

ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ(IND vs NZ 2nd-test) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದ ಮೊದಲ ದಿನ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 259 ರನ್ ಗಳಿಗೆ ಸೀಮಿತವಾಗಿತ್ತು. ಕಿವೀಸ್ ತಂಡ ಮೊದಲ ದಿನವೇ ವಾಷಿಂಗ್ಟನ್ ಸುಂದರ್ ಅವರ ಸ್ಪಿನ್‌ಗೆ ಸಿಲುಕಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಟಾಸ್ ಗೆದ್ದು ಭಾರತ ತಂಡದ ವಿರುದ್ಧ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ವಾಷಿಂಗ್ಟನ್ ಸುಂದರ್ 59 ರನ್‌ಗಳಿಗೆ 7 ವಿಕೆಟ್ ಪಡೆದರು. ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್ 259 ರನ್‌ಗಳಿಗೆ ಕುಸಿಯಿತು. ಅಶ್ವಿನ್ ಮೂರು ವಿಕೆಟ್ ಪಡೆದರು. ನ್ಯೂಜಿಲೆಂಡ್ ಪರ ಕಾನ್ವೆ 76 ರನ್ ಮತ್ತು ರಚಿನ್ ರವೀಂದ್ರ 65 ರನ್ ಗಳಿಸಿದರು. ಇದಾದ ಬಳಿಕ ಯಾವ ಬ್ಯಾಟ್ಸ್‌ಮನ್‌ಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.
ಮಿಚೆಲ್ ಸ್ಯಾಂಟ್ನರ್ (7 ವಿಕೆಟ್) ಮಾರಕ ಬೌಲಿಂಗ್‌ನಿಂದಾಗಿ ನ್ಯೂಜಿಲೆಂಡ್ ಭಾರತದ ಮೊದಲ ಇನ್ನಿಂಗ್ಸ್ ಅನ್ನು 156 ರನ್‌ಗಳಿಗೆ ಆಲೌಟ್ ಮಾಡಿತು. ಇನಿಂಗ್ಸ್‌ನ 46ನೇ ಓವರ್‌ನ ಮೂರನೇ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಎಲ್‌ಬಿಡಬ್ಲ್ಯೂ ಆಗಿ ಔಟ್ ಮಾಡುವ ಮೂಲಕ ಸ್ಯಾಂಟ್ನರ್ ಭಾರತದ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು. ಈ ಮೂಲಕ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 103 ರನ್‌ಗಳ ಮುನ್ನಡೆ ಸಾಧಿಸಿದೆ.
ನ್ಯೂಜಿಲೆಂಡ್‌ನ ಎರಡನೇ ಇನ್ನಿಂಗ್ಸ್ ಆರಂಭವಾಗಿದ್ದು, ಟಾಮ್ ಲ್ಯಾಥಮ್ ಮತ್ತು ಡೆವೊನ್ ಕಾನ್ವೇ ಉತ್ತಮ ಆರಂಭ ನೀಡಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆರು ಓವರ್‌ಗಳಲ್ಲಿ ತಂಡದ ಸ್ಕೋರನ್ನು 25 ರನ್‌ಗಳಿಗೆ ಕೊಂಡೊಯ್ದರು. ಸ್ಪಿನ್ನರ್‌ಗಳಿಂದಲೇ ಆರಂಭಗೊಳ್ಳುವ ಭಾರತ ತಂಡದ ತಂತ್ರ ವಿಫಲವಾಗುವಂತಿದೆ. ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ ವಿಕೆಟ್ ಪಡೆಯುವಲ್ಲಿ ವಿಫಲವಾಗಿದೆ.
6 ಓವರ್‌ಗಳ ನಂತರ ನ್ಯೂಜಿಲೆಂಡ್ ಸ್ಕೋರ್ 25/0. ಟಾಮ್ ಲ್ಯಾಥಮ್ 15* ಮತ್ತು ಡೆವೊನ್ ಕಾನ್ವೇ 10* ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಒಟ್ಟು ಮುನ್ನಡೆ 128 ರನ್ ಆಗಿದೆ.