

ಮೆಲ್ಬೋರ್ನ್: ಟಿ-20 ವಿಶ್ವಕಪ್ ಭಾರತ ಮತ್ತು ಜಿಂಬಾಬ್ವೆ ನಡುವಣ ಪಂದ್ಯದಲ್ಲಿ ಭಾರತ 71ರನ್ಗಳ ಅಂತರದಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಜಿಂಬಾಬ್ವೆ ತಂಡಕ್ಕೆ 187ರನ್ಗಳ ಟಾರ್ಗೆಟ್ ನೀಡಿತ್ತು.
ಬಿಂಬಾಬ್ವೆ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 16ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡುತ್ತಿದ್ದರು. ಈ ಬಾಲಕನೊಬ್ಬ ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಮೈದಾನಕ್ಕೆ ನುಗ್ಗಿದ್ದಾನೆ. ಭಧ್ರತಾ ಸಿಬ್ಬಂದಿಗಳ ಅರಿವಿಗೆ ಬಾರದಂತೆ ಬಾಲಕ ಮೈದಾನದ ಒಳಬಂದು ರೋಹಿತ್ ಶರ್ಮಾ ಬಳಿ ಬಂದಿದ್ದಾನೆ.
ಬಾಲಕ ರೋಹಿತ್ ಶರ್ಮಾ ಅಭಿಮಾನಿಯಾಗಿದ್ದ. ಹೀಗಾಗಿ ರೋಹಿತ್ ಅವರನ್ನು ಭೇಟಿಯಾಗಲೆಂದು ಭಧ್ರತಾ ಸಿಬ್ಬಂದಿಗಳಿಗೆ ಗೊತ್ತಾಗದಂತೆ ಒಳಬಂದಿದ್ದಾನೆ. ಮೈದಾನಕ್ಕೆ ನುಗ್ಗಿರುವುದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿಗಳು, ಕೂಡಲೇ ಬಾಲಕನನ್ನು ತಡೆದಿದ್ದಾರೆ. ಇದರಿಂದಾಗ ಕೂದಲೆಳೆ ಅಂತರದಲ್ಲಿ ಬಾಲಕನಿಗೆ ತನ್ನ ನೆಚ್ಚಿನ ಆಟಗಾರನನ್ನು ಭೇಟಿಯಾಗುವ ಅವಕಾಶ ತಪ್ಪಿದೆ. ನಂತರ ಸಿಬ್ಬಂದಿಗಳು ಬಾಲಕನನ್ನು ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದಾರೆ.
ರೋಹಿತ್ ಶರ್ಮಾ ಅವರ ಹತ್ತಿರಕ್ಕೆ ಬರುತ್ತಿದ್ದಂತೆ, ಸಿಬ್ಬಂದಿಗಳು ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ರೋಹಿತ್ ಶರ್ಮಾ ನಡೆಯನ್ನು ಟೀಕಿಸುತ್ತಿದ್ದಾರೆ. ಅಷ್ಟು ಹತ್ತಿರ ಬಂದ ಬಾಲಕನನ್ನು ಮಾತನಾಡಿಸದೆ ರೋಹಿತ್ ಸುಮ್ಮನಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.