Bihar: ಪತ್ನಿಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡಿದ..ಆದ್ರೆ ಪೊಲೀಸಮ್ಮನಾದ ನಂತರ ಪತಿಗೆ ಕೊಟ್ಲು ನೋಡಿ ಬಿಗ್ ಶಾಕ್?

police
Published on

ಗಯಾ: ಪತ್ನಿಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡಿದ ಪತಿಗೆ ಪತ್ನಿ ಬಿಗ್ ಶಾಕ್ ಕೊಟ್ಟಿದ್ದಾಳೆ. ಪೊಲೀಸ್ ನೌಕರಿ ಸಿಕ್ಕ ನಂತರ ಆಕೆ ತನ್ನ ಪತಿಯನ್ನು ತೊರೆದಿದ್ದಾಳೆ. ಬಿಹಾರ(Bihar)ದ ಗಯಾದಲ್ಲಿ ಈ ಘಟನೆ ನಡೆದಿದೆ.

ಗಯಾ ಜಿಲ್ಲೆಯ ಶೇರ್ಘಾಟಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಮಿಥಿಲೇಶ್ ಕುಮಾರ್ ತನ್ನ ಪತ್ನಿಯನ್ನು ಓದಲು ಪ್ರೋತ್ಸಾಹಿಸುತ್ತಿದ್ದ. ಬಿಹಾರದಲ್ಲಿ ಪೊಲೀಸ್ ಉದ್ಯೋಗಕ್ಕೆ ಅಧಿಸೂಚನೆ ಬಂದಾಗ, ಆ ಕೆಲಸ ಪಡೆಯಲು ಆಕೆಗೆ ಎಲ್ಲ ರೀತಿಯಿಂದಲೂ ನೆರವು ನೀಡಿದ. ಆದರೆ, ಆಕೆ ನೌಕರಿ ಸಿಕ್ಕಾಗ ಆತನನ್ನು ಬಿಟ್ಟು ಹೋಗಿದ್ದಾಳೆ. ಈ ಬಗ್ಗೆ ಮಿಥಿಲೇಶ್ ಜಿಲ್ಲಾ ಎಸ್ಪಿ ಆಶಿಶ್ ಭಾರ್ತಿ ಅವರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಗೆ ಎಸ್ಪಿ ಆದೇಶಿಸಿದ್ದಾರೆ.

ಮಿಥಿಲೇಶ್ ಕುಮಾರ್ ಅವರ ಪತ್ನಿ ಪ್ರೀತಿ 2021 ರಲ್ಲಿ ಬಿಹಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆದರು. ಸ್ವಲ್ಪ ಕಾಲ ಇಬ್ಬರೂ ಚೆನ್ನಾಗಿದ್ದರು. ಅವರಿಗೆ ಆರು ವರ್ಷದ ಮಗಳೂ ಇದ್ದಾಳೆ. ಆದರೆ, ಕೆಲಸ ಸಿಕ್ಕಾಗಿನಿಂದ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿತ್ತು. ನಿಧಾನವಾಗಿ ಗಂಡನಿಂದ ದೂರವಾಗಿದ್ದಾಳೆ. ಈಗ ಮನೆ ಬಿಟ್ಟು ಹೋಗಿದ್ದಾಳೆ.

ಫೋನ್ ಮಾಡಿದರೂ ಪಿಕ್ ಮಾಡುತ್ತಿಲ್ಲ ಎಂದು ಪತಿ ಮಿಥಿಲೇಶ್ ದೂರಿನಲ್ಲಿ ತಿಳಿಸಿದ್ದಾರೆ. ಮಿಥಿಲೇಶ್ ತನಗೆ ಪತ್ನಿ ಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ.

ಮಿಥಿಲೇಶ್ ವಾದ ಹೀಗಿದ್ದರೆ, ಪತ್ನಿ ಪ್ರೀತಿ ವಾದವೇ ಬೇರೆ. ಮಿಥಿಲೇಶ್ ತನಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ನನ್ನ ಎಟಿಎಂ ಕಾರ್ಡ್ ತೆಗೆದುಕೊಂಡು ಅದರಲ್ಲಿದ್ದ ಹಣವನ್ನೆಲ್ಲ ತೆಗೆಯುತ್ತಿದ್ದ. ಆತನ ವರ್ತನೆ ಮತ್ತು ಅಭ್ಯಾಸಗಳಿಂದ ಬೇಸತ್ತು ದೂರ ಇರಲು ನಿರ್ಧರಿಸಿದ್ದೇನೆ ಎಂದು ಪ್ರೀತಿ ದೂರಿದ್ದಾರೆ. ಈ ಸಂಬಂಧ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net