

ಚೆನ್ನೈ: ನಿನ್ನೆ (ಏ.08) ಚೆಪಾಕ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದ ಭಾರೀ ಹಣಾಹಣಿಯಲ್ಲಿ 7 ವಿಕೆಟ್ಗಳ ಅಂತರದಿಂದ ರುತುರಾಜ್ ನಾಯಕತ್ವದ ಸಿಎಸ್ಕೆ ಪಡೆ ಭರ್ಜರಿ ಗೆಲುವು ದಾಖಲಿಸಿತು. ಕೆಕೆಆರ್ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಪಡೆಯ ವಿಕೆಟ್ಗಾಗಿ ದೇವರನ್ನು ಬೇಡುತ್ತಿದ್ದವರು ಕೆಕೆಆರ್ ಫ್ಯಾನ್ಸ್ ಅಥವಾ ಆಟಗಾರರಲ್ಲ ಬದಲಿಗೆ ಧೋನಿ ಅಭಿಮಾನಿಗಳು.
ನಾಲ್ಕನೇ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ಆಡುತ್ತಿದ್ದ ಶಿವಂ ದುಬೆ ಎಂದಿನಂತೆ ಈ ಪಂದ್ಯದಲ್ಲಿಯೂ ಸಹ ಸಿಕ್ಸರ್ಗಳನ್ನು ಸಿಡಿಸಿದರು. ಇನ್ನೇನು ದುಬೆ ಮ್ಯಾಚ್ ವಶಪಡಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಷ್ಟರೊಳಗೆ ವೈಭವ್ಗೆ ವಿಕೆಟ್ ಒಪ್ಪಿಸಿದರು. ಶಿವಂ ಔಟ್ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸದ ಸಿಎಸ್ಕೆ ಅಭಿಮಾನಿಗಳು, ಧೋನಿ....ಧೋನಿ ಎಂದು ಕೂಗಲು ಪ್ರಾರಂಭಿಸಿದರು.
ಈ ವೇಳೆ ಕ್ಯಾಪ್ಟನ್ ಕೂಲ್ ಎಂಟ್ರಿಗಾಗಿ ಕಾಯುತ್ತಿದ್ದ ಫ್ಯಾನ್ಸ್ಗೆ ಭಾರೀ ಆಘಾತವಾಗಿದ್ದು, ಗ್ಲೌಸ್ ಧರಿಸಿ, ಕ್ರೀಡಾಂಗಣಕ್ಕೆ ಎಂಟ್ರಿ ಕೊಡಲು ಬಂದ ಜಡೇಜಾರನ್ನು ನೋಡಿ. ಕೂಡಲೇ ತನ್ನ ಕಡೆ ನೋಡಿ ಸಿಟ್ಟಾದ ಫ್ಯಾನ್ಸ್ಗಳನ್ನು ಗಮನಿಸಿದ ಜಡೇಜಾ, ತಕ್ಷಣವೇ ಹಿಂತಿರುಗಿದರು. ಈ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಧೋನಿ ಕ್ರೇಜ್ ಇಂದು...ನಾಳೆ ಮುಗಿಯುವುದಲ್ಲ ಎಂಬುದು ಈ ದೃಶ್ಯ ನೋಡಿದವರಿಗೆ ಅನಿಸುವುದು ಸಹಜ,(ಏಜೆನ್ಸೀಸ್).