More

    ಸಂವಿಧಾನ ಬದಲಿಸುವ ಪ್ರಶ್ನೆಯೇ ಇಲ್ಲ: ಶೇ.90ರಷ್ಟು ಸನಾತನಿಗಳಿಂದಲೇ ಸಂವಿಧಾನ ರಚನೆಯಾಗಿದೆ!

    ಪಾಟ್ನಾ: ಸನಾತನ ಧರ್ಮವನ್ನು ಟೀಕಿಸುವವರಿಗೆ ಗೊತ್ತಿರಲಿ, ಶೇ.90ರಷ್ಟು ಸನಾತನಿಗಳೇ ಸಂವಿಧಾನವನ್ನು ರಚಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

    ಇದನ್ನೂ ಓದಿ: ದೇವೇಗೌಡರಿಗೂ ತಟ್ಟಿದ ಎಚ್​ಡಿಕೆ ದಾರಿ ತಪ್ಪಿದ ಹೇಳಿಕೆ: ಕಾಂಗ್ರೆಸ್​ ಮಹಿಳಾ ಕಾರ್ಯಕರ್ತೆಯರ ಹೈಡ್ರಾಮಾ

    ಮೋದಿ ಅವರು ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಲಿದೆ, ಸಂವಿಧಾನ ಬದಲಿಸಲಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಬಿಹಾರದ ಗಯಾದಲ್ಲಿ ನಡೆದ ಪ್ರತ್ಯುತ್ತರ ನೀಡಿದರು. ಭಾರತದ ಸಂವಿಧಾನವನ್ನು ರಚಿಸಿದ ಸಂವಿಧಾನ ಸಭೆಯಲ್ಲಿ ಶೇ.80, 90% ಜನರು ಸನಾತನಿಗಳಾಗಿದ್ದರು. ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನೆಯಲ್ಲಿ ಪ್ರಮುಖರಾಗಿದ್ದರು. ಡಾ. ಬಿ.ಆರ್​ ಅಂಬೇಡ್ಕರ್ ಅವರು ಕರಡು ರಚಿಸಿದ್ದಾರೆ. ಸಂವಿಧಾನ ರಚನೆ ಸಭೆಯಲ್ಲಿ ಸನಾತನಿಗಳು ಶ್ರೇಷ್ಠ ಸಂವಿಧಾನವನ್ನು ರಚಿಸಲು ಅಂಬೇಡ್ಕರ್ ಅವರನ್ನು ಬೆಂಬಲ ನೀಡಿದ್ದಾರೆ ಎಂಬುದನ್ನು ಎಚ್ಚರಿಕೆಯಿಂದ ಆಲಿಸಬೇಕು ಎಂದು ಮೋದಿ ಹೇಳಿದರು.

    ಸಂವಿಧಾನವನ್ನು ರಾಜಕೀಯ ಶಕ್ತಿಯನ್ನಾಗಿ ಬಳಸಿಕೊಳ್ಳಲು ಮತ್ತು ಜನರನ್ನು ಬೆದರಿಸುವ ಮತ್ತು ಹೆದರಿಸುವ ಉದ್ದೇಶದಿಂದ ಕಳೆದ ಮೂರು ದಶಕಗಳಿಂದ ವಿಕೃತ ನಿರೂಪಣೆಗಳನ್ನು ಹರಡಲು ಬಯಸುವವರು ಬಿಜೆಪಿ ಮತ್ತು ಆರೆಸ್ಸೆಸ್ ಅಧಿಕಾರಕ್ಕೆ ಬಂದರೆ ದೇಶವು ಸುಟ್ಟುಹೋಗುತ್ತದೆ ಮತ್ತು ಉಳಿಯುವುದಿಲ್ಲ ಎಂದು ಪ್ರಧಾನಿ ಹೇಳಿದರು.

    ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಕೂಡ ಭಾರತದ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಸುಳ್ಳುಗಳನ್ನು ಹರಡುವುದನ್ನು ನಿಲ್ಲಿಸಿ. ಸಂವಿಧಾನವನ್ನು ಅವಮಾನಿಸುವವರಿಗೆ ಸಾರ್ವಜನಿಕ ಜೀವನದಲ್ಲಿ ಉಳಿಯುವ ಹಕ್ಕಿಲ್ಲ ಎಂದು ಗುಡುಗಿದರು.

    ಸಂವಿಧಾನ ದಿವಸ್ ಆಚರಿಸಲು ನಾನು ಸಂಸತ್ತಿಗೆ ಪ್ರಸ್ತಾವನೆಯನ್ನು ತಂದಾಗ, ಕಾಂಗ್ರೆಸ್​ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಣರಾಜ್ಯೋತ್ಸವನ್ನು ಆಚರಿಸಬೇಕಾದರೆ ಅದರ ಅಗತ್ಯವೇನು ಎಂದು ವಾದಿಸುವ ಮೂಲಕ ಅದನ್ನು ವಿರೋಧಿಸಿದರು ಎಂದು ಟೀಕಿಸಿದರು.

    ಏತನ್ಮಧ್ಯೆ, ಜಾಗತಿಕ ಅಸ್ಥಿರತೆಯಿಂದಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಬಲಿಷ್ಠ ಸರ್ಕಾರ ಅಗತ್ಯವಿದೆ ಎಂದು ಮೋದಿ ಪ್ರತಿಪಾದಿಸಿದರು. ಚುನಾವಣೆಯಲ್ಲಿ ಔರಂಗಾಬಾದ್‌ನ ಬಿಜೆಪಿ ಅಭ್ಯರ್ಥಿ ಸುಶೀಲ್ ಕುಮಾರ್ ಸಿಂಗ್ ಮತ್ತು ಎನ್‌ಡಿಎ ಮಿತ್ರ ಜಿತನ್ ರಾಮ್ ಮಾಂಝಿ ಅವರನ್ನು ಗೆಲ್ಲಿಸುವಂತೆ ಮೋದಿ ಮನವಿ ಮಾಡಿದರು.

    ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ: ಚುನಾವಣಾ ಬಾಂಡ್ ರದ್ದತಿ ಬಗ್ಗೆ ಪ್ರಧಾನಿ ಮೋದಿ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts