More

    ಯುಪಿ ಟೈಂ ಬಾಂಬ್ ಪ್ರಕರಣ: ಬಾಂಬ್​ ತಯಾರಿಸಲು ಮುಂಗಡ ಹಣ ನೀಡಿದ್ದ ಮಹಿಳೆ ಅರೆಸ್ಟ್!

    ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಪತ್ತೆಯಾದ ಟೈಂ ಬಾಂಬ್ ಪ್ರಕರಣದಲ್ಲಿ, ಬಾಂಬ್ ಸಿದ್ಧಪಡಿಸುವಂತೆ ಬಂಧಿತ ಆರೋಪಿ ಜಾವೇದ್‍ಗೆ 10,000 ರೂ. ಮುಂಗಡ ಹಣ ನೀಡಿದ ಮಹಿಳೆಯನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ.

    ಇದನ್ನೂ ಓದಿ:ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ

    ಕಬ್ಬಿಣದ ಗುಂಡುಗಳಿಂದ ತುಂಬಿದ ಗಾಜಿನ ಬಾಟಲಿಗಳನ್ನು ಬಳಸಿ ಟೈಮ್ ಬಾಂಬ್‍ಗಳನ್ನು ತಯಾರಿಸಿದ ಆರೋಪದ ಮೇಲೆ ಇತ್ತೀಚೆಗೆ ಜಾವೇದ್ ಎಂಬ ವ್ಯಕ್ತಿಯನ್ನು ಎಸ್‌ಟಿಎಫ್ ಬಂಧಿಸಿದ ಕೆಲವು ದಿನಗಳ ನಂತರ. ವಿಚಾರಣೆಯಲ್ಲಿ ಮಹಿಳೆ ಬಾಂಬ್ ತಯಾರಿಸುವಂತೆ ಹೇಳಿದ್ದಾಗಿ ತಿಳಿದು ಬಂದಿತ್ತು. ಇದೀಗ ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಇಮ್ರಾನಾ ಅವರಿಗೆ ಜಾವೇದ್‌ಗೆ ಬಹಳ ಹಿಂದಿನಿಂದಲೂ ಪರಿಚಯವಿತ್ತು ಮತ್ತು ಬಾಂಬ್‌ಗಳನ್ನು ತಯಾರಿಸುವಂತೆ ಕೇಳಿಕೊಂಡಿದ್ದರು. ನಾಲ್ಕು ಬಾಂಬ್‌ಗಳನ್ನು ಇಮ್ರಾನಾಗೆ ಹಸ್ತಾಂತರಿಸಲು ಜಾವೇದ್ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಜಾವೇದ್, ಪಟಾಕಿ ತಯಾರಕನಾದ ತನ್ನ ಚಿಕ್ಕಪ್ಪ ಮನೆಯಲ್ಲಿದ್ದುಕೊಂಡು ಬಾಂಬ್‍ಗಳನ್ನು ತಯಾರಿಸಲು ಕಲಿತಿದ್ದೇನೆ. ಅಲ್ಲದೇ ಯೂಟ್ಯೂಬ್ ಮತ್ತು ಇಂಟರ್ನೆಟ್ ಮೂಲಕ ಕೆಲವು ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಬಾಂಬ್ ನಿಷ್ಕ್ರಿಯ ದಳವು ನಾಲ್ಕು ಬಾಂಬ್‍ಗಳನ್ನು ನ್ಯಾಜುಪುರದ ಕಾಡಿನಲ್ಲಿ ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಟಲ್ ಬಾಂಬ್‌ಗಳನ್ನು ತಯಾರಿಸಲು ಇಮ್ರಾನಾ ಜಾವೇದ್‌ಗೆ ಮುಂಗಡವಾಗಿ 10,000 ರೂ. ನೀಡಿದ್ದು, ನಂತರ ಡೆಲಿವರಿ ಸಮಯದಲ್ಲಿ 40,000 ರೂ. ನೀಡುವುದಾಗಿ ಹೇಳಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಶುಕ್ರವಾರ ಈ ಬಾಟಲ್ ಬಾಂಬ್‌ಗಳನ್ನು ಇಮ್ರಾನಾಗೆ ತಲುಪಿಸಲು ಬಂದಿದ್ದ ವೇಳೆ ಆತನನ್ನು ಬಂಧಿಸಲಾಗಿತ್ತು.

    ಬಾಟಲ್ ಬಾಂಬ್‌ಗಳನ್ನು ತಯಾರಿಸುವ ಕುರಿತು ವಿಚಾರಣೆ ನಡೆಸಿನದ ಪೊಲೀಸರು, ಜಾವೇದ್ ಪಟಾಕಿ ತಯಾರಕನಾದ ತನ್ನ ಚಿಕ್ಕಪ್ಪ ಅರ್ಷಿಯ ಸ್ಥಳದಲ್ಲಿಯೇ ಇದ್ದುಕೊಂಡು ಗನ್‌ಪೌಡರ್ ಮತ್ತು ಬಾಟಲ್ ಬಾಂಬ್‌ಗಳನ್ನು ತಯಾರಿಸಲು ಕಲಿತಿದ್ದೇನೆ ಮತ್ತು ಅವನು ಯೂಟ್ಯೂಬ್ ಮತ್ತು ಇಂಟರ್ನೆಟ್ ಮೂಲಕ ಕೆಲವು ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದರು.

    ದ್ವಿಶತಕ ಸಿಡಿಸಿ ಜೈಸ್ವಾಲ್ ಬರೆದ ದಾಖಲೆಗಳಿವು: 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲು! ಸಚಿನ್ ಸೇರಿ ಪ್ರಮುಖರಿಂದ ಪ್ರಶಂಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts