ಈ ಕಂಡೀಷನ್​ಗಳನ್ನು ಪಾಸ್​ ಮಾಡಿದರೆ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸುವುದು ಖಚಿತ!

RCB
Published on

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ ಆರಂಭಗೊಂಡು 50ಕ್ಕೂ ಹೆಚ್ಚು ಪಂದ್ಯಗಳು ಮುಕ್ತಾಯಗೊಂಡರು ಇದುವರೆಗೂ ಯಾವ ತಂಡವು ಅಧಿಕೃತವಾಗಿ ಪ್ಲೇ ಆಫ್​ ಪ್ರವೇಶಿಸಲು ಸಾಧ್ಯವಾಗಿಲ್ಲ. ಇತ್ತ ಮೊದಲಾರ್ಧದಲ್ಲಿ ಸತತ ಸೋಲುಗಳ ಮೂಲಕ ಕಂಗೆಟ್ಟಿದ್ದ ಆರ್​ಸಿಬಿ ದ್ವಿತಿಯಾರ್ಧದಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದು, ಪ್ಲೇಆಫ್​ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಆರ್​ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಪಂಜಾಬ್​ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಚೆನ್ನೈ ವಿರುದ್ಧ ಆಡಲಿದೆ. ಈ ಮೂರು ಪಂದ್ಯಗಳಲ್ಲೂ ಆರ್​ಸಿಬಿ ಭರ್ಜರಿ ಜಯ ಗಳಿಸಿದರೆ ಮಾತ್ರ ಉತ್ತಮ ರನ್​ರೇಟ್​ನೊಂದಿಗೆ ಸುಗಮವಾಗಿ ಪ್ಲೇಆಫ್​ಗೇರಬಹುದಾಗಿದೆ. ಆದರೆ, ಆರ್​ಸಿಬಿಯ ಪ್ಲೇಆಫ್​ ಭವಿಷ್ಯ ಉಳಿದ ತಂಡಗಳ ಮೇಲೆ ಅವಲಂಬಿತವಾಗಿದೆ. ಆದರೆ, ಕ್ರೀಡಾ ತಜ್ಞರು ಹೇಳುವ ಪ್ರಕಾರ ಕೆಲವು ಕಂಡೀಷನ್​ಗಳನ್ನು ಆರ್​ಸಿಬಿ ಪಾಸ್​ ಮಾಡುವಲ್ಲಿ ಯಶಸ್ವಿಯಾದರೆ ನಿರಾಯಸವಾಗಿ ಪ್ಲೇಆಫ್​ ಪ್ರವೇಶಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಂಡೀಷನ್​ ನಂ. 1: ಆರ್​ಸಿಬಿ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಎದುರಾಳಿ ತಂಡದ ವಿರುದ್ಧ ಭರ್ಜರಿ ಜಯ ಗಳಿಸಬೇಕು. ಪ್ರಸ್ತುತ -00.49 ರನ್​ ರೇಟ್​ ಹೊಂದಿರುವ ಆರ್​ಸಿಬಿ ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದರೆ 14 ಅಂಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ. ಲೀಗ್​ ಹಂತದ ಕೊನೆಯ ಪಂದ್ಯಗಳ ವೇಳೆ ಆರ್​ಸಿಬಿ ಉತ್ತಮ ನೆಟ್​ ರನ್​ರೇಟ್​ ಹೊಂದಿರುತ್ತದೆ.

ಕಂಡೀಷನ್​ ನಂ. 2: ಆರ್​ಸಿಬಿ ಪ್ಲೇಆಫ್​ ಹಾದಿ ಸುಗಮವಾಗಬೇಕಿದ್ದರೆ ಸನ್​ರೈಸರ್ಸ್​ ಹೈದರಾಬಾದ್​ ಅಥವಾ ಲಖನೌ ಸೂಪರ್​ಜೈಂಟ್ಸ್​ ತಮ್ಮ ಉಳಿದ ಲೀಗ್​ ಪಂದ್ಯದಲ್ಲಿ ಒಂದಕ್ಕಿಂತೆ ಹೆಚ್ಚು ಗೆಲುವು ಕಾಣಬಾರದು. ಪ್ರಸ್ತುತ ಈ ಎರಡು ತಂಡಗಳು ತಲಾ 12 ಅಂಕಗಳೊಂದಿಗೆ 4 ಹಾಗೂ 5ನೇ ಸ್ಥಾನದಲ್ಲಿದ್ದು, ಮುಂದಿನ ಮೂರು ಪಂದ್ಯಗಳಲ್ಲಿ 2ರಲ್ಲಿ ಸೋತರೆ ಮಾತ್ರ ಆರ್​ಸಿಬಿಗೆ ಪ್ಲೇಆಫ್​ ಬಾಗಿಲು ತೆರೆಯುತ್ತದೆ. ಹಾಗೆಯೇ ಮಂಗಳವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸೋತರೆ ಆರ್​ಸಿಬಿ ಪ್ಲೇಆಫ್​ ಹಾದಿ ಮತ್ತಷ್ಟು ಸುಗಮವಾಗುತ್ತದೆ.

ಕಂಡೀಷನ್​ ನಂ. 3: ಇದಲ್ಲದೆ ಚೆನ್ನೈ ಸೂಪರ್​ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಮುಂದಿನ ಪಂದ್ಯಗಳಲ್ಲಿ ಸೋಲಬೇಕು. ಉಳಿದಂತೆ 8ನೇ ಸ್ಥಾನದಲ್ಲಿರುವ ಪಂಜಾಬ್​ ಕಿಂಗ್ಸ್​ ತನ್ನ ಲೀಗ್​ ಹಂತದ ಉಳಿದ ಪಂದ್ಯದಲ್ಲಿ ಸೋತರೆ ಆರ್​ಸಿಬಿ ಪಾಲಿಗೆ ಪ್ಲೇಆಫ್​ ಬಾಗಿಲು ತೆರೆದಂತಾಗುತ್ತದೆ. ಒಂದು ವೇಳೆ ಆರ್​ಸಿಬಿ ಏನಾದರೂ ಮೂರರ ಪೈಕಿ ಒಂದರಲ್ಲಿ ಸೋಲು ಕಂಡರು ಪ್ಲೇಆಫ್​ ಬಾಗಿಲು ಮುಚ್ಚಿದಂತಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net