

StartFragment EndFragment Zubeen Garg: ಸಿಂಗಾಪುರದಲ್ಲಿ ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ತೆರಳಿದ್ದ ಭಾರತದ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಸದ್ಯ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಶನಿವಾರ(ಸೆ. 20) ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.
ಈಶಾನ್ಯ ಭಾರತ ಉತ್ಸವದ ಕಾರ್ಯಕ್ರಮದ ಸಲುವಾಗಿ ಸಿಂಗಾಪುರಕ್ಕೆ ತೆರಳಿದ್ದ ಅವರು, ಪ್ರದರ್ಶನ ನೀಡುವ ಮೊದಲೇ ಮೃತಪಟ್ಟಿದ್ದಾರೆ. ಮೊದಲು ಸ್ಕೂಬಾ ಡೈವಿಂಗ್ ವೇಳೆ ಉಸಿರುಗಟ್ಟಿದ್ದರಿಂದ ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ನಿಧನರಾದರು ಎಂದು ಘೋಷಿಸಲಾಗಿತ್ತು. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ; ಶೀಘ್ರದಲ್ಲೇ ಹೈಡ್ರೋಜನ್ ಬಾಂಬ್ ಸಿಡಿಸುತ್ತೇನೆ; ರಾಹುಲ್ ಗಾಂಧಿ| Rahul Gandhi ಆದರೆ ಶನಿವಾರ ಮುಂಜಾನೆ ಅವರು ಸಮುದ್ರದಲ್ಲಿ ಈಜಾಡುವ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಮೊದಲು ಲೈಪ್ ಜಾಕೀಟ್ ಧರಿಸಿ ಸಮುದ್ರಕ್ಕೆ ಹಾರುವುದು ದಾಖಲಾಗಿದೆ. ಬಳಿಕ ಮತ್ತೊಮ್ಮೆ ಲೈಫ್ ಜಾಕೇಟ್ ತೆಗೆದು ಜಿಗಿದಿದ್ದಾರೆ ಎನ್ನಲಾಗಿದ್ದು, ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಈಶಾನ್ಯ ಭಾರತ ಉತ್ಸವದ ಆಯೋಜಕ ಶ್ಯಾಮಕಾನು ಮಹಾಂತ ಮತ್ತು ಗಾಯಕಿಯ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ವಿರುದ್ಧ ಮೋರಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಅಸ್ಸಾಂನ ಬೇರೆ ಬೇರೆ ಠಾಣೆಗಳಲ್ಲೂ ಎಫ್‌ಐಆರ್ ದಾಖಲಾಗಿವೆ ಎನ್ನಲಾಗಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಹಿಮಂತ್ ಬಿಸ್ವಾ ಶರ್ಮಾ, ನಮ್ಮ ಪ್ರೀತಿಯ ಜುಬೀನ್ ಗಾರ್ಗ್ ಅವರ ದುರದೃಷ್ಟಕರ ಮತ್ತು ಅಕಾಲಿಕ ಮರಣಕ್ಕೆ ಸಂಬಂಧಿಸಿದಂತೆ ಶ್ರೀ ಸ್ಯಾಮಕಾನು ಮಹಾಂತ ಮತ್ತು ಶ್ರೀ ಸಿದ್ಧಾರ್ಥ ಶರ್ಮಾ ವಿರುದ್ಧ ಅನೇಕ ಎಫ್‌ಐಆರ್‌ಗಳು ದಾಖಲಾಗಿವೆ. ಎಲ್ಲಾ ಎಫ್‌ಐಆರ್‌ಗಳನ್ನು ಸಿಐಡಿಗೆ ವರ್ಗಾಯಿಸಲು ಮತ್ತು ಸಮಗ್ರ ತನಿಖೆಗಾಗಿ ಏಕೀಕೃತ ಪ್ರಕರಣವನ್ನು ದಾಖಲಿಸಲು ನಾನು @DGPAssamPolice ಗೆ ನಿರ್ದೇಶಿಸಿದ್ದೇನೆ" ಎಂದು ಹೇಳಿದ್ದಾರೆ. (ಏಜೆನ್ಸೀಸ್)