ಮಹಿಳಾ ಮೀಸಲಾತಿ ಬೋಗಸ್​ ಬಿಲ್​: ಇದು ಸಂವಿಧಾನದ ಮೇಲಿನ ದಾಳಿ; ಮೋದಿ ಸರ್ಕಾರದ ಮೇಲೆ ಮುಗಿಬಿದ್ದ ಸೋನಿಯಾ ಗಾಂಧಿ! Sonia Gandhi on Womens Reservation

ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ
ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮೀಸಲಾತಿ ಬಿಲ್​ ಇದು ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿ
  • ಮೋದಿ ಅವರು ಮೈ ವೇ ಇಸ್​ ಹೈ ವೇ ಎಂಬಂತೆ ದೇಶವನ್ನು ನಡೆಸುತ್ತಿದ್ದಾರೆ
  • ಈ ನೀತಿಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ
  • ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ
ನವದೆಹಲಿ: ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳ್ತಿರೋದು ಕೇವಲ ಒಂದು ಮುಖವಾಡ, ಇದರ ಹಿಂದೆ ಸೀಮಾ ನಿರ್ಣಯ (Delimitation) ಎಂಬ ಅಪಾಯಕಾರಿ ಯೋಜನೆ ಅಡಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi on Womens Reservation) ಗಂಭೀರ ಆರೋಪ ಮಾಡಿದ್ದಾರೆ.

ಸಂವಿಧಾನದ ಮೇಲಿನ ದಾಳಿ: ಸೋನಿಯಾ

ಕೇಂದ್ರ ಸರ್ಕಾರದ ಈ ಆತುರದ ನಡೆಯನ್ನು ಸೋನಿಯಾ ಗಾಂಧಿ, ಸಂವಿಧಾನದ ಮೇಲಿನ ದಾಳಿ ಎಂದು ಕರೆದಿದ್ದಾರೆ. ಮಹಿಳಾ ಮೀಸಲಾತಿಯನ್ನು ಮುಂದಿಟ್ಟುಕೊಂಡು ಸರ್ಕಾರ ದೇಶದ ರಾಜಕೀಯ ನಕ್ಷೆಯನ್ನೇ ಬದಲಿಸಲು ಹೊರಟಿದೆ. 2029ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮೀಸಲಾತಿ ಜಾರಿಗೆ ತರುವ ನೆಪದಲ್ಲಿ, 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಎಚ್ಚರಿಸಿದ್ದಾರೆ.
ಜೋಕರ್ ಆದ ಮಹಿಳಾ ಮೀಸಲಾತಿ ಮಸೂದೆ?
2023ರಲ್ಲಿ ಅಂಗೀಕಾರವಾದ ನಾರಿ ಶಕ್ತಿ ವಂದನ್ ಅಧಿನಿಯಮ್ ಅನ್ವಯ, ಮಹಿಳೆಯರಿಗೆ 33% ಮೀಸಲಾತಿ ಸಿಗಬೇಕು ಅಂದ್ರೆ ಮೊದಲು ಜನಗಣತಿ ಆಗಬೇಕು, ಆಮೇಲೆ ಕ್ಷೇತ್ರಗಳ ಮರುಹಂಚಿಕೆ ಆಗಬೇಕು. ಆದರೆ ಈಗ ಸರ್ಕಾರ 2027ರ ಜನಗಣತಿಗಾಗಿ ಕಾಯುವ ಬದಲು, ಹಳೆಯ ದತ್ತಾಂಶ ಬಳಸಲು ಹೊರಟಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸೋನಿಯಾ ಗಾಂಧಿ ಅವರ ಪ್ರಕಾರ, ಇದು ಕೇವಲ ಚುನಾವಣೆಗಾಗಿ ಮಾಡುತ್ತಿರುವ ಗಿಮಿಕ್​ ಆಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯದ ಭೀತಿ!

ಸೀಮಾ ನಿರ್ಣಯ ಎನ್ನುವುದು ಕೇವಲ ಸಂಖ್ಯೆಗಳ ಆಟವಲ್ಲ; ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ವಿಯಾದ ರಾಜ್ಯಗಳಿಗೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಇದರಿಂದ ಪ್ರಾತಿನಿಧ್ಯ ಕಡಿಮೆ ಆಗುವ ಆತಂಕವಿದೆ. ಯಾರು ಮಾತು ಕೇಳಿ ಜನಸಂಖ್ಯೆ ಕಡಿಮೆ ಮಾಡಿಕೊಂಡರೋ ಅವರಿಗೆ ಶಿಕ್ಷೆ, ಯಾರು ಜನಸಂಖ್ಯೆ ಹೆಚ್ಚಿಸಿಕೊಂಡರೋ ಅವರಿಗೆ ಹೆಚ್ಚಿನ ಸೀಟು ಎನ್ನುವಂತಾಗಬಾರದು ಎಂದು ಸೋನಿಯಾ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿಯವರದು ಮೈ ವೇ ಇಸ್​ ಹೈ ವೇ ನೀತಿ!

ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿರುವಾಗಲೇ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ವಿರೋಧ ಪಕ್ಷಗಳನ್ನು ಕಟ್ಟಿಹಾಕುವ ತಂತ್ರ. ಪ್ರಧಾನಿ ಮೋದಿ ಅವರ ಆಡಳಿತ ಸತ್ಯ ಪಥದಿಂದ ದೂರವೇ ಉಳಿದಿದೆ ಅವರಿಗೆ ಕೇವಲ ತಾವು ಮಾಡಿದ್ದೆ ಸರಿ ಎನ್ನುವ ನೀತಿಯನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ.

ಜಾತಿ ಜನಗಣತಿ ಹಳಿತಪ್ಪಿಸುವ ಸಂಚು?

ಮತ್ತೊಂದು ಮುಖ್ಯ ವಿಷಯವೆಂದರೆ ಜಾತಿ ಜನಗಣತಿ. ಬಿಹಾರ ಮತ್ತು ತೆಲಂಗಾಣದಂತಹ ರಾಜ್ಯಗಳು ಕೆಲವೇ ತಿಂಗಳಲ್ಲಿ ಇದನ್ನು ಮಾಡಿ ತೋರಿಸಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಈ ಪ್ರಕ್ರಿಯೆಗೆ ಸಮಯ ಹಿಡಿಯುತ್ತದೆ ಎಂಬ ಸಬೂಬು ನೀಡುತ್ತಿದೆ. ಹಿಂದುಳಿದ ವರ್ಗಗಳಿಗೆ (OBC) ಮೀಸಲಾತಿಯೊಳಗೆ ಮೀಸಲಾತಿ ನೀಡಬಾರದು ಎಂಬ ಕಾರಣಕ್ಕೆ ಈ ವಿಳಂಬ ಮಾಡಲಾಗುತ್ತಿದೆ ಎಂಬುದು ಸೋನಿಯಾ ಅವರ ಆರೋಪವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net