More

    ವೈದ್ಯರ ಸಮಾಲೋಚನೆಗೆ ಅನುಮತಿ ಕೋರಿದ ಅರವಿಂದ್​ ಕ್ರೇಜಿವಾಲ್​:ಕೋರ್ಟ್ ಹೇಳಿದಿಷ್ಟು..?

    ನವದೆಹಲಿ: ಮದ್ಯನೀತಿ ಹಗರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿಯಮಿತವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರನ್ನು ಸಮಾಲೋಚನೆ ನಡೆಸಲು ಅನುಮತಿ ಕೋರಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಕೋರ್ಟ್​ ಮಂಗಳವಾರ ನಿರ್ದೇಶನ ನೀಡಿದೆ.

    ಇದನ್ನೂ ಓದಿ: ಚುನಾವಣಾ ಬಾಂಡ್​: ಪ್ರಧಾನಿ ಮೋದಿ ವಿರುದ್ಧ ಕೇರಳದಲ್ಲಿ ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ!

    ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಿದ್ದು. ಈ ಕುರಿತು ತಮ್ಮ ವೈದ್ಯರನ್ನು ನಿರಂತರ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಕ್ರೇಜಿವಾಲ್ ಅವರು ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶ ರಾಕೇಶ್ ಸೈಲ್ ಅವರ ಬಳಿ ಕೋರಿದ್ದಾರೆ. ಈ ಕುರಿತು ಏಪ್ರಿಲ್ 18ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಧೀಶ ಸಿಯಾಲ್ ಆದೇಶಿಸಿದ್ದಾರೆ.

    ಅರವಿಂದ್ ಕ್ರೇಜಿವಾಲ್ ಮನವಿಗೆ ಆಕ್ಷೇಪ ಸಲ್ಲಿಸಿದ ಇಡಿ ಪರ ವಕೀಲರು ಆರೋಗ್ಯ ಸಮಸ್ಯೆ ಇರುವವರಿಗೆ ಸೂಕ್ತ ಚಿಕಿತ್ಸೆ ನೀಡಲು ಜೈಲಿನೊಳಗೆ ಅಗತ್ಯವಾದ ಸೌಲಭ್ಯಗಳಿವೆ. ಅವರು ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬಹುದುದು ಎಂದು ತಿಳಿಸಿದ್ದಾರೆ.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಜ್ರಿವಾಲ್ ಪರ ವಕೀಲರು, “ಕೇಜ್ರಿವಾಲ್ ಅವರು ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರೆ ಇಡಿ ಏಕೆ ವಿರೋಧಿಸುತ್ತಿದೆ?” ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರಿಗೆ ವರ್ಚುವಲ್ ಸಮಾಲೋಚನೆಗೆ ಅವಕಾಶ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ವಿಚಾರಣೆ ಮುಂದಿನ ಗುರುವಾರ, ಏಪ್ರಿಲ್ 18 ರಂದು ನಡೆಯಲಿದೆ.

    ಕಾಂಗ್ರೆಸ್​ ವಿರುದ್ಧ ಎಫ್​ಐಆರ್ ದಾಖಲಿಸಿದ ಬಾಲಿವುಡ್​ ನಟ ಅಮೀರ್ ಖಾನ್..! ಕಾರಣ ಹೀಗಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts