VIDEO | ಹೀಲ್ಸ್​ ಚಪ್ಪಲಿ ಹಾಕಿಕೊಂಡು ಫುಟ್​ಬಾಲ್​ ಆಡಿದ ಹುಡುಗಿ, ವಿಡಿಯೋ ವೈರಲ್​

football
Published on

ಬೆಂಗಳೂರು: ಬರಿಗಾಲಿನಲ್ಲಿ ಅಥವಾ ಶೂ ಹಾಕಿಕೊಂಡು ಫುಟ್​ಬಾಲ್​ನಲ್ಲಿ ಆಡುವವರನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಹುಡುಗಿ ಉದ್ದನೆಯ ಹೀಲ್ಸ್​ ಚಪ್ಪಲಿ ಹಾಕಿಕೊಂಡು ಫುಟ್​ಬಾಲ್​ ಆಡುವ ಮೂಲಕ ಎಲ್ಲರ ಗಮನಸೆಳೆದಿದ್ದಾಳೆ. ಮಿಜೋರಾಂನ ಕ್ರೀಡಾ ಸಚಿವ ರಾರ್ಬಟ್​ ರೊಮವಿಯ ರೊಯ್ಟೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ವೈರಲ್​ ಆಗಿದೆ.

ಐಜ್ವಾಲ್​ನ ಸಿಂಡಿ ರೆಮ್​ರೌಟ್​ಪುಯಿ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹುಡುಗಿಯಾಗಿದ್ದು, ಅಂತರ್ಜಾಲದಲ್ಲಿ ಭಾರಿ ಸಂಚಲನ ಮೂಡಿಸಿದ್ದಾಳೆ. ವಿಶ್ವದೆಲ್ಲೆಡೆ ನಡೆಯುತ್ತಿರುವ ಕೀಪಿ-ಅಪ್ಪಿ ಚಾಲೆಂಜ್​ನ ಅಂಗವಾಗಿ ಸಿಂಡಿ ಈ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಕಪ್ಪು ಬಣ್ಣದ ಹೀಲ್ಸ್​ ಚಪ್ಪಲಿ ಹಾಕಿಕೊಂಡಿರುವ ಸಿಂಡಿ ಚೆಂಡು ನೆಲಕ್ಕೆ ಬೀಳದೆ ಗಾಳಿಯಲ್ಲೇ ಇರುವಂತೆ ನೋಡಿಕೊಂಡಿರುವುದಲ್ಲದೆ, ಹೀಲ್ಸ್​ ಚಪ್ಪಲಿಯಲ್ಲೂ ಬ್ಯಾಲೆನ್ಸ್​ ಮಾಡಿರುವುದು ಅಚ್ಚರಿ ಮೂಡಿಸಿದೆ.

ನನ್ನ ಕ್ಷೇತ್ರದಲ್ಲಿ ಬರುವ ಐಜ್ವಾಲ್​ನ ಪ್ರತಿಭಾನ್ವಿತ ಫುಟ್​ಬಾಲ್​ ಆಟಗಾತಿರ್ ಸಿಂಡಿ ರೆಮ್​ರೌಟ್​ಪುಯಿ ಪೆನ್ಸಿಲ್​ ಹೀಲ್​ ಚಪ್ಪಲಿ ಹಾಕಿಕೊಂಡು ಚೆಂಡಿನೊಂದಿಗೆ ಆಡುತ್ತಿರುವುದನ್ನು ನೋಡಿ. ಫುಟ್​ಬಾಲ್​ ಆಟ ಬರೀ ಹುಡುಗರಿಗೆ ಅಲ್ಲ. ಇದು ಎಲ್ಲರ ಆಟ ಎಂದು ವಿಡಿಯೋದ ಜತೆಗೆ ಬರೆದುಕೊಂಡಿರುವ ರಾರ್ಬಟ್​ ರೊಮವಿಯ, ಭಾರತೀಯ ಫುಟ್​ಬಾಲ್​ ಅನ್ನು ಎಲ್ಲರೂ ಒಟ್ಟಾಗಿ ಮುಂದಕ್ಕೆ ಕೊಂಡೊಯ್ಯೋಣ ಎಂಬ ಹ್ಯಾಷ್​ಟ್ಯಾಗ್​ ನೀಡಿದ್ದಾರೆ. ಸಿಂಡಿ ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲೂ ಹಂಚಿಕೊಂಡು ಫುಟ್​ಬಾಲ್​ ಪ್ರೇಮಿಗಳ ಹುಬ್ಬೇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net