

ಹೈದರಾಬಾದ್: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ಗೆ ಸಿಗುತ್ತಿರುವ ಮನ್ನಣೆ ಇತರೆ ಕ್ರೀಡೆಗಳಿಗೆ ಸಿಗದಿರುವುದು ಬೇಸರದ ಸಂಗತಿಯಾಗಿದೆ. ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ ಆದರೂ ಸಹ ಕ್ರಿಕೆಟ್ಗೆ ಹೆಚ್ಚು ಖ್ಯಾತಿ ದೊರೆತಿದ್ದು, ಅಚ್ಚರಿ ಎನ್ನಿಸಿದರೂ ಇದು ನಿಜ. ಬ್ಯಾಡ್ಮಿಂಟನ್, ಟೆನಿಸ್, ಬಾಸ್ಕೆಟ್‌ಬಾಲ್‌ನಂತಹ ಕ್ರೀಡೆಗಳು ಕ್ರಿಕೆಟ್ಗಿಂತಲೂ ಹೆಚ್ಚು ಕಷ್ಟಕರವಾಗಿದ್ದು, ಕ್ರಿಕೆಟ್ಗೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದರ ಬಗ್ಗೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಇತರ ಕ್ರೀಡಾಪಟುಗಳಿಗೆ ಒದಗಿಸಲಾದ ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಸೈನಾ ನೆಹ್ವಾಲ್, ರಿಸ್ ಒಲಿಂಪಿಕ್ಸ್ʼನಲ್ಲಿ ಭಾರತದ ಪ್ರದರ್ಶನ ಮತ್ತು ಕ್ರಿಕೆಟ್ʼಗೆ ಹೋಲಿಸಿದರೆ ಭಾರತದಲ್ಲಿ ಇತರ ಕ್ರೀಡೆಗಳ ಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಈ ಬಗ್ಗೆ ಉತ್ತರಿಸುವಾಗ ಅವರು ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾರ ನೀಡಿರುವ ಶಾಕಿಂಗ್ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ನಮ್ಮ ದೇಶದಲ್ಲಿ ಕ್ರಿಕೆಟ್ʼಗೆ ಮಾತ್ರ ಆದ್ಯತೆ ನೀಡಲಾಗಿದೆ. ಕ್ರಿಕೆಟಿಗರಿಗೆ ಸಿಗುವ ಸೌಲಭ್ಯಗಳು ಅಥವಾ ಆರ್ಥಿಕ ಭದ್ರತೆ ಇತರ ಕ್ರೀಡೆಗಳಿಗೆ ಸಿಗುವುದಿಲ್ಲ. ದೇಶದ ಇತರೆ ಕ್ರೀಡೆಗಳಿಗೂ ಕ್ರಿಕೆಟ್ ನಂತಹ ಸೌಲಭ್ಯ ಸಿಕ್ಕರೆ ಒಲಿಂಪಿಕ್ಸ್ನಲ್ಲೂ ನಾವು ಇನ್ಮನಷ್ಟು ಪದಕ ಗೆಲ್ಲುತ್ತೇವೆ. ಒಲಿಂಪಿಕ್ಸ್ನಂತಹ ಕ್ರೀಡಾಕೂಟದಲ್ಲಿ ಅಮೆರಿಕ, ಚೀನಾನಂತಹ ದೇಶಗಳಿಗೆ ಸರಿಸಮಾನವಾಗಿ ನಾವು ಪ್ರದರ್ಶನ ನೀಡುತ್ತೇವೆ.
ಇಂದು ಭಾರತದ ಪ್ರತಿಯೊಬ್ಬ ಹುಡುಗನೂ ಕ್ರಿಕೆಟ್ ಮತ್ತು ಫುಟ್ಬಾಲ್ ಆಡಲು ಬಯಸುತ್ತಾನೆ. ವಿರಾಟ್ ಮತ್ತು ಸಚಿನ್ ಆಗಲು ಬಯಸುತ್ತಾನೆ. ಆದರೆ ಯಾವ ಹುಡುಗನೂ ಶ್ರೀಕಾಂತ್, ಪುಲ್ಲೇಲ ಗೋಪಿಚಂದ್ ಆಗಲು, ಹುಡುಗಿಯರು ಪಿ.ವಿ. ಸಿಂಧುವಿನಂತೆಯೇ ಆಗಬೇಕು ಎಂದು ಭಾವಿಸುತ್ತಿಲ್ಲ. ಇಂದು ಐಪಿಎಲ್ ನಲ್ಲಿ ಕ್ರಿಕೆಟಿಗನೊಬ್ಬ ಮ್ಯಾಚ್ʼನಲ್ಲಿ ಸ್ಕೋರ್ ಮಾಡಿದರೆ ಮುಂದಿನ ಸೀಸನ್ ನಲ್ಲಿ 5-6 ಕೋಟಿ ರೂ.ಗೆ ಮಾರಾಟವಾಗುತ್ತಾನೆ.
ಒಂದು ವೇಳೆ ನಾನು ಕ್ರಿಕೆಟ್ ಆಡಲು ಬಯಸಿದರೆ ಜಸ್ಪ್ರೀತ್ ಬುಮ್ರಾ ಅವರು 150 ಕಿ.ಮೀ ವೇಗದಲ್ಲಿಎಸೆಯುವ ಬಾಲ್ನಿಂದ ನಾನು ಸಾಯಲು ಬಯಸುವುದಿಲ್ಲ. ದರೆ, ಬುಮ್ರಾ ಅವರ 150 ಸ್ಪೀಡ್ ಬಾಲ್ನಿಂದ ಸಾಯಲು ನಾನು ಬಯಸುವುದಿಲ್ಲ. ಅದೇ ರೀತಿ ಬುಮ್ರಾ ನನ್ನೊಂದಿಗೆ ಬ್ಯಾಡ್ಮಿಂಟನ್ ಆಡುತ್ತೇನೆಂದಾಗ, ನಾನು 300 ಸ್ಪೀಡ್ ಸ್ಮ್ಯಾಶ್ನಲ್ಲಿ ಹೊಡೆದರೆ ಆತನಿಂದ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಎರಡು ಕ್ರೀಡೆಗಳು ವಿಭಿನ್ನವಾಗಿದ್ದು, ಕ್ರಿಕೆಟ್ ಕೌಶಲ್ಯದ ಆಟವಾದರೆ, ಬ್ಯಾಡ್ಮಿಂಟನ್ʼಗೆ ಸ್ಟಾಮಿನಾ ಅಗತ್ಯವುಳ್ಳ ಆಟವಾಗಿದೆ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.