ಗರ್ಲ್​ಫ್ರೆಂಡ್​​ ಜತೆ ಬ್ರೇಕ್​ಅಪ್​ ಮಾಡಿಕೊಂಡರೇ ಕ್ರಿಕೆಟಿಗ ಇಶಾನ್​ ಕಿಶನ್​?

kishan web
Published on

ಮುಂಬೈ: ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪರ ಆಡಿ ಸಾಕಷ್ಟು ಗಮನಸೆಳೆದಿರುವ ಜಾರ್ಖಂಡ್​ನ ಯುವ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಇಶಾನ್​ ಕಿಶನ್​, ಇತ್ತೀಚೆಗೆ ಟೀಮ್​ ಇಂಡಿಯಾ ಪರವಾಗಿಯೂ ಪದಾರ್ಪಣೆ ಮಾಡಿದ್ದರು. ಈ ನಡುವೆ ಇಶಾನ್​ ಕಿಶನ್​ ಅವರಿಗಿಂತ ಹೆಚ್ಚಾಗಿ ಅವರ ಹಾಟ್​ ಗರ್ಲ್​ಫ್ರೆಂಡ್​ ಅದಿತಿ ಹುಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರು. ಇವರಿಬ್ಬರ ಡೇಟಿಂಗ್​ ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಇದೀಗ ಗೆಳತಿ ಹುಂಡಿಯಾ ಅವರೊಂದಿಗೆ ಇಶಾನ್​ ಕಿಶನ್​ ಬ್ರೇಕ್​ ಅಪ್​ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವರ್ಷಾರಂಭದಲ್ಲಿ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ರವೇಶಿಸಿದ್ದ 22 ವರ್ಷದ ಇಶಾನ್​ ಕಿಶನ್​ ಜುಲೈನಲ್ಲಿ ಭಾರತ ತಂಡದ ಶ್ರೀಲಂಕಾ ಪ್ರವಾಸಕ್ಕೂ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರ ಗರ್ಲ್​ಫ್ರೆಂಡ್​ ಅದಿತಿ ಹುಂಡಿಯಾ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿರುವ ಪೋಸ್ಟ್​ ಅವರಿಬ್ಬರ ಬ್ರೇಕ್​ಅಪ್​ ಅನುಮಾನ ಹುಟ್ಟಿಸಿದೆ.

ಎಲ್ಲ ಸಂಬಂಧಗಳೂ ಮದುವೆಯ ತನಕ ಹೋಗುವುದಿಲ್ಲ. ಕೆಲವೊಂದು ನಿಮಗೆ ಹೊಸ ರೆಸ್ಟೋರೆಂಟ್​ಗಳ ಪರಿಚಯವನ್ನಷ್ಟೇ ಮಾಡಿಸುತ್ತವೆ ಎಂದು ಅದಿತಿ ಹುಂಡಿಯಾ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಇದು ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದ್ದು, ಇಶಾನ್​ ಕಿಶನ್​ ಮತ್ತು ಅದಿತಿ ಹುಂಡಿಯಾ ಪ್ರೀತಿಯೂ ಮದುವೆಯ ತನಕ ಹೋಗುವುದಿಲ್ಲವೇ ಎಂಬ ಅನುಮಾನ ಮೂಡುವಂತೆ ಮಾಡಿದೆ.

ಜೈಪುರ ಮೂಲದ ಅದಿತಿ ಹುಂಡಿಯಾ ರೂಪದಶಿರ್ಯಾಗಿ ಈಗಾಗಲೆ ಸಾಕಷ್ಟು ಹೆಸರು ಮಾಡಿದ್ದು, ರಾಜಸ್ಥಾನದ ಫೆಮಿನಾ ಮಿಸ್​ ಇಂಡಿಯಾ ಪ್ರಶಸ್ತಿಯನ್ನೂ ಜಯಿಸಿದ್ದಾರೆ. 2016ರ 19 ವಯೋಮಿತಿ ವಿಶ್ವಕಪ್​ನಲ್ಲಿ ಭಾರತ ತಂಡದ ನಾಯಕರಾಗಿದ್ದ ಇಶಾನ್​ ಕಿಶನ್​, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚಿನ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net