈಸರ್ಸ್ ತಂಡ ಐಪಿಎಲ್ ಪ್ಲೇಆಫ್ಗೆ ಲಗ್ಗೆಯಿಡುವ ಭರವಸೆಯನ್ನು ಗಟ್ಟಿಯಾಗಿಸಿದೆ. ಒಂದೆಡೆ ಪಂದ್ಯ ಗೆದ್ದರೂ ತಮ್ಮ ತಂಡದ ಒಡತಿ ಕಾವ್ಯ ಮಾರನ್ ಸಿಟ್ಟಿಗೆ ಆಟಗಾರರು ತುತ್ತಾದ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಮಾತ್ರವಲ್ಲದೇ ಕ್ರಿಕೆಟ್ ಪ್ರೇಮಿಗಳ ಕಣ್ಣಿನಲ್ಲಿಯೂ ಸೆರೆಯಾಯಿತು.
ಸಿಎಸ್ಕೆ ನೀಡಿದ ಸಾಧಾರಣ ಗುರಿಯನ್ನು ಚೇಸ್ ಮಾಡುವಾಗ ಬ್ಯಾಟರ್ ಕಮಿಂದು ಮೆಂಡಿಸ್ಗೆ ನೂರ್ ಅಹ್ಮದ್ರ ಬೌಲಿಂಗ್ನಲ್ಲಿ ಫ್ರೀ ಹಿಟ್ ಲಭಿಸಿತು. ಇದನ್ನು ಸದುಪಯೋಗ ಪಡಿಸಿಕೊಳ್ಳದ ಮೆಂಡಿಸ್ಗೆ ಕುಳಿತಲ್ಲೇ 'ಹೇಯ್....' ಎಂದು ಕಾವ್ಯ ಸನ್ನೆ ಮಾಡುತ ಬೇಸರ ಹೊರಹಾಕಿದರು. ಇದಕ್ಕೂ ಮೊದಲು ಸಿಎಸ್ಕೆ ಬ್ಯಾಟಿಂಗ್ನಲ್ಲಿದ್ದ ಸಮಯದಲ್ಲಿ ಜಡೇಜಾ ಕೊಟ್ಟ ಕ್ಯಾಚ್ ನೇರವಾಗಿ ಹರ್ಷಲ್ ಪಟೇಲ್ ಕೈಗೆ ಬಂದಿತು. ಅತ್ಯಂತ ಸುಲಭ ಕ್ಯಾಚ್ ಕೈಚೆಲ್ಲಿದ ಪಟೇಲ್ ವಿರುದ್ಧ ಎಸ್ಆರ್ಎಚ್ ಒಡತಿ ತೀವ್ರ ಸಿಟ್ಟಾದರು.
ಜಿಶಾನ್ ಅನ್ಸಾರಿ ಬೌಲಿಂಗ್ನಲ್ಲಿ ಬ್ಯಾಟ್ ಮಾಡುತ್ತಿದ್ದ ಜಡೇಜಾ, ನೇರವಾಗಿ ಹರ್ಷಲ್ ಪಟೇಲ್ ನಿಂತ ಜಾಗಕ್ಕೆ ಬಿರುಸಿನಿಂದ ಬಾರಿಸಿದರು. ತನ್ನ ಕಡೆಗೆ ಬಾಲ್ ಬರುತ್ತಿದ್ದಂತೆ ಕ್ಯಾಚ್ಗೆ ಸಿದ್ಧವಾದ ಹರ್ಷಲ್, ಕೈಗೆ ಬಂದ ಕ್ಯಾಚ್ನ ಗಟ್ಟಿಯಾಗಿ ಹಿಡಿಯದೆ ಹಾಗೆಯೇ ಬಿಟ್ಟರು. ಇದು ಸ್ಟ್ಯಾಂಡ್ಸ್ನಲ್ಲಿ ಕುಳಿತಿದ್ದ ಕಾವ್ಯಾ ಮಾರನ್ ಎದ್ದು ಚೀರಾಡುವಂತೆ ಮಾಡಿತು. ಅತ್ಯಂತ ಸುಲಭ ಕ್ಯಾಚ್ ಬಿಟ್ಟ ಪಟೇಲ್ ವಿರುದ್ಧ ಕಾವ್ಯ ತೀವ್ರ ಸಿಟ್ಟಾದರು. ಈ ದೃಶ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).