More

    ಇತ್ತೀಚಿನ ದಿನಗಳಲ್ಲಿ ಹಲವರಿಗೆ ಇದೇ ಅನುಭವ! ನಿಮಗೂ ಹೀಗೆ ಆಗ್ತಿದ್ಯಾ?

    ಬೆಂಗಳೂರು: ದೇಶವ್ಯಾಪಿ ಇದೀಗ ಬಿರು ಬೇಸಿಗೆ ಕಾಡಲಾರಂಭಿಸಿದ್ದು, ತಾಪಮಾನದ ಗರಿಷ್ಠತೆ ಹೆಚ್ಚಾದ ಬೆನ್ನಲ್ಲೇ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಬಿಗಿ ವಾತಾವರಣದಲ್ಲಿ ಜೀವಿಸುತ್ತಿರುವ ಜನರಿಗೆ ಒಂದು ವಿಚಿತ್ರ ಹಾಗೂ ಆಶ್ಚರ್ಯಕರ ಅನುಭವ ಸಿಕ್ಕಾಪಟ್ಟೆ ಗೊಂದಲ ಮೂಡಿಸುವಂತೆ ಮಾಡುತ್ತಿದೆ. ಇದು ತಮಗೆ ಮಾತ್ರವೇ? ಅಥವಾ ಅನ್ಯರಿಗೂ ಇದೇ ರೀತಿಯ ಅನುಭವವೇ? ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಅಸಲಿಗೆ ಏನಿದು ಎಂಬ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

    ಇದನ್ನೂ ಓದಿ: ಬಿಜಾಪುರ​ನಲ್ಲಿ ಎನ್​ಕೌಂಟರ್​, ಒಂಬತ್ತು ನಕ್ಸಲರ ಕೊಂದ ಯೋಧರು

    ಸಾಮಾನ್ಯವಾಗಿ ಚಪ್ಪಲಿ ಧರಿಸದೆ, ಒದ್ದೆ ಕೈಯಲ್ಲಿ ಅಥವಾ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿದಾಗ ಕರೆಂಟ್ ಹೊಡೆಯುತ್ತದೆ. ಇದು ನಮ್ಮ ದೇಹದ ಯಾವುದೇ ಭಾಗಕ್ಕೆ ತಗುಲಿದರೂ ಝುಮ್​ ಎಂಬ ಅನುಭವ ಉಂಟಾಗುತ್ತದೆ. ಆದರೆ, ಇದು ವಿದ್ಯುತ್​ ಹರಿದಾಡುವ ಉಪಕರಣಗಳಲ್ಲಿ ಮಾತ್ರ ಇಂತಹ ಅನುಭವ ಉಂಟಾಗಲು ಸಾಧ್ಯ! ಆದ್ರೆ, ಕರೆಂಟ್​ ಸಂಚರಿಸದ ವಸ್ತುಗಳನ್ನು ಮುಟ್ಟಿದರೂ ಇದೇ ರೀತಿಯ ಅನುಭವ ಉಂಟಾಗುತ್ತದೆ ಎಂದರೆ ನಂಬ್ತೀರಾ? ಇಲ್ಲ ಅಂದ್ರೂ ನಂಬಲೇಬೇಕು.

    ಹೌದು, ಇದು ನಿಜವೇ! ಅನೇಕರಿಗೆ ಈ ಅನುಭವ ಖಂಡಿತ ಆಗಿರುತ್ತದೆ. ಯಾವುದಾದರೂ ಸ್ಟೀಲ್​ ವಸ್ತುಗಳನ್ನು, ಸ್ಟೀಲ್​ ನಲ್ಲಿ, ಸ್ಟೀಲ್​ ಮೆಟ್ಟಿಲು, ಕಾರಿನ ಡೋರ್​, ಬಟ್ಟೆಗಳ ತುದಿಯನ್ನು ಮುಟ್ಟಿದರೆ ಥೇಟ್ ಕರೆಂಟ್ ಹೊಡೆದ ಅನುಭವವಾಗುತ್ತದೆ. ಇದು ಹೆಚ್ಚಾಗಿ ಬೆರಳ ತುದಿಯಲ್ಲಿ ಅಂದರೆ ಉಗುರಿನ ತುತ್ತ ತುದಿ ಅಥವಾ ಹಸ್ತದ ತುದಿ ಮೇಲೆ ತಿಳಿಸಿದ ವಸ್ತುಗಳಿಗೆ ಟಚ್ ಆದ್ರೆ ಸಾಕು ಶಾಕ್ ಹೊಡೆದಂತೆ ಝುಮ್ ಅನಿಸುತ್ತದೆ.

    ಇದನ್ನೂ ಓದಿ: ಫಾರ್ಚೂನರ್​ ಕಾರು, 21 ಲಕ್ಷ ರೂ. ಹಣ ಕೊಡಲಿಲ್ಲವೆಂದು ಹೆಣ್ಣು ಮಗುವಿನ ತಾಯಿಯನ್ನು ಹೊಡೆದು ಕೊಂದ ಪತಿ ಮನೆಯವರು

    ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅನುಭವ ಆಗುವುದರಿಂದ ಅನೇಕರಿಗೆ ಇದು ಭಾರೀ ಮುಜುಗರ ಉಂಟುಮಾಡುತ್ತದೆ. ಏಕೆಂದರೆ, ಮಾಲ್​, ಹೋಟೆಲ್​ ಇಂತಹ ಸ್ಥಳಗಳಲ್ಲಿರುವ ಸ್ಟೀಲ್ ವಸ್ತುಗಳನ್ನು ಮಟ್ಟಿದಾಗ ಈ ಅನುಭವವಾಗುತ್ತದೆ. ಇದರಿಂದ ಕೆಲವರು ನಿಜಕ್ಕೂ ಕರೆಂಟ್ ಹೊಡೆದಂತೆ ಬೆಚ್ಚಿ ಬೀಳುತ್ತಾರೆ. ಇದು ನೋಡುಗರಿಗೆ ಇದ್ಯಾಕೆ ಇವರು ಹೀಗೆ ಆಡ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಅನುಭವವನ್ನು ‘ಸ್ಟಾಟಿಕ್ ಎಲೆಕ್ಟ್ರಿಸಿಟಿ’ ಎಂದು ಕರೆಯಲಾಗುತ್ತದೆ.

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts