ವಿರಾಟ್ ಬೊಂಬಾಟ್ ಬ್ಯಾಟಿಂಗ್; ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ

5656
Published on

ಮೆಲ್ಬೋರ್ನ್​: ಪಾಕಿಸ್ತಾನ ನೀಡಿದ 160ರನ್​ಗಳ ಗುರಿ ಬೆನ್ನು ಹತ್ತಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಉಪ ನಾಯಕ ಕೆ.ಎಲ್ ರಾಹುಲ್ ಹಾಗೂ ನಾಯಕ ರೋಹಿತ್​ ಶರ್ಮ 4 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

ಈ ವೇಳೆ ವಿರಾಟ್ ಕೊಹ್ಲಿ ಜೊತೆಯಾದ ಸೂರ್ಯ ಕುಮಾರ್ ಯಾದವ್ 15 ರನ್ ನೀಡಿ ನಿರ್ಗಮಿಸಿದರು. ಅಕ್ಷರ್ ಪಟೇಲ್ 2 ರನ್ ಗಳಿಸಿ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.

ನಿಧಾನವಾಗಿ ಆಟ ಆರಂಭಿಸಿದ ವಿರಾಟ್ ಕೊಹ್ಲಿ ಕ್ರಿಸ್ ಕಚ್ಚಿ ನಿಂತು ಬ್ಯಾಟ್ ಬೀಸಿದರು. ಹಾರ್ದಿಕ್ ಪಾಂಡ್ಯಾ ವಿರಾಟ್ ಕೊಹ್ಲಿ ಸಾಥ್ ನೀಡಿದರು. ಕೊನೆಯಲ್ಲಿ ಎಡವಿದ ಪಾಂಡ್ಯಾ 40ರನ್ ಗಳಿಸಿ ಔಟ್​ ಆದರು. ಭಾರತಕ್ಕೆ ಗೆಲುವು ಕಠಿಣವಾಗಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದರು. ಅಜೇಯ 82 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net