Smriti Mandhana | ಭಾರತ ತಂಡದ ಪರ ವೇಗದ ಶತಕ; ವಿರಾಟ್​ ಕೊಹ್ಲಿ ದಾಖಲೆ ಮುರಿದ ಸ್ಮೃತಿ ಮಂದಾನ!

Smriti Mandhana
Published on

Smriti Mandhana: ಸ್ಮೃತಿ ಮಂದಾನ, ಭಾರತ ತಂಡದ ಪರ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕದ ಬಾರಿಸಿದ ವಿರಾಟ್​ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ಶನಿವಾರ (ಸೆಪ್ಟೆಂಬರ್ 20) ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಮಂದಾನ, ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಹಿಂದೆ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ, 2012-13ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 52 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಒಂದು ದಶಕಕ್ಕೂ ಹೆಚ್ಚು ಕಾಲ ಈ ದಾಖಲೆಯನ್ನು ಹೊಂದಿದ್ದರು.

3 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ 413 ಬೃಹತ್​ ಮೊತ್ತ ಬೆನ್ನಟ್ಟಿದ ಭಾರತದ ಪರ ಗಟ್ಟಿಯಾಗಿ ನಿಂತು ತಿರುಗೇಟು ನೀಡಿದ ಮಂದಾನ, ಶ್ರೇಷ್ಟ ಕ್ರಿಕೆಟಿಗನ ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಲೆಗ್ ಸೈಡ್​ನಲ್ಲಿ ಸಿಕ್ಸರ್​​ ಬಾರಿಸುವ ಮೂಲಕ ಶತಕದ ಸಂಭ್ರಮಾಚರಣೆ ನಡೆಸಿದರು. ಇದಕ್ಕೂ ಮೊದಲು ಮಂದಾನ ಭಾರತ ಮಹಿಳಾ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ 70 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಸ್ಮೃತಿ ಮಂದಾನ ಶತಕವು ಮಹಿಳಾ ಏಕದಿನ ಕ್ರಿಕೆಟ್​​ ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗದ ಶತಕವಾಗಿದ್ದು, ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಮೆಗ್ ಲ್ಯಾನಿಂಗ್ ಅವರ 45 ಎಸೆತಗಳಲ್ಲಿ ಶತಕ ಬಾರಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net