ಕೊಹ್ಲಿ, ರೋಹಿತ್​ಗಿಂತ ಸೂರ್ಯಕುಮಾರ್ ವಿಭಿನ್ನ ಆಟಗಾರ; 'ಗಂಭೀರ' ಅಭಿಪ್ರಾಯ

Gautam Gambhir
Published on

ನವದೆಹಲಿ: ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ಅದ್ಭುತ ನಿರ್ವಹಣೆ ತೋರುತ್ತಿದ್ದಾರೆ. ಮೂರು ಅರ್ಧಶತಕ ಸಿಡಿಸಿ ಮಿಂಚಿರುವ ಸೂರ್ಯಕುಮಾರ್, ಒಟ್ಟು 225 ರನ್​ ಸಿಡಿಸಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್ ಆಟದ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಭಾರತ ತಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರನ್ನು ಹೊಂದಿದ್ದರೂ, ಸೂರ್ಯಕುಮಾರ್ ಯಾದವ್​​ನಂತಹ ಆಟಗಾರನನ್ನು ಇದುವರೆಗೆ ಹೊಂದಿರಲಿಲ್ಲ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.

ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಸಾಂಪ್ರದಾಯಿಕ ಆಟಗಾರರು. ಆದರೆ ಸೂರ್ಯಕುಮಾರ್ ಯಾದವ್ ಇವರಿಗಿಂತ ವಿಭಿನ್ನರು. ಸೂರ್ಯಕುಮಾರ್ ಆಟವನ್ನು ಆನಂದಿಸಲು ಸಂತೋಷವಾಗುತ್ತದೆ. ಕೆಲವೇ ಕೆಲವು ತಂಡಗಳಲ್ಲಿ ಮಾತ್ರ ಸೂರ್ಯಕುಮಾರ್​ನಂತಹ ಆಟಗಾರರು ಇರುತ್ತಾರೆ ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸೂರ್ಯಕುಮಾರ್ ಆಡಿರುವ ಬಹುತೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಅವರ ಸ್ಟ್ರೇಕ್​ರೇಟ್ ಅವರೊಬ್ಬ ಅತ್ಯುತ್ತಮ ಆಟಗಾರ ಎಂಬುವುದನ್ನು ಹೇಳುತ್ತಿದೆ. ನನ್ನ ಪ್ರಕಾರ ಸೂರ್ಯಕುಮಾರ್​​ನಂತಹ ಆಟಗಾರರನ್ನು ಭಾರತ ತಂಡ ಈ ಹಿಂದೆ ಕಂಡಿರಲಿಲ್ಲ ಎಂದು ಗಂಭೀರ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net