

IND vs PAK: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಂಬಂಧಿಸಿದಂತೆ ಹೊರಗಿನ ಟೀಕೆಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಸ್ಯಮಯವಾಗಿ ಉತ್ತರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್, ಡ್ರೆಸ್ಸಿಂಗ್ ರೂಮ್ ಬಾಗಿಲು ಮುಚ್ಚಿ, ಮೊಬೈಲ್ ಫೋನ್ ಅನ್ನು ಆಪ್ ಮಾಡಿ ಮಲಗುವುದು ಉತ್ತಮ ಎಂದರು. ಆದರೆ, ಮೈದಾನದಿಂದ ಹೊರಗಿರುವಾಗ ಶಬ್ದವನ್ನು ನಿಭಾಯಿಸುವುದು ಯಾವಾಗಲೂ ಅಸಾಧ್ಯ ಎಂದರು.
ಕಳೆದ ವಾರ ಪಾಕಿಸ್ತಾನ ವಿರುದ್ಧ ಜಯಗಳಿಸಿದ ಭಾರತ ತಂಡ ಪಾಕ್ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿ ಮೈದಾನದಿಂದ ಹೊರ ನಡೆಯಿತು, ಇದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿ, ಸ್ವತಃ ನಾಯಕ ಯಾದವ್ರನ್ನು ನಿಂದಿಸಿದರು. ಪಾಕ್ ತಂಡ ಪಂದ್ಯದ ನಂತರದ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದಷ್ಟೆ ಅಲ್ಲದೇ ರೆಫರಿ ಆಂಡಿ ಪೈಕ್ರಾಫ್ಟ್ ಬಗ್ಗೆಯೂ ದೂರು ಸಲ್ಲಿಸಿದರು.
ಇದನ್ನೂ ಓದಿ:ಕರಪತ್ರಗಳ ಬಿಡುಗಡೆ
ನೀವು ಆಟಗಾರರಿಗೆ ಏನು ಹೇಳಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಯಾದವ್, ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಯಾವುದೇ ಒತ್ತಡವಿಲ್ಲದೆ ತಮ್ಮ ಆಟವನ್ನು ಮುಂದುವರಿಸುವುದು ಅವರ ಮೇಲೆ ಅವಲಂಬಿತವಾಗಿರುತ್ತದೆ. ಈಗಾಗಲೇ ಎಲ್ಲಾ ಹುಡುಗರಿಗೆ ಟೂರ್ನಿಯಲ್ಲಿ ಉತ್ತಮವಾಗಿ ಆಟವಾಡಲು ಬಯಸಿದರೆ ಹೊರಗಿನಿಂದ ಬರುವ ಬಹಳಷ್ಟು ಶಬ್ದದಲ್ಲಿ ನಿಮಗೆ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಿ ಎಂದಿರುವುದಾಗಿ ತಿಳಿಸಿದರು.
ಸೆಪ್ಟೆಂಬರ್ 21 ರ ಭಾನುವಾರದಂದು ಭಾರತ ಸೂಪರ್ 4 ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.(ಏಜೆನ್ಸೀಸ್)