IND vs ENG ODI: ಟೀಮ್ ಇಂಡಿಯಾ ಬೌಲರ್​ಗಳ ಆರ್ಭಟಕ್ಕೆ ತತ್ತರಿಸಿದ ಆಂಗ್ಲರು! 248ಕ್ಕೆ ಆಲ್ ​ಔಟ್​

ವಿಜಯವಾಣಿ - 2025-02-06T165841.856
Published on

IND vs ENG 1st ODI: ಇಂದು ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ಪಡೆ 248 ರನ್​ಗಳಿಗೆ ಆಲ್​ ಔಟ್​ ಆಗಿದೆ. ಟೀಮ್ ಇಂಡಿಯಾ ಬೌಲರ್​ಗಳ ಆರ್ಭಟಕ್ಕೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟರ್ಸ್​, ಅಬ್ಬರದ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು.

ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬೌಲಿಂಗ್ ಮಾಡಲು ಅಖಾಡಕ್ಕಿಳಿದ ಟೀಮ್ ಇಂಡಿಯಾ ಬೌಲರ್​ಗಳು, ಒಬ್ಬರಿಗಿಂತ ಒಬ್ಬರು ತಮ್ಮ ಕೈಚಳಕ ತೋರುವಲ್ಲಿ ಮೇಲುಗೈ ಸಾಧಿಸಿದ್ದಾರೆ. ಇದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ವೇಗಿಗಳ ಸಾಲಿನಲ್ಲಿ ಹರ್ಷಿತ್​ ರಾಣಾ 3 ವಿಕೆಟ್​ ಕಬಳಿಸಿದರೆ, ಸ್ಪಿನ್​ ದಾಳಿಯಲ್ಲಿ ರವೀಂದ್ರ ಜಡೇಜಾ ಮೂರು ವಿಕೆಟ್​ ಪಡೆಯುವ ಮೂಲಕ ತಂಡದ ಪರ ಮಿಂಚಿದರು. 53 ರನ್​ ಕೊಟ್ಟು 3 ವಿಕೆಟ್​ ಪಡೆದ ರಾಣಾ ಒಂದೆಡೆಯಾದರೆ, 26 ರನ್​ ನೀಡಿದ ಜಡೇಜಾ 3 ವಿಕೆಟ್​ ಪಡೆದಿದ್ದಾರೆ. ಇವರೊಂದಿಗೆ ಕುಲ್​ದೀಪ್ ಯಾದವ್​, ಅಕ್ಸರ್ ಪಟೇಲ್​ ಮತ್ತು ಮೊಹಮ್ಮದ್​ ಶಮಿ ತಲಾ ಒಂದು ವಿಕೆಟ್​ ಕಬಳಿಸಿದ್ದಾರೆ.

ಇಂಗ್ಲೆಂಡ್​ ಪರ ಬ್ಯಾಟ್​ ಮಾಡಿದ ಫಿಲ್​ ಸಾಲ್ಟ್​ (43 ರನ್, 3 ಸಿಕ್ಸರ್​, 5 ಬೌಂಡರಿ), ಜಾಸ್​ ಬಟ್ಲರ್​ ( 52 ರನ್, 4 ಬೌಂಡರಿ), ಜೆಕಬ್​ ಬೆಥೆಲ್​ (51 ರನ್​, 3 ಬೌಂಡರಿ, 1 ಸಿಕ್ಸರ್​) ಬೆನ್​ ಡಕ್ಕೆಟ್​ (32 ರನ್, 6 ಬೌಂಡರಿ) ತಂಡವನ್ನು 248ಕ್ಕೆ ಕೊಂಡೊಯ್ಯಲು ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net