ಇದು ಕೇವಲ ಆಕ್ಷನ್ ಸಿನಿಮಾವಲ್ಲ: ಟಾಕ್ಸಿಕ್ ಬಗ್ಗೆ ಮೌನ ಮುರಿದ ಯಶ್; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್! Yash on Toxic

ಇದು ಕೇವಲ ಒಂದು ನಾರ್ಮಲ್​ ಆಕ್ಷನ್​ ಸಿನಿಮಾವಲ್ಲ: ಯಶ್​
ಇದು ಕೇವಲ ಒಂದು ನಾರ್ಮಲ್​ ಆಕ್ಷನ್​ ಸಿನಿಮಾವಲ್ಲ: ಯಶ್​
Published on

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್​ ಸಿನಿಮಾದ ಬಗ್ಗೆ ಮಾತನಾಡಿರುವ ರಾಕಿಂಗ್​ ಸ್ಟಾರ್​
  • ಇದು ಕೇವಲ ಒಂದು ನಾರ್ಮಲ್​ ಆಕ್ಷನ್​ ಸಿನಿಮಾವಲ್ಲ: ಯಶ್​
  • ಸಿನಿಮಾ ಮುಂದೂಡಿಕೆ ಬಗ್ಗೆ ಮೌನ ಮುರಿದ ರಾಕಿ ಭಾಯ್​
ಲಾಸ್​ ಎಂಜಲೀಸ್: ಪ್ರತಿ ಸಿನಿಮಾ ತಾರೆಗಳು ತಮ್ಮ ಸಿನಿಮಾ ಬಿಡುಗಡೆಯಾದ ನಂತರ ಚರ್ಚೆಗೆ ಗ್ರಾಸವಾದರೆ ರಾಕಿ ಭಾಯ್​, ರಾಕಿಂಗ್​ ಸ್ಟಾರ್ ಯಶ್​ ತಮ್ಮ ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಮಾರ್ಚ್​ 19 ರಂದು ಬಿಡುಗಡೆಯಾಗಬೇಕಿದ್ದ ಟಾಕ್ಸಿಕ್​ ಸಿನಿಮಾ ಈಗ ಜೂನ್​ ತಿಂಗಳಿಗೆ ಮುಂದೂಡಿದ ಬಗ್ಗೆ ಯಶ್​ (Yash on Toxic) ಮನ ಬಿಚ್ಚಿ ಮಾತನಾಡಿದ್ದಾರೆ.

ಇದು ನಾರ್ಮಲ್​ ಆ್ಯಕ್ಷನ್​ ಸಿನಿಮಾವಲ್ಲ!

ಅಮೆರಿಕದ ಲಾಸ್​ ಎಂಜಲೀಸ್​ನಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ಯಶ್​, ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​ ಗ್ರೋನ್ಪ್ಸ್​ ಸಿನಿಮಾ ಕೇವಲ ಒಂದು ಆ್ಯಕ್ಷನ್​ ಸಿನಿಮಾ ಮಾತ್ರವಲ್ಲ. ಈ ಸಿನಿಮಾದ ಆಳ ಮತ್ತು ಪಾತ್ರಗಳ ವಿಭಿನ್ನತೆಯನ್ನು ನೀವು ಸಿನಿಮಾ ಬಿಡುಗಡೆಯಾದ ನಂತರವೇ ನೋಡಬೇಕೆಂದು ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ತಮ್ಮ ನಟನೆಯ ಇನ್ನೊಂದು ಸಿನಿಮಾದ ಟೀಸರ್​ ರಾಮಾಯಣದ ಬಗ್ಗೆ ಮಾತನಾಡಿರುವ ರಾಕಿ ಭಾಯ್​, ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ, ನನಗೆ ಈ ಸಿನಿಮಾದಲ್ಲಿ ಅವಕಾಶ ಅದರಲ್ಲೂ ರಾವಣನ ಪಾತ್ರ ದೊರೆತಿದಕ್ಕೆ ಧನ್ಯನಾಗಿದ್ದೆನೆ ಎಂದು ಹೇಳಿದ್ದಾರೆ.

ಧುರಂಧರ್​ಗೆ ಠಕ್ಕರ್​ ಕೊಡಲು ಮುಂದಾಗಿದ್ದ ಟಾಕ್ಸಿಕ್​!

ಜನವರಿ ಮೊದಲ ವಾರದಲ್ಲಿ ಟಾಕ್ಸಿಕ್​ ಸಿನಿಮಾ ಮಾರ್ಚ್​ 19 ರಂದು ಬಿಡುಗಡೆ ಕಾಣಲಿದೆ. ಅಂದರೆ ರಣವೀರ್​ ಸಿಂಗ್​ ನಟನೆಯ ಹಾಗೂ ಆದಿತ್ಯ ಧರ್​ ನಿರ್ದೇಶನದ ಧುರಂಧರ್​ 2 ಸಿನಿಮಾಗೆ ಠಕ್ಕರ್​ ಕೊಡಲು ಮುಂದಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೇ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾಗಿ, ಸಿನಿಮಾದ ವೀಕ್ಷಕರ ಸಂಖ್ಯೆ ಕಾರಣವಾಗುವ ಹಿನ್ನಲೆಯಲ್ಲಿ ಟಾಕ್ಸಿಕ್​ ಸಿನಿಮಾವನ್ನು ಜೂನ್​ ತಿಂಗಳಿಗೆ ಮುಂದೂಡಲಾಗಿದೆ.

ಖ್ಯಾತ ನಾಮರೇ ತುಂಬಿರುವ ಸಿನಿಮಾ ಟಾಕ್ಸಿಕ್​

ಟಾಕ್ಸಿಕ್​ ಈ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್​, ಹುಮಾ ಖುರೇಶಿ, ತರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯಶ್​ ದ್ವಿಪಾತ್ರದಲ್ಲಿ ಮಿಂಚಲಿದ್ದು ಈ ಸಿನಿಮಾ ಜೂನ್ 4, 2026 ರಂದು ತೆರೆಕಾಣಲಿದೆ. ಈ ಸಿನಿಮಾವನ್ನು ಗೀತು ಮೋಹನ್​ ದಾಸ್ ನಿರ್ದೇಶಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net