More

    ಐಪಿಎಲ್ ನಕಲಿ ಟಿಕೆಟ್ ಮಾರಾಟ ಜಾಲ ಪತ್ತೆ: ಏಳು ಜನರ ಬಂಧನ

    ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ 17 ಆವೃತ್ತಿಯ ನಕಲಿ ಟಿಕೆಟ್​ಗಳನ್ನು ನಕಲಿ ವೆಬ್​​ಸೈಟ್​ ಮೂಲಕ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಮುಂಬೈ ಕ್ರೈಂ ಬ್ರಾಂಚ್‌ನ ದಕ್ಷಿಣ ವಲಯ ಸೈಬರ್ ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ಆಪರೇಷನ್‌ಗೆ ರಿವರ್ಸ್ ಆಪರೇಷನ್ ಮಾಡಿ ಎಚ್​ಡಿಕೆ! ಕಾಂಗ್ರೆಸ್​ ಮಾಜಿ ಶಾಸಕ ಜೆಡಿಎಸ್​ಗೆ!

    ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಗುಜರಾತ್‌ನಿಂದ ಏಳು ಜನರನ್ನು ಬಂಧಿಸಲಾಗಿದೆ. ನಕಲಿ ವೆಬ್ ಪೇಜ್ ಲಿಂಕ್ ಮೂಲಕ ಈ ಜನರು ಟಿಕೆಟ್ ಮಾರಾಟ ಮಾಡಿರುವ ಬಗ್ಗೆ ಅಧಿಕಾರಿಗಳು ಸದ್ಯ ತನಿಖೆ ನಡೆಸುತ್ತಿದ್ದಾರೆ.

    ಈ ಸಂಬಂಧ ಗುಜರಾತ್ ಮೂಲದ ಜಾಸ್ಮಿನ್ ಗಿರ್ಧರ್ಭಾಯಿ (22), ಹಿಮ್ಮತ್ ರಮೇಶಭಾಯ್ (35), ಖುಶಾಲ್ ರಮೇಶ್‌ಭಾಯ್ (24), ಭಾರ್ಗವ್ ಕಿಶೋರಭಾಯ್ (22), ಉತ್ತಮ್ ಮನ್ಸುಖ್​ ಭಾಯಿ (21), ನಿಕುಂಜ್ ಭೂಪತಭಾಯ್ (27) ಮತ್ತು ಅರವಿಂದಭಾಯ್ (25) ಈ ಆರೋಪಿಗಳನ್ನು ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ಐಪಿಎಲ್ ನಕಲಿ ಟಿಕೆಟ್ ಮಾರಾಟ ಜಾಲ ಪತ್ತೆ: ಏಳು ಜನರ ಬಂಧನ

    ದಕ್ಷಿಣ ವಲಯದ ಸೈಬರ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಿಗ್ ಟ್ರೀ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಅನಿಲ್ ಮಖಿಜಾ (66) ಅವರು ಅಪರಿಚಿತ ವ್ಯಕ್ತಿಯೊಬ್ಬರು ನಕಲಿ ವೆಬ್ ಪುಟ ಲಿಂಕ್ ಅನ್ನು ರಚಿಸುವ ಮೂಲಕ ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಎಂದು ಮುಂಬೈನ ದಕ್ಷಿಣ ವಿಭಾಗದ ಸೈಬರ್ ವಿಭಾಗಕ್ಕೆ ದೂರು ನೀಡಿದ್ದರು.

    ದಕ್ಷಿಣ ವಲಯದ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ತಕ್ಷಣ, ಸೈಬರ್ ಪೊಲೀಸರು ಮತ್ತು ಅಪರಾಧ ಗುಪ್ತಚರ ಘಟಕ (ಸಿಐಯು) ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಗುಜರಾತ್‌ನ ಸೂರತ್‌ನಿಂದ ನಕಲಿ ವೆಬ್‌ಪುಟದ ಲಿಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಸಿಐಯು ಪತ್ತೆ ಮಾಡಿದೆ. ಸಿಐಯು ತಂಡ ಸೂರತ್‌ಗೆ ತೆರಳಿ ಆರೋಪಿ ಖುಶಾಲ್ ರಮೇಶ್‌ಭಾಯ್ ದೊಬಾರಿಯಾ (24)ನನ್ನು ಬಂಧಿಸಿದೆ.

    ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಏಪ್ರಿಲ್ 3 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಸ್ಪತ್ರೆಗೆ ದಾಖಲಾದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts