More

    ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ನೀಡಿದ ತಾಯಿ… ಮುಂದೇನಾಯ್ತು?

    ಒಡಿಶಾ: ಹೇಗಾದರೂ ಮಗ ಬದುಕಬೇಕೆಂದು ಹೆತ್ತ ತಾಯಿಯೇ ತನ್ನ ಕಿಡ್ನಿ ನೀಡಿದ್ದಾಳೆ. ಮಗ ಖಂಡಿತ ಗುಣಮುಖನಾಗುತ್ತಾನೆ, ಮತ್ತೆ ಮನೆಗೆ ಬಂದು ಓಡಾಡಿಕೊಂಡಿರುತ್ತಾನೆಂದು ತಂದೆ ಮಗನ ದಾರಿ ನೋಡುತ್ತಿದ್ದಾರೆ. ಆದರೆ ಆಗಿದ್ದೇ ಬೇರೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮಗ ಹೆಣವಾಗಿ ಮನೆಗೆ ಬಂದಿದ್ದಾನೆ. ಇದೀಗ ಹೆತ್ತವರಿಬ್ಬರೂ ಮಗನ ನೆನಪಿನಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ.

    ಈ ದಾರುಣ ಘಟನೆ ಸಂಭವಿಸಿರುವುದು ಕೇಂದ್ರಪಾರ ಜಿಲ್ಲೆಯ, ಬಲಿಜಾರಿ ಗ್ರಾಮದಲ್ಲಿ. ಯುವಕ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ಹೇಗಾದರೂ ಮಾಡಿ ಮಗನ ಆರೋಗ್ಯ ಸುಧಾರಿಸಬೇಕೆಂದು ತಾಯಿಯೇ ಮಗನಿಗೆ ತನ್ನ ಕಿಡ್ನಿ ನೀಡಿದ್ದಾಳೆ. ವೈದ್ಯರು ಯುವಕನಿಗೆ ಕಿಡ್ನಿ ಕಸಿ ಮಾಡಿದ್ದಾರೆ. ಇನ್ನೇನು ನನ್ನ ಮಗ ಗುಣಮುಖನಾಗುತ್ತಾನೆಂದು ಕಂಡಿದ್ದ ತಾಯಿಯ ಕನಸು ನುಚ್ಚುನೂರಾಗಿದೆ.

    ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಮಗ ಸಾವನ್ನಪ್ಪಿದ್ದಾನೆ. ಕಿಡ್ನಿ ಕಸಿ ಮಾಡಿದರೂ ಯುವನ ಮೃತಪಟ್ಟಿದ್ದು ಹೇಗೆ ಎಂಬ ಅನುಮಾನ ಇದೀಗ ಕುಟುಂಸ್ಥರಲ್ಲಿ ಮೂಡಿದೆ. ಈ ಬಗ್ಗೆ ವೈದ್ಯರನ್ನು ಪ್ರಶ್ನಿಸುತ್ತಿದ್ದಾರೆ.

    ಮೃತ ಯುವಕ ರಾಕೇಶ್(28) ಚಾಲಕನಾಗಿದ್ದುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ. ಯಾವುದೇ ದುಶ್ಚಟಗಳಿಲ್ಲದಿದ್ದರೂ, ಎಂಟು ತಿಂಗಳ ಹಿಂದೆ ಕಿಡ್ನಿ ಸಮಸ್ಯೆ ಇರುವುದು ವೈದ್ಯಕೀಯ ಪರೀಕ್ಷೆಯ ವೇಳೆ ಅರಿವಿಗೆ ಬಂದಿದೆ. ಕೂಡಲೇ ವೈದ್ಯರು ಕಿಡ್ನಿ ಕಸಿ ಮಾಡಬೇಕೆಂದು ಹೇಳಿದ್ದರು.

    ಎದುರಾಗಿರುವ ಆಪತ್ತನ್ನು ದೂರವಾಗಿಸಲು ಹೆತ್ತ ತಾಯಿಯೇ ಮುಂದೆ ಬಂದ್ದು, ಮಗನ ಜೀವ ಉಳಿಸಲು ಮುಂದಾಗಿದ್ದಾರೆ. ಅದರಂತೆ, ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿದೆ. ಆದರೆ, ಕಸಿ ಮಾಡಿದ 24 ಗಂಟೆಗಳಲ್ಲಿ ಯುವಕ ಸಾವನ್ನಪ್ಪಿದ್ದಾನೆ.

    ಇದೀಗ ಕುಟುಂಬಸ್ಥರು ಸರಕಾರದಿಂದ ಧನ ಸಹಾಯ ಕೋರಿದ್ದಾರೆ. ಕಿಡ್ನಿ ಕಸಿ ಮಾಡಿದ 24 ಗಂಟೆಯೊಳಗೆ ಯುವಕ ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts