More

    ಬಿಜಾಪುರ​ನಲ್ಲಿ ಎನ್​ಕೌಂಟರ್​, ಒಂಬತ್ತು ನಕ್ಸಲರ ಕೊಂದ ಯೋಧರು

    ಛತ್ತೀಸ್​ಗಢ: ಬಿಜಾಪುರದ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಭೀಕರ ಎನ್​ಕೌಂಟರ್ ನಡೆದಿದ್ದು, ಘಟನೆಯಲ್ಲಿ ಒಂಬತ್ತು ನಕ್ಸಲರು ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ಐಪಿಎಲ್ ನಕಲಿ ಟಿಕೆಟ್ ಮಾರಾಟ ಜಾಲ ಪತ್ತೆ: ಏಳು ಜನರ ಬಂಧನ 

    ಮಂಗಳವಾರ ಬೆಳಗ್ಗೆ 6 ಗಂಟೆ ವೇಳೆ ನಡೆದ ಎನ್​ಕೌಂಟರ್ ನಲ್ಲಿ ಒಂಬತ್ತು ನಕ್ಸಲರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ. ಛತ್ತೀಗಢ ಬಿಜಾಪುರ ಜಿಲ್ಲೆಯ ಲೆಂಡ್ರಾ ಗ್ರಾಮದ ಬಳಿ ಈ ಎನ್ ಕೌಂಟರ್ ನಡೆದಿದೆ ಎಂದು ತಿಳಿದುಬಂದಿದೆ.

    ಹಿರಿಯ ನಕ್ಸಲ್​ ಪಾಪಾರಾವ್ ನೀಡಿದ ಖಚಿತ ಮಾಹಿತಿ ಮೇರಿಗೆ ಹಾಗೂ ಸ್ಥಳದಲ್ಲಿ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಶೋಧ ಕಾರ್ಯ ಆರಂಭಿಸಿದ್ದವು. ಈ ವೇಳೆ ಅರಣ್ಯ ಪ್ರದೇಶದಲ್ಲಿ ನಕ್ಸಲರು ಎದುರಾಗಿದ್ದು, ಗುಂಡಿನ ದಾಳಿ ಆರಂಭಿಸಿದ್ದಾರೆ ಎಂದು ಬಸ್ತಾರ್ ಐಜಿ ಸುಂದರರಾಜ್ ಹೇಳಿದ್ದಾರೆ.ಹತ್ವದ ಮಾಹಿತಿ ನೀಡಿದಕ್ಕೆ ರಾವ್ ಅವರಿಗೆ 40 ಲಕ್ಷಕ್ಕೂ ಹೆಚ್ಚು ಬಹುಮಾನ ಘೋಷಿಸಲಾಗಿದೆ.

    ಈ ಬೃಹತ್ ಕಾರ್ಯಾಚರಣೆಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್, ವಿಶೇಷ ಕಾರ್ಯಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಸಿಬ್ಬಂದಿ ಪಾಲ್ಗೊಂಡಿದ್ದರು. ಎನ್‌ಕೌಂಟರ್ ನಂತರ ಭದ್ರತಾ ಸಿಬ್ಬಂದಿ ಲಘು ಮೆಷಿನ್ ಗನ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಹಲವಾರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ಬಸ್ತಾರ್ ಪ್ರದೇಶದಲ್ಲಿರುವ ಬಿಜಾಪುರವು ಮಾವೋವಾದಿಗಳ ಚಟುವಟಿಕೆಯ ಕೇಂದ್ರವಾಗಿದೆ. ಈ ವರ್ಷ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಸುಮಾರು 41 ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
    ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಈ ಎನ್‌ಕೌಂಟರ್ ನಡೆದಿದೆ. ಬಸ್ತಾರ್ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

    ನಕ್ಸಲರು ತಮ್ಮ ಟ್ಯಾಕ್ಟಿಕಲ್ ಕೌಂಟರ್ ಆಫೆನ್ಸಿವ್ ಕ್ಯಾಂಪೇನ್ (TCOC) ಅನ್ನು ನಡೆಸಿದಾಗ ಮಾರ್ಚ್‌ನಿಂದ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸುತ್ತಾರೆ. ಮಾರ್ಚ್ ನಿಂದ ಜೂನ್ ಅವಧಿಯಲ್ಲಿ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಹಲವಾರು ದಾಳಿಗಳು ದಾಖಲಾಗಿವೆ.
    ಕಳೆದ ತಿಂಗಳು ಬಿಜಾಪುರದ ಬಸಗುಡ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಹತರಾಗಿದ್ದರು.

    ಆಸ್ಪತ್ರೆಗೆ ದಾಖಲಾದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts