More

  ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ: ಚುನಾವಣಾ ಬಾಂಡ್ ರದ್ದತಿ ಬಗ್ಗೆ ಪ್ರಧಾನಿ ಮೋದಿ ಟೀಕೆ

  ನವದೆಹಲಿ: ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿನ ಅನ್ವಯ ಫೆಬ್ರವರಿಯಲ್ಲಿ ರದ್ದು ಪಡಿಸಿರುವುದಕ್ಕೆ ಮುಂದೆ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: ನಟ ಶಿವರಾಜ್​ಕುಮಾರ್​ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಆಸ್ತಿ ಮೌಲ್ಯ, ಸಾಲದ ಬಗ್ಗೆ ಇಲ್ಲಿದೆ ಮಾಹಿತಿ..

  ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಮೋದಿ ಅವರು, ಚುನಾವಣಾ ಬಾಂಡ್ ಯೋಜನೆ ರದ್ದತಿಯಿಂದಾಗಿ ಕಪ್ಪು ಹಣವನ್ನು ಪ್ರೋತ್ಸಾಹಿಸಿದಂತಾಗಿದೆ. ಈ ಯೋಜನೆ ಬಗ್ಗೆ ವಿರೋಧ ಪಕ್ಷಗಳು ಸುಳ್ಳನ್ನು ಹಬ್ಬಿಸುತ್ತಿವೆ. ಪ್ರಾಮಾಣಿಕವಾಗಿ ಯೋಚಿಸಿದಾಗ ಪ್ರತಿಯೊಬ್ಬರೂ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

  ತಮ್ಮ ಸರ್ಕಾರ ಪ್ರಾರಂಭಿಸಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯು ‘ಕಪ್ಪುಹಣ’ದ ಬಳಕೆಯ ವಿರುದ್ಧ ಹೋರಾಡಲು ಉದ್ದೇಶಿಸಿತ್ತು ಎಂದ ಅವರು, ಚುನಾವಣಾ ಸಮಯದಲ್ಲಿ ‘ಕಪ್ಪುಹಣ’ಕ್ಕೆ ಕಡಿವಾಣ ಹಾಕಲು ತಮ್ಮ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿತ್ತು ಎಂದರು.

  ಕಪ್ಪುಹಣವು ಚುನಾವಣಾ ಸಮಯದಲ್ಲಿ ಅಪಾಯಕಾರಿ ಆಟಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಈ ಕುರಿತು ನಮ್ಮ ದೇಶದಲ್ಲಿ ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ. ಕಪ್ಪು ಹಣವನ್ನು ಎಲ್ಲರೂ ಚುನಾವಣೆಯಲ್ಲಿ ಖರ್ಚು ಮಾಡುತ್ತಾರೆ. ಇದನ್ನೂ ಬಿಜೆಪಿ ಸೇರಿ ಯಾರೂ ನಿರಾಕರಿಸುವುದಿಲ್ಲ. ಎಲ್ಲ ಪಕ್ಷಗಳು ಅದರ ಎಲ್ಲಾ ಅಭ್ಯರ್ಥಿಗಳು ಖರ್ಚು ಮಾಡುತ್ತಾರೆ. ಈ ಹಣವನ್ನು ಏನಾದರೂ ಮಾಡಿ ಪಾರದರ್ಶಕ ಮಾಡಲು ಪ್ರಯತ್ನಿಸಲು ನಾನು ಬಯಸಿದ್ದೆ ಎಂದು ಪ್ರಧಾನಿ ಮೋದಿ ಹೇಳಿದರು.

  ಚುನಾವಣಾ ಬಾಂಡ್​ಗಳ ಮೂಲಕ ಖಾಸಗಿ ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸಂಪೂರ್ಣ ಅನಾಮಧೇಯ ದೇಣಿಗೆ ನೀಡಬಹುದಿತ್ತು, ಚುನಾವಣಾ ಬಾಂಡ್‌ಗಳ ಯೋಜನೆ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ನಿಂದ ರದ್ದುಗೊಳಿಸಲಾಯಿತು.

  See also  ಹಿಂದುಳಿದ ವರ್ಗದ ಜನರನ್ನು ಸಂಘಟಿಸಿ

  ಇದನ್ನು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ನಿಂದ ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಈ ಯೋಜನೆಯು ಎರಡು ಅಂಶಗಳಲ್ಲಿ ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಇದು ಜನರ ಮಾಹಿತಿ ಹಕ್ಕು ಮತ್ತು ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ. ಖರೀದಿದಾರರು ಮತ್ತು ಫಲಾನುಭವಿಗಳ ಬಗ್ಗೆ ಡೇಟಾವನ್ನು ಬಿಡುಗಡೆ ಮಾಡುವಂತೆ ಬಾಂಡ್‌ಗಳ ಏಕೈಕ ಮಾರಾಟದ ಕೇಂದ್ರವಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು.

   

  T20 World Cup: ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಮನೋಜ್ ತಿವಾರಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts