More

    ಚುನಾವಣಾ ಬಾಂಡ್​: ಪ್ರಧಾನಿ ಮೋದಿ ವಿರುದ್ಧ ಕೇರಳದಲ್ಲಿ ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ!

    ಕೋಝಿಕ್ಕೋಡ್​: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೆಲವು ಶ್ರೀಮಂತ ಉದ್ಯಮಿಗಳ ಸಾಧನ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

    ಇದನ್ನೂ ಓದಿ: ದೇವೇಗೌಡರಿಗೂ ತಟ್ಟಿದ ಎಚ್​ಡಿಕೆ ದಾರಿ ತಪ್ಪಿದ ಹೇಳಿಕೆ: ಕಾಂಗ್ರೆಸ್​ ಮಹಿಳಾ ಕಾರ್ಯಕರ್ತೆಯರ ಹೈಡ್ರಾಮಾ

    ಏಪ್ರಿಲ್ 16 (ಮಂಗಳವಾರ) ರಂದು ಕೇರಳದ ಕೋಝಿಕ್ಕೋಡ್‌ನಲ್ಲಿ ಚುನಾವಣಾ ಬೃಹತ್​ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವುದು, ಭಾರತದ ಶ್ರೀಮಂತ ಉದ್ಯಮಿಗಳನ್ನು ರಕ್ಷಿಸುವುದು ಮತ್ತು ಅವರ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದು ಮೋದಿ ಅವರ ಕೆಲಸ ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು.

    ಮೋದಿ ಭಾರತದ ಐದು ಅಥವಾ ಆರು ದೊಡ್ಡ, ಶ್ರೀಮಂತ ಉದ್ಯಮಿಗಳ ಸಾಧನ. ದೇಶದ 20-25 ಜನರಿಗೆ ಸುಮಾರು 16 ಲಕ್ಷ ಕೋಟಿಗಳನ್ನು ನೀಡಿದ್ದಾರೆ ಎಂದು ವಯನಾಡು ಹಾಲಿ ಸಂಸದರು ಪ್ರತಿಪಾದಿಸಿದರು.

    ಮೋದಿ ಅವರು ವಿವಾದಿತ ಚುನಾವಣಾ ಬಾಂಡ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಬಾಂಡ್‌ನ ನಿಜವಾದ ವಿಷಯ ಗೊತ್ತಾದ್ರೆ ವಿಷಾದ ವ್ಯಕ್ತಪಡಿಸಬೇಕಾಗುತ್ತದೆ ಎಂದಿದ್ದರು. ಮೋದಿ ಅವರ ಸಂದರ್ಶನದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಸಂದರ್ಶನದಲ್ಲಿ ಮೋದಿ ಅವರ ಕಣ್ಣುಗಳಲ್ಲಿ ಭಯ ಎದ್ದು ಕಾಣುತ್ತಿತ್ತು ಎಂದಿದ್ದಾರೆ.

    ಚುನಾವಣಾ ಬಾಂಡ್ ಜನರ ಮೇಲೆ ಒತ್ತಡ ಹೇರುವ ಮಾರ್ಗ ಎಂದರು. ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಪ್ರಬಲ ಸರ್ಕಾರಿ ಸಂಸ್ಥೆಗಳನ್ನು ಉದ್ಯಮಿಗಳನ್ನು ಬೆದರಿಸಲು ಬಳಸಲಾಗುತ್ತದೆ. ಮಲಯಾಳಂನಲ್ಲಿ ಸುಲಿಗೆಯನ್ನು ‘ಕೊಳ್ಳ ಅಡಿಕ್ಕಲ್’ (ಲೂಟಿ) ಎಂದು ಕರೆಯುತ್ತೀರಿ, ಆದರೆ ಮೋದಿ ಇದನ್ನು ಚುನಾವಣಾ ಬಾಂಡ್‌ಗಳು ಎಂದು ಕರೆಯುತ್ತಾರೆ ಎಂದು ಟೀಕಿಸಿದರು.

    ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರದ ನಿಟ್ಟಿನಲ್ಲಿ ಕೊಡಿಯತ್ತೂರಿನಿಂದ ಬೃಹತ್ ರೋಡ್ ಶೋ ನಡೆಸಿದರು. ವಯನಾಡಿನಿಂದ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆಯಲ್ಲಿರುವ ಹಾಲಿ ಸಂಸದ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಎರಡನೇ ಬಾರಿಗೆ ಕ್ಷೇತ್ರಕ್ಕೆ ಬಂದಿದ್ದಾರೆ.

    2019 ರ ಲೋಕಸಭಾ ಚುನಾವಣೆಯಲ್ಲಿ ಅವರು ವಯನಾಡ್‌ನಿಂದ 4,31,770 ಮತಗಳ ದಾಖಲೆಯ ಅಂತರದಿಂದ ಗೆದ್ದಿದ್ದರು. ಕೇರಳದ 20 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.

    ಸಂವಿಧಾನ ಬದಲಿಸುವ ಪ್ರಶ್ನೆಯೇ ಇಲ್ಲ: ಶೇ.90ರಷ್ಟು ಸನಾತನಿಗಳಿಂದಲೇ ಸಂವಿಧಾನ ರಚನೆಯಾಗಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts