ಪ್ಲೀಸ್ ನನ್ನ ಉಂಗುರ ಹುಡುಕಿಕೊಡಿ..! ರೀಲ್ಸ್​ ಮಾಡಲು ಹೋಗಿ 70,000 ದ ರಿಂಗ್​ ಕಳೆದುಕೊಂಡ ಯುವತಿ; ವಿಡಿಯೋ ವೈರಲ್​! Instagram Reels

ಇನ್​​​ಸ್ಟಾಗ್ರಾಮ್​ ರೀಲ್ಸ್​​ಗೆ 70,000 ದ ಉಂಗುರ ಕಳೆದುಕೊಂಡ ಯುವತಿ
ಇನ್​​​ಸ್ಟಾಗ್ರಾಮ್​ ರೀಲ್ಸ್​​ಗೆ 70,000 ದ ಉಂಗುರ ಕಳೆದುಕೊಂಡ ಯುವತಿ
Published on

ಪ್ರಮುಖ ಮುಖ್ಯಾಂಶಗಳು

  • ಇನ್​​​ಸ್ಟಾಗ್ರಾಮ್​ ರೀಲ್ಸ್​​ಗೆ 70,000 ದ ಉಂಗುರ ಕಳೆದುಕೊಂಡ ಯುವತಿ
  • ಕ್ರಿಕೆಟ್​ ನೋಡಲು ಹೋಗಿ ರಿಂಗ್​ ಲಾಸ್ಟ್​ ಎಂದು ಫೋಸ್ಟ್​
  • ಸಾಮಾಜಿಕ ಜಾಲತಾಣದಲ್ಲಿ ವಿಡೊಯೋ ವೈರಲ್​
ಐಪಿಎಲ್​: ಭಾರತದ ಕ್ರಿಕೆಟ್​ ಉತ್ಸವವಾದ ಐಪಿಎಲ್​ ಟೂರ್ನಿ ಈಗಾಗಲೇ ಆರಂಭಗೊಂಡಿದ್ದು, ಇಲ್ಲಿವರೆಗೆ ಸುಮಾರು 22 ಪಂದ್ಯಗಳು ಮುಗಿದಿದ್ದು, ಇನ್ನೂ ಸಾಕಷ್ಟು ಪಂದ್ಯಗಳು ಮುಂದಿನ ದಿನ ನಡೆಯಲಿದೆ. ಆದರೆ ಮೈದಾನದಲ್ಲಿ ಪಂದ್ಯಾವಳಿ ನಡೆಯುತ್ತಿದ್ದರೆ ಸ್ಟಾಂಡ್ಸ್​ನಲ್ಲಿ ನಿಂತಿರುವ ಜನರು ಕ್ರಿಕೆಟ್​ ನೋಡುವ ಬದಲು ರೀಲ್ಸ್ (Instagram Reels) ಮಾಡುವುದರಲ್ಲಿಯೇ ನಿರತರಾಗಿರುವುದು ಬೇಸರದ ಸಂಗತಿಯಾಗಿದೆ.

70,000 ಕಳೆದು ಕೊಂಡ ಯುವತಿ!

ಎಪ್ರಿಲ್​ 11 ಶನಿವಾರ ಸನ್​ರೈಸರ್ಸ ಹೈದರಾಬಾದ್​ ಮತ್ತು ಪಂಜಾಬ್​ ಕಿಂಗ್ಸ್​ ನಡುವಿನ ಪಂದ್ಯವನ್ನು ವೀಕ್ಷಿಸಲು ಮುಲ್ಲನ್ಪುರ್ ಕ್ರಿಕೆಟ್ ಸ್ಟೇಡಿಯಂಗೆ ಬಂದ ಯುವತಿಯೊಬ್ಬಳು ಪಂದ್ಯವನ್ನು ವೀಕ್ಷಿಸುವ ಬದಲು ಇನ್​ಸ್ಟಾಗ್ರಾಮ್​ ರೀಲ್ಸ್​ ಮಾಡಲು ಮುಂದಾಗಿದ್ದಾಳೆ. ವಿಡಿಯೋನಲ್ಲಿ ಉಂಗುರವನ್ನು ಗಾಳಿಯಲ್ಲಿ ಚಿಮ್ಮಿ ಹಿಡಿಯಲು ಹೋಗಿ ಉಂಗುರವನ್ನು ಬೀಳಿಸಿ ಕೊಂಡಿದ್ದಾಳೆ. ನಂತರ ಎಷ್ಟು ಹುಡುಕಿದರೂ ಆ ಉಂಗುರ ಸಿಗದೆ ಯುವತಿ ಕಂಗಾಲಾಗಿದ್ದಾಳೆ.

ಉಂಗುರವನ್ನು ಹುಡುಕಿಕೊಡಿ.. ಪ್ಲೀಸ್​

ಉಂಗುರವನ್ನು ಕಳೆದುಕೊಂಡ ಹುಡುಗಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನನ್ನ ಉಂಗುರ ಕ್ರೀಡಾಂಗಣದಲ್ಲಿ ಕಳೆದು ಹೋಗಿದೆ ಅದು ಸುಮಾರು 70,000 ಮೌಲ್ಯವುಳ್ಳ ಉಂಗುರ ದಯವಿಟ್ಟು ಯಾರಿಗಾದರೂ ದೊರಕಿದರೆ ನನ್ನನ್ನು ಸಂಪರ್ಕಿಸಿ ಎಂದು ಹೇಳಿದ್ದಾಳೆ.

ನೆಟ್ಟಿಗರು ಏನಂತಾರೆ?

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ಯುವತಿಗೆ ಸಹಾನುಭೂತಿ ತೋರಿಸುವ ಬದಲು ಕಾಲೆಳೇಯುವ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.
ಸ್ಟೇಡಿಯಂಗೆ ಹೋದೆವಾ, ಮ್ಯಾಚ್​ ನೋಡಿದೆವಾ, ಮನೆಗೆ ಬಂದೆವಾ ಸಾಕು; ಈ ರೀಲ್ಸ್​​ ಶೋಕಿಯೆಲ್ಲಾ ಏಕೆ ಬೇಕು? ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ. ಅಲ್ಲ ತಾಯಿ ನಿನಗೆ ಉಂಗುರವನ್ನು ಕ್ಯಾಚ್​ ಹಿಡಿಯಲು ಬರದಿದ್ದರೆ ಅದನ್ನು ಗಾಳಿಯಲ್ಲೆ ಏಕೆ ಎಸೆದೆ? ಈಗ ಅನುಭವಿಸು ಎಂದು ಇನ್ನೊಬ್ಬರು ಹೇಳಿದ್ದಾರೆ. ಆ ಉಂಗುರ ಯಾರಿಗಾದರೆ ದೊರೆತರೂ ಅವರು ನಿನಗೆ ವಾಪಸ್​ ನೀಡುವುದು ಸುಳ್ಳೆಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net