

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿದ್ದ ಬೈಕ್ ಜಾಥಾದಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ಭಾಗವಹಿಸಿದ್ದರು. ಈ ವೇಳೆ ನಾಯಕಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಇದೀಗ ಸುರಯ್ಯ ಅಂಜುಮ್ ಮಾಡಿಕೊಂಡ ಅವಾಂತರಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೈಕ್ ಜಾಥಾದ ಹಿನ್ನಲೆಯಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ಬುಲೆಟ್ ಬೈಕ್ ಚಲಾಯಿಸಿದ್ದಾರೆ. ಆಕ್ರೋಶಕ್ಕೆ ಕಾರಣವಾಗಿರುವುದು ಇದೀಗ ಬೈಕ್ನಲ್ಲಿ ಹಾಕಿದ ರಾಷ್ಟ್ರಧ್ವಜ. ಭಾರತದ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿಕೊಂಡಿದ್ದಾರೆ. ಹಸಿರು, ಬಿಳಿ, ಕೇಸರಿ ಬರುವಂತೆ ಹಾಕಿಕೊಂಡು ಬೈಕ್ ಚಲಾಯಿಸಿದ್ದಾರೆ.
ಕಾಂಗ್ರೆಸ್ ನಾಯಕಿಯ ಎಡವಟ್ಟಿಗೆ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ರಾಷ್ಟ್ರೀಯ ಪಕ್ಷದ ನಾಯಕಿಯೊಬ್ಬರಿಗೆ ರಾಷ್ಟ್ರಧ್ವಜವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುವುದು ಗೊತ್ತಿಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.