More

    ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್‌ಗೆ 29 ಮಾವೋವಾದಿಗಳ ಬಲಿ

    ರಾಯಪುರ: ಮೊದಲ ಹಂತದ ಲೋಕಸಭೆ ಚುನಾವಣೆಗೆ ಮುನ್ನ ಛತ್ತೀಸಗಢದಲ್ಲಿ ದಾಳಿ ಮಾಡಲು ಮುಂದಾದ ಮಾವೋವಾದಿ ಗುಂಪಿನ ಮೇಲೆ ಭದ್ರಯಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದೆ.

    ಇದನ್ನೂ ಓದಿ: ಕಾಂಗ್ರೆಸ್​ ವಿರುದ್ಧ ಎಫ್​ಐಆರ್ ದಾಖಲಿಸಿದ ಬಾಲಿವುಡ್​ ನಟ ಅಮೀರ್ ಖಾನ್..! ಕಾರಣ ಹೀಗಿದೆ?

    ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಕಂಕೇರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ ದಾಳಿಯಲ್ಲಿ ಭದ್ರತಾಪಡೆಗಳು ಕನಿಷ್ಠ 18 ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ. ಎಂಟು ಮಾವೋವಾದಿಗಳನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಮೂವರು ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    18 ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಘಟನಾ ಸ್ಥಳದಲ್ಲಿ 4 ಎಕೆ-47 ಅಸಾಲ್ಟ್ ರೈಫಲ್‌ಗಳು ಶಸ್ತ್ರಾಸ್ತ್ರಗಳನ್ನು ವಶಕ್ಕರ ಪಡೆಯಲಾಗಿದೆ.

    ಈ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ಐಕೆ ಎಲೆಸೆಲಾ, ಬಿಸ್ತಾರ ಪ್ರದೇಶದ ಬಿನಗುಂದ ಮತ್ತು ಕೊರೊನಾರ್ ಗ್ರಾಮಗಳ ನಡುವಿನ ಹಪಟೋಲಾ ಅರಣ್ಯದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಬಿಎಸ್​ಎಫ್​ ಮತ್ತು ರಾಜ್ಯ ಮೀಸಲು ಪಡೆ ಜಂಟಿ ತಂಡ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಚರಣೆಯು ಮುಂದವರೆದಿದೆ ಎಂದು ತಿಳಿಸಿದ್ದಾರೆ.

    ಇನ್ನು ಮಾವೋವಾದಿಗಳ ಪೈಕಿ ನಾಯಕನಂತೆ ಗುರುತಿಸಿಗೊಂಡಿದ್ದ ಮಾವೋವಾದಿ ನಾಯಕ ಶಂಕರ್ ರಾವ್ ಸೇರಿದ್ದಾರೆ ಎಂದು ಕಾರ್ಯಾಚರಣೆ ಬಗ್ಗೆ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಂಕೇರ್ ಜಿಲ್ಲೆಯಲ್ಲಿ ಎಪ್ರಿಲ್ 26 ರಂದು ಲೋಕಸಭಾ ಚುನಾವಣೆ ನಡೆಯಲಿದೆ.

    ಗಾಯಗೊಂಡ ಸೈನಿಕರಿಗೆ ಕಾಡಿನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಕಳೆದ ನಾಲ್ಕು ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 72 ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ನಡೆದ ಛತ್ತೀಸ್‌ಗಢ ಮೊದಲ ಹಂತದ ಮತದಾನದ ವೇಳೆ ಇದೇ ಭಾಗದಲ್ಲಿ ಮಾವೋವಾದಿಗಳು ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಸದ್ಯ ಸಾರ್ವತ್ರಿಕ ಚುನಾವಣೆಗೂ ಮುನ್ನ ಮತ್ತೊಂದು ದಾಳಿ ನಡೆದಿದೆ.

    ವೈದ್ಯರ ಸಮಾಲೋಚನೆಗೆ ಅನುಮತಿ ಕೋರಿದ ಅರವಿಂದ್​ ಕ್ರೇಜಿವಾಲ್​:ಕೋರ್ಟ್ ಹೇಳಿದಿಷ್ಟು..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts