

ಪರ್ತ್: ಟಿ-20 ವಿಶ್ವಕಪ್ನ ಸೌತ್ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ, ಆರಂಭದಲ್ಲಿ ಮುಗ್ಗರಿಸಿತು. ಸೌತ್ ಆಫ್ರಿಕಾ ಬೌಲರ್ಗಳ ಬೌಲಿಂಗ್ ದಾಳಿಗೆ ಭಾರತೀಯ ಬ್ಯಾಟ್ಸ್ಮನ್ಗಳು ತತ್ತರಿಸಿದರು.
ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿ 21 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ ಪಂದ್ಯದಲ್ಲೂ ಮುಗ್ಗರಿಸಿದ ರಾಹುಲ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ರೋಹಿತ್ ಶರ್ಮಾ ಆಟ 15 ರನ್ಗಳಿಗೆ ಅಂತ್ಯವಾಯ್ತು.
ಮೊದಲ ಎರಡು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 12 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಅಕ್ಷರ್ ಪಟೇಲ್ ಬದಲಿಗೆ ಅವಕಾಶ ಪಡೆದ ದೀಪಕ್ ಹೂಡ ಯಾವುದೇ ರನ್ ಕಲೆ ಹಾಕದೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯಾ ಸ್ಲೋ ಬಾಲ್ ಗಮನಿಸಿದೆ ವಿಕೆಟ್ ಒಪ್ಪಿಸಬೇಕಾಗಿ ಬಂತು. ಪಾಂಡ್ಯಾ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮಿಡಲ್ ಆರ್ಡರ್ ಜವಾಬ್ದಾರಿ ಹೊತ್ತು ಬಂದ ದಿನೇಶ್ ಕಾರ್ತಿಕ್ ನಿರಾಸೆ ಅನುಭವಿಸಿದರು. ತಂಡದ ಮೊತ್ತವನ್ನು ಹಿಗ್ಗಿಸುವುದರಲ್ಲಿ ಎಡವಿದ ಕಾರ್ತಿಕೆ 6 ರನ್ ಗಳಸಿ ನಿರ್ಗಮಿಸಿದರು. ನಂತರ ಬಂದ ರವಿಚಂದ್ರನ್ ಅಶ್ವಿನ್ ಆಟ 7 ರನ್ಗೆ ಅಂತ್ಯವಾಯ್ತು.
ಒಂದೆಡೆ ಸೌತ್ಆಪ್ರಿಕಾ ಬೌಲಿಂಗ್ ದಾಳಿಗೆ ಭಾರತೀಯ ಬ್ಯಾಟ್ಸ್ಮನ್ಗಳು ಒಂದರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸುತ್ತಿದ್ದರೆ, ಸೂರ್ಯಕುಮಾರ್ ಯಾದವ್ ತಂಡಕ್ಕೆ ಆಸರೆಯಾದರು. ಕ್ರಿಸ್ ಕಚ್ಚಿ ನಿಂತ ಸೂರ್ಯಕುಮಾರ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು.
ಸೂರ್ಯಕುಮಾರ್ ಯಾದವ್ 40 ಎಸೆತಗಳನ್ನು ಎದುರಿಸಿ ಅರ್ಧಶತಕ ಸಹಿತ 68 ರನ್ ಗಳಸಿದರು. ಇನ್ನಿಂಗ್ಸ್ನಲ್ಲಿ 6 ಫೋರ್ ಹಾಗೂ 3 ಸಿಕ್ಸರ್ ಸಿಡಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ ಆಟದಿಂದಾಗಿ ಭಾರತದ ಸ್ಕೋರ್ ನೂರರ ಗಡಿ ದಾಟಲು ಸಾಧ್ಯವಾಯಿತು. ಕೊನೆಯಲ್ಲಿ ಎಡವಿದ ಸೂರ್ಯ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಬಂದ ಮೊಹಮ್ಮದ್ ಶಮಿ(0) ರನೌಟ್ ಆದರು. ಕೊನೆಯಲ್ಲಿ ಭುವನೇಶ್ವರ್ ಕುಮಾರ್ 4 ರನ್ ಹಾಗೂ ಆರ್ಷದೀಪ್ ಸಿಂಗ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ನಿಗದಿತ 20 ಓವರ್ಗಳಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ. ಸೌತ್ಆಫ್ರಿಕಾ ಪರ ಲುಂಗಿ ಎನ್ಗಿಡಿ 4 ಹಾಗೂ ವೇಯ್ನ್ ಪಾರ್ನೆಲ್ 3 ವಿಕೆಟ್ ಪಡೆದು ಮಿಂಚಿದರು. ಅನ್ರಿಚ್ ನಾರ್ಟ್ಜೆ 1 ವಿಕೆಟ್ ಪಡೆದುಕೊಂಡರು.