

ಮುಂಬೈ: ನಿನ್ನೆ (ಏ.01) ವಾಂಖಡೆ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಸೋತ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ತೀವ್ರ ಬೇಸರಕ್ಕೆ ಒಳಗಾಗಿದ್ದರು. ತಮ್ಮ ನೆಚ್ಚಿನ ತಂಡ ತವರಿನಲ್ಲಿ ಸೋತಿದ್ದು, ಅಭಿಮಾನಿಗಳಿಗೂ ಸಹ ಅತೀವ ನೋವುಂಟುಮಾಡಿತು. ಆದರೆ, ಇದರ ಬೆನ್ನಲ್ಲೇ ಮತ್ತೊಂದು ಸಂಗತಿ ಮುಂಬೈ ಫ್ಯಾನ್ಸ್ಗೆ ಶಾಕ್ ನೀಡಿದೆ.
ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆದ ಇಶಾನ್ ಕಿಶಾನ್ ಐಪಿಎಲ್ 2024ರ ತಂಡ ನಿರ್ವಹಣೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಇಂಡಿಯನ್ಸ್‌ನಿಂದ ಶಿಕ್ಷೆಗೆ ಒಳಪಟ್ಟ ಮೊದಲ ಕ್ರಿಕೆಟಿಗ ಎಂದು ಹೇಳಲಾಗಿದೆ. ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಇಶಾನ್ ಕಿಶನ್ಗೆ ಸೂಪರ್ ಹೀರೋ ಉಡುಗೆಯನ್ನು ಧರಿಸುವಂತ ಶಿಕ್ಷೆ ನೀಡಲಾಯಿತು.
ಸ್ಕ್ವಾಡ್ ಮುಂಬೈ ವಿಮಾನ ನಿಲ್ದಾಣದಿಂದ ಇಳಿದ ಇಶಾನ್ ಕಿಶನ್, ತನ್ನ ಎದೆಯ ಮೇಲೆ ಎಂಐ ಲೋಗೋದೊಂದಿಗೆ ಇರುವ ತಮಾಷೆಯ ಸೂಪರ್‌ಹೀರೋ ಉಡುಪನ್ನು ಧರಿಸಿರುವುದು ವೈರಲ್ ದೃಶ್ಯದಲ್ಲಿ ಕಂಡುಬಂದಿದೆ. ಕಿಶನ್ ತನ್ನ ಹೊಸ ಉಡುಪಿನಲ್ಲಿ ಟೀಮ್ ಬಸ್‌ನಿಂದ ಹೊರಬಂದ ನಂತರ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಹೋಗುತ್ತಿರುವ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್‌ಮೆಂಟ್ ತಮ್ಮ ತಂಡದ ಆಟಗಾರರು ಅಭ್ಯಾಸಕ್ಕೆ ತಡವಾಗಿ ಬರುವುದು ಅಥವಾ ಹೋಟೆಲ್‌ಗಳಲ್ಲಿ ಕರೆ ಸಮಯಗಳನ್ನು ಅನುಸರಿಸದೆ ಇರದಿರುವುದು ಹೀಗೆ ಮುಂತಾದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಮ್ಮ ಆಟಗಾರರಿಗೆ ಶಿಸ್ತು ಕಲಿಸುವ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದೆ,(ಏಜೆನ್ಸೀಸ್).