

ರಾಜ್ಕೋಟ್: ಇಂದು ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್ಗಳ ಜಯ ಸಾಧಿಸಿದ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಪಾರ್ಟ್ನರ್ಶಿಪ್ ಬೆಳೆಸಲು ಬಯಸಿದ್ದರಂತೆ. ಇದಕ್ಕೆ ಕಾರಣ ಶೀಘ್ರವೇ ಪತನಗೊಂಡ ಮೂರು ವಿಕೆಟ್ಗಳು ಎಂದು ಹೇಳಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಲ್ ರೌಂಡ್ ಪ್ರದರ್ಶನ ನೀಡಿದ ಜಡೇಜಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
"ನಾನು ರೋಹಿತ್ ಜತೆ ಬೆಸ್ಟ್ ಪಾರ್ಟ್ನರ್ಶಿಪ್ ನಿರ್ಮಿಸಲು ಎದುರು ನೋಡುತ್ತಿದ್ದೆ. ಯಾಕಂದ್ರೆ ನಾವು ಕಠಿಣ ಪರಿಸ್ಥಿತಿಯಲ್ಲಿದ್ದೆವು, ನನ್ನ ಸಾಮರ್ಥ್ಯ, ನನ್ನ ಬ್ಯಾಟಿಂಗ್ ವೈಖರಿ ಎಲ್ಲದರ ಬಗ್ಗೆ ಹೆಚ್ಚು ಜಾಗೃತನಾಗಿದ್ದೆ. ಈ ಪೀಚ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ, ನಂತರದಲ್ಲಿ ಬೋಲಿಂಗ್ ಮಾಡುವುದು ಉತ್ತಮ ಎಂದೇ ನಾನು ಲೆಕ್ಕಾಚಾರ ಹಾಕಿಕೊಂಡಿದ್ದೆ" ಎಂದರು.
"ನನಗೆ ಇಲ್ಲಿನ ವಿಕೆಟ್ ಬಗ್ಗೆ ತಿಳಿದಿತ್ತು. ನಾವು ಮೊದಲು ಬ್ಯಾಟ್ ಮಾಡುತ್ತೇವೆ, ಬ್ಯಾಟಿಂಗ್ ಮಾಡುವುದು ಯಾವಾಗಲೂ ಒಳ್ಳೆಯದು, ಸೆಕೆಂಡ್ ಹಾಫ್ನಲ್ಲಿ ಆಡುವವರಿಗೆ ಬಾಲ್ ತಿರುಗಲು ಪ್ರಾರಂಭಿಸುತ್ತದೆ ಎಂದು ನಿರೀಕ್ಷಿಸಿದ್ದೆ. ಅದಕ್ಕೆ ತಕ್ಕಂತೆ ರೋಹಿತ್ ಟಾಸ್ ಗೆದ್ದಾಗ, ನಾನು ಅಂದುಕೊಂಡಿದ್ದು ಸರಿಯಾಯಿತು. ಇದೇ ನಾವು ಬಯಸಿದ್ದು, ನಮಗೆ ಬೇಕಾಗಿರುವುದು ಮೊದಲು ಬ್ಯಾಟ್ ಮಾಡಿ, ಆನಂತರ ಬೌಲಿಂಗ್ ಮಾಡಬೇಕು ಅದರಂತೆಯೇ ಆಯಿತು" ಎಂದಿದ್ದಾರೆ,(ಏಜೆನ್ಸೀಸ್).