

ಮೆಲ್ಬೋರ್ನ್: ಟಿ-20 ವಿಶ್ವಕಪ್ನಲ್ಲಿ ಭಾರತ ತಂಡ ಜಿಂಬಾಬ್ಬೆ ವಿರುದ್ಧ 71 ರನ್ಗಳ ಜಯ ದಾಖಲಿಸಿದೆ. ಭಾರತದ ಪರ ಅರ್ಧಶತಕ ದಾಖಲಿಸಿ ತಂಡದ ಮೊತ್ತ 186 ಆಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 61 ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ ಹೆಸರಿಗೆ ಹೊಸದೊಂದ ದಾಖಲೆ ಮಾಡಿದ್ದಾರೆ. ಕಳೆದ ಸೌತ್ಆಫ್ರಿಕಾ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಐಸಿಸಿಯ ನಂ.1 ಬ್ಯಾಟ್ಸ್ಮನ್ ಕೀರ್ತಿಗೆ ಪಾತ್ರರಾಗಿದ್ದರು. ಇದೀಗ ಸೂರ್ಯಕುಮಾರ್ ಯಾದವ್, ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ 1000ರನ್ ಕಲೆ ಹಾಕಿದ್ದಾರೆ. 28 ಪಂದ್ಯಗಳನ್ನಾಡಿ ವೇಗವಾಗಿ ಸಾವಿರ್ ರನ್ ಕಲೆ ಹಾಕುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.
ಜಿಂಬಾಬ್ವೆ ವಿರುದ್ಧದ ಪಂದ್ಯದ ನಿರ್ಣಾಯಕ ಹೊತ್ತಿನಲ್ಲಿ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತವಾಗಿ ಇನ್ನಿಂಗ್ಸ್ ಕಟ್ಟಿದರು. ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ಗೆ ಮುಂದಾದ ಸೂರ್ಯಕುಮಾರ್, 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿ ಸಿಡಿಸಿ ಮಿಂಚಿದರು. ಭಾರತ ತಂಡ ಜಿಂಬಾಬ್ವೆಗೆ ಸವಾಲಿನ ಮೊತ್ತದ ಟಾರ್ಗೆಟ್ ನೀಡುವಲ್ಲಿ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಪ್ರಮುಖವಾಗಿತ್ತು.
ಸದ್ಯ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡದ ಪರವಾಗಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಬ್ಬರು ಬ್ಯಾಟ್ಸ್ಮನ್ಗಳು ಈಗಾಗಲೇ 3 ಅರ್ಧಶತಕ ಸಿಡಿಸಿ ಮಿಂಚುತ್ತಿದ್ದಾರೆ.(ಏಜೆನ್ಸೀಸ್)