More

    ಮಹಿಳೆಯರನ್ನು ಕೀಳಾಗಿ ಕಾಣುವ ಕಾಂಗ್ರೆಸ್, ಬಿಜೆಪಿ ನಾಯಕಿ ಚೈತ್ರಾ ಶಿರೂರ ಆರೋಪ

    ಹುಬ್ಬಳ್ಳಿ: ಪ್ರಸ್ತುತ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಕಾಂಗ್ರೆಸ್ ನಾಯಕರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮುಂದುವರಿಸಿದ್ದು ಖಂಡನೀಯ ಎಂದು ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೈತ್ರಾ ಶಿರೂರ ದೂರಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನದು ಮಹಿಳಾ ವಿರೋಧಿ ನೀತಿಯಾಗಿದೆ. ಇದಕ್ಕೆ ನಾಡಿನ ಮಹಿಳೆಯರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

    ಕಾಂಗ್ರೆಸ್ ನಾಯಕರು ಅನೇಕರು ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಇಳಿದಿರುವ ಕಾಂಗ್ರೆಸ್ ಸರ್ಕಾರ ಪರೀಕ್ಷೆ ಬರೆಯಲು ಹೋದ ಮಹಿಳೆಯರ ಕಾಲುಂಗರ, ತಾಳಿ ತೆಗೆದಿಡಲು ಹೇಳಿತ್ತು. ಹಿಜಾಬ್ ಧರಿಸಲು ಅವಕಾಶ ಕೊಡುವ ಇವರು, ಹಿಂದು ಮಹಿಳೆಯರಿಗೆ ಮಾತ್ರ ಇಲ್ಲದ ನಿಯಮ ರೂಪಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಿಂದು ಸಂಸ್ಕೃತಿಗೆ ಕಾಂಗ್ರೆಸ್ ನವರು ಮಹತ್ವ ನೀಡುವುದಿಲ್ಲ. ಮಹಿಳೆಯರನ್ನು ಅವಮಾನ ಮಾಡುವುದೇ ಅವರ ಕೆಲಸವಾಗಿದೆ. ಇದೆಲ್ಲಕ್ಕೂ ಮಹಿಳೆಯರು ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.

    ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಅವರು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರು ಲಿಂಗಾಯತ ಮುಖಂಡರನ್ನು ತುಳಿದಿಲ್ಲ ಎಂದ ಚೈತ್ರಾ ಶಿರೂರ ಅವರು, ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸುವಷ್ಟು ದೊಡ್ಡವರು ನಾವಲ್ಲ. ಆದರೆ, ಜೋಶಿ ಅವರಿಗೆ ಎಂದಿನಂತೆ ಶ್ರೀಗಳು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುವೆ ಎಂದು ಉತ್ತರಿಸಿದರು.

    ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಾಜಿ ಉಪಮೇಯರ್ ಮೇನಕಾ ಹುರಳಿ, ಸೀಮಾ ಲದ್ವಾ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts