More

    ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ

    ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ತಾಯಿ ಆಗ್ತಿರುವ ಖುಷಿಯಲ್ಲಿದ್ದಾರೆ. 2024ರ ಹೊಸ ವರ್ಷದ ದಿನ ದಿನ ತಾಯಿಯಾಗುತ್ತಿರುವ ಸಿಹಿ ಸುದ್ದಿ​ ಹಂಚಿಕೊಂಡಿದ್ರು. ಇದೀಗ ನಟಿ ಅದಿತಿ ಪ್ರಭುದೇವ ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಮಾಡಿಸಿಕೊಂಡಿದ್ದಾರೆ.

    ಇದನ್ನೂ ಓದಿ:ದ್ವಿಶತಕ ಸಿಡಿಸಿ ಜೈಸ್ವಾಲ್ ಬರೆದ ದಾಖಲೆಗಳಿವು: 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲು! ಸಚಿನ್ ಸೇರಿ ಪ್ರಮುಖರಿಂದ ಪ್ರಶಂಸೆ!

    ಅದಿತಿ ಪ್ರಭುದೇವ ಶ್ರೀಮಂತ ಶಾಸ್ತ್ರಕ್ಕೆ ಅನೇಕ ಸ್ಯಾಂಡಲ್​ವುಡ್ ನಟ-ನಟಿಯರು ಕೂಡ ಆಗಮಿಸಿದ್ರು. ನಟ ಶರಣ್ ಕೂಡ ಕಾರ್ಯಕ್ರಮಕ್ಕೆ ಬಂದು ಅದಿತಿಗೆ ಶುಭಕೋರಿದ್ರು. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹಸಿರು ಬಣ್ಣದ ಸೀರೆಯುಟ್ಟು ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅದಿತಿ ಮುಖದಲ್ಲಿ ತಾಯಿಯಾಗಿರುವ ಸಂಭ್ರಮ ಎದ್ದು ಕಾಣುತ್ತಿದೆ. ಮನೆಗೆ ಬರಲಿರುವ ಹೊಸ ಅತಿಥಿ ಬಗ್ಗೆ ಅದಿತಿ ದಂಪತಿ ಉತ್ಸುಕರಾಗಿದ್ದಾರೆ.

    ಬೆಂಗಳೂರಿನ ಅದಿತಿ ಅವರ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ನಟ ಶರಣ್ ಸೇರಿದಂತೆ ಸ್ಯಾಂಡಲ್‌ವುಡ್ ಹಲವು ನಟ-ನಟಿಯರು ಅದಿತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಹಾರೈಸಿದ್ದಾರೆ.

    ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಅದಿತಿ ಸದ್ಯ ಅಲೆಕ್ಸಾ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

    ಸ್ಯಾಂಡಲ್‍ವುಡ್ ನಟಿ ಅದಿತಿ ಪ್ರಭುದೇವ ಅವರು 1994, ಜನವರಿ 13 ರಂದು ಜನಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅದಿತಿ ಮಿಂಚಿದ್ದಾರೆ. ತಮ್ಮ ಅಭಿನಯದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.

    ಸದ್ಯದಲ್ಲೇ ಬಿಬಿಎಂಪಿ ಬಜೆಟ್ ಮಂಡನೆ: ಉಪಮುಖ್ಯಮಂತ್ರಿ ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts