More

    ಟೆಸ್ಟ್​ ವಿಶ್ವಕಪ್​ ಫೈನಲ್​ನಲ್ಲಿ ಭಾರತಕ್ಕಿರುವ ಹಿನ್ನಡೆಯನ್ನು ವಿವರಿಸಿದ ಯುವರಾಜ್​ ಸಿಂಗ್​

    ನವದೆಹಲಿ: ಟೆಸ್ಟ್​ ವಿಶ್ವ ಚಾಂಪಿಯನ್​ ಪಟ್ಟಕ್ಕಾಗಿ ಟೆಸ್ಟ್​ ವಿಶ್ವಕಪ್​ ಮಾದರಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು ಜೂನ್​ 18ರಿಂದ ಸೌಥಾಂಪ್ಟನ್​ನಲ್ಲಿ ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಇರುವ ಕೆಲ ಹಿನ್ನಡೆಗಳನ್ನು ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್​ ವಿವರಿಸಿದ್ದಾರೆ.

    ಯುವರಾಜ್​ ಸಿಂಗ್​ ಅವರ ಪ್ರಕಾರ, ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಪ್ರಶಸ್ತಿ ಹೋರಾಟದಲ್ಲಿ ಬೆಸ್ಟ್​ ಆಫ್​​ ತ್ರಿ ಅಂದರೆ 3 ಪಂದ್ಯಗಳು ಇಲ್ಲದಿರುವುದೇ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮೂರು ಪಂದ್ಯಗಳಿದ್ದರೆ ಮೊದಲ ಪಂದ್ಯ ಸೋತರೂ ಮತ್ತೆರಡು ಪಂದ್ಯಗಳಲ್ಲಿ ತಿರುಗೇಟು ನೀಡಬಹುದಾಗಿರುತ್ತದೆ. ಅಲ್ಲದೆ ನ್ಯೂಜಿಲೆಂಡ್​ ತಂಡ ಈಗಾಗಲೆ ಆತಿಥೇಯ ಇಂಗ್ಲೆಂಡ್​ ತಂಡದ ವಿರುದ್ಧ ಟೆಸ್ಟ್​ ಸರಣಿಯನ್ನು ಆಡುತ್ತಿರುವುದು ಕೂಡ ಭಾರತ ತಂಡಕ್ಕೆ ಹಿನ್ನಡೆಯಾಗಲಿದೆ.

    ಇದನ್ನೂ ಓದಿ: 100 ಕೆಜಿ ತೂಕದ ಈ ಕ್ರಿಕೆಟಿಗ ಪಾಕ್​ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾದ ಸೃಷ್ಟಿ!

    ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ಗೆ ಮುನ್ನ 8&10 ಅಭ್ಯಾಸ ಅವಧಿಗಳಲ್ಲಿ ಪಾಲ್ಗೊಳ್ಳಬಹುದು. ಆದರೆ ಭಾರತ ತಂಡಕ್ಕೆ ಮ್ಯಾಚ್​ ಪ್ರ್ಯಾಕ್ಟೀಸ್​ಗೆ ಇದು ಪರ್ಯಾಯ ಆಗಲಾರದು. ಹೀಗಾಗಿ ನ್ಯೂಜಿಲೆಂಡ್​ ತಂಡಕ್ಕೆ ಈ ವಿಷಯದಲ್ಲಿ ಮೇಲುಗೈ ಇದೆ ಎಂದು ಯುವರಾಜ್​ ವಿವರಿಸಿದ್ದಾರೆ.

    ಕೇನ್​ ವಿಲಿಯಮ್ಸನ್​ ಬಳಗಕ್ಕೆ ಹೋಲಿಸಿದರೆ ಭಾರತ ತಂಡದ ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದೆ ಎಂದಿರುವ ಯುವರಾಜ್​ ಸಿಂಗ್​, ಬೌಲಿಂಗ್​ನಲ್ಲಿ ಉಭಯ ತಂಡಗಳು ಬಹುತೇಕ ಸರಿಸಮಾನವಾಗಿವೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದ ಆರಂಭಿಕ ಜೋಡಿಯಾದ ರೋಹಿತ್​ ಶರ್ಮ ಮತ್ತು ಶುಭಮಾನ್​ ಗಿಲ್​ ಇಂಗ್ಲೆಂಡ್​ ನೆಲದಲ್ಲಿ ಡ್ಯೂಕ್​ ಚೆಂಡುಗಳನ್ನು ಎದುರಿಸಿದ ಅನುಭವ ಹೊಂದಿಲ್ಲದೆ ಇರುವುದು ಕೂಡ ಭಾರತಕ್ಕೆ ಹಿನ್ನಡೆಯಾಗಲಿದೆ ಎಂದು 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್​ ವಿಜೇತ ಯುವರಾಜ್​ ಹೇಳಿದ್ದಾರೆ. ಇದಲ್ಲದೆ ಸುದೀ ಪ್ರವಾಸದಲ್ಲಿ ಬಯೋಬಬಲ್​ನಲ್ಲಿ ಭಾರತ ತಂಡಕ್ಕೆ ಮಾನಸಿಕ ಸವಾಲುಗಳೂ ಎದುರಾಗಲಿವೆ ಎಂದು ಯುವರಾಜ್​ ಹೇಳಿದ್ದಾರೆ.

    VIDEO | ಹೀಲ್ಸ್​ ಚಪ್ಪಲಿ ಹಾಕಿಕೊಂಡು ಫುಟ್​ಬಾಲ್​ ಆಡಿದ ಹುಡುಗಿ, ವಿಡಿಯೋ ವೈರಲ್​

    ಎಲ್ಲ ಸ್ಪಿನ್​ ಬೌಲರ್​ಗಳು ಮದುವೆಯಾಗಬೇಕೆಂದ ಚಾಹಲ್​! ಯಾಕೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts