

ಹಾಸನ: ದೇಶದ ಯಾವುದೇ ಮೂಲೆಗೆ ಹೋದರೂ ಸಾಂಪ್ರದಾಯಿಕವಾಗಿ ಹಾಗೂ ನಂಬಿಕೆಗಳು ಭಿನ್ನವಾಗಿರುತ್ತದೆ. ಕೆಲವೊಂದು ಸಂಪ್ರದಾಯಗಳಂತೂ ಅಚ್ಚರಿಗೆ ಕಾರಣವಾಗುತ್ತದೆ. ಇದೀಗ ಜಿಲ್ಲೆಯ ಚನ್ನರಾಯಪಟ್ಟಣ ಗಡಿ ಗ್ರಾಮದ ಕುಂಬೇನಹಳ್ಳಿಯ ದೇವಸ್ಥಾನದ ವಿಚಿತ್ರ ಆಚರಣೆಯೊಂದು ಅಚ್ಚರಿಗೆ ಕಾರಣವಾಗುತ್ತಿದೆ.
ಎಲ್ಲೂ ಇಂತಹ ಆಚರಣೆಯನ್ನು ಕೇಳಿರಲು ಸಾಧ್ಯವಿಲ್ಲ. ಕುಂಬೇನಹಳ್ಳಿಯಲ್ಲಿ ಸಂಜೀವಿನಿ ಆಂಜನೇಯ ದೇವಸ್ಥಾನ ಇದೆ. ಈ ಆಂಜನೇಯನಿಗೆ ವಿಭಿನ್ನ ಪದ್ಧತಿಯ ಹರಕೆಯನ್ನು ಅರ್ಪಣೆ ಮಾಡಲಾಗುತ್ತದೆ.
ಹರಕೆ ಹೊತ್ತವನು ಕಪ್ಪು ಬಟ್ಟೆ ಧರಿಸಿ ಏಣಿ ಮೇಲೆ ಕೂರುತ್ತಾನೆ. ನಂತರ ಕೆಲವರು ಆತನನ್ನು ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ಬರುವಾಗ ಜನರು ಆತನಿಗೆ ಸಗಣಿ, ಬೂದಿ ಮತ್ತು ನೀರನ್ನು ಎರಚುತ್ತಾರೆ. ಬಲಿ ಪಾಡ್ಯಮಿ ನಂತರ ಮೂರು ದಿನಗಳಲ್ಲಿ ಈ ವಿಚಿತ್ರ ಆಚರಣೆ ನಡೆಯುತ್ತಾ ಬರುತ್ತಿದೆ.