

ಮೆಲ್ಬೋರ್ನ್: ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ, ಎದುರಾಳಿ ಪಾಕಿಸ್ತಾನ ತಂಡದ 8 ವಿಕೆಟ್ ಕಬಳಿಸಿ 159 ರನ್ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಆಘಾತ ಎದುರಿಸಿತು. ನಾಯಕ ಬಾಬರ್ ಅಝಮ್ ಮೊದಲ ಬಾಲ್ನಲ್ಲೇ ಎಲ್ಬಿ ಬಲೆಗೆ ಬಿದ್ದರು. ಎಡಗೈ ವೇಗಿ ಆರ್ಷ್ದೀಪ್ ಮೊದಲ ವಿಕೆಟ್ ಕಿತ್ತು ಸಂಭ್ರಮಿಸಿದರು. ನಂತರ ಮೊಹಮ್ಮದ್ ರಿಝ್ವಾನ್ ಹೆಚ್ಚು ನಿಲ್ಲದೆ, 4 ರನ್ ಗಳಿಸಿ ಮತ್ತೆ ಆರ್ಷ್ದೀಪ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಮೂರನೇ ವಿಕೆಟ್ಗೆ ಜತೆಯಾದ ಶಾನ್ ಮಸೂದ್ ಮತ್ತು ಇಫ್ತಿಕಾರ್ ಅಹ್ಮದ್ ರನ್ಗಳ ಜತೆಯಾಟವಾಡಿದರು. ಇಫ್ತಿಕಾರ್ ಅಹ್ಮದ್ 51 ರನ್ ಸಿಡಿಸಿ ಔಟ್ ಆದರು. ನಂತರ ಬಂದ ಯಾವೊಬ್ಬ ಬ್ಯಾಟ್ಸ್ಮನ್ಗೂ ತಂಡದ ಮೊತ್ತವನ್ನು ಹೆಚ್ಚಿಸಲು ಭಾರತೀಯ ಬೌಲರ್ಗಳು ಅವಕಾಶ ಮಾಡಿಕೊಟ್ಟಿಲ್ಲ. ಈ ವೇಳೆ ಆಕ್ರಣಕಾರಿಯಾಗಿ ಬ್ಯಾಟ್ ಬೀಸಿದ ಶಾನ್ ಮಸೂಸ್ 52ರನ್ ಸಿಡಿಸಿ ತಂಡದ ಮೊತ್ತ 159 ಆಗುವಲ್ಲಿ ನೆರವಾದರು.
ಅದ್ಭುತವಾಗಿ ಬೌಲಿಂಗ್ ಮಾಡಿದ ಎಡಗೈ ವೇಗಿ ಆರ್ಷ್ದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯಾ 3 ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದುಕೊಂಡರು.