ಏಷ್ಯಾದ ಮೊದಲ ರೈಲ್ವೆ ಮಹಿಳಾ ಲೋಕೋ ಪೈಲಟ್​; 36 ವರ್ಷಗಳ ಸೇವೆಗೆ ನಿವೃತ್ತಿ; ಯಾರೂ ಈ ಸುರೇಖಾ ಯಾದವ್? ಇಲ್ಲಿದೆ ನೋಡಿ ಸಾಧಕಿಯ ಕಥೆ| Surekha Yadav

Untitled design (59)
Published on

Surekha Yadav: ಪ್ರಪಂಚದ ಯಾವುದೇ ವಿಭಾಗದಲ್ಲೂ ಮೊದಲು ಹೆಜ್ಜೆ ಇಟ್ಟವರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎನ್ನುವುದು ಐತಿಹಾಸಿಕ ಸತ್ಯ. ಮೊದಲ ಪ್ರಧಾನಿ, ಮೊದಲ ಗಗನ ಸಖಿ, ಮೊದಲ ಗಗನಯಾತ್ರಿ ಹೀಗೆ ಅನೇಕ ವಿಭಾಗಗಳಲ್ಲಿ ಮಹಿಳಾ ಸಾಧಕರನ್ನು ನೋಡಬಹುದು. ಅದು ಇಂದಿರಾ ಗಾಂಧಿಯಿಂದ ಹಿಡಿದು ಕಲ್ಪನಾ ಚಾವ್ಲಾವರೆಗೂ ಇರಬಹದು. ಆದರೆ ಇಂದು ನಿಮಗೆ ನಾನು ಹೇಳಲು ಹೊರಟಿದ್ದು ರೈಲ್ವೆ ಇಲಾಖೆಯಲ್ಲಿ ತನ್ನದೇ ಮೈಲುಗಲ್ಲು ಸೃಷ್ಟಿಸಿದ ಮತ್ತೊಬ್ಬ ಸಾಮಾನ್ಯ ಮಹಿಳೆಯ ಕಥೆ ಇದು.

ಪುರುಷರಿಗೆ ಅಷ್ಟೇ ರೈಲ್ವೆ ಇಲಾಖೆ ಅಂತಹ ವಿಭಾಗದಲ್ಲಿ ಕೆಲಸ ಮಾಡಬಹುದು ಎಂದುಕೊಂಡಿದ್ದ ಕಾಲದಲ್ಲಿ, ಮೊಟ್ಟ ಮೊದಲ ಬಾರಿಗೆ ನಾನು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬಹುದು ಎಂದು ಏಷ್ಯದ ಮೊದಲ ಮಹಿಳಾ ರೈಲ್ವೆ ಪೈಲಟ್ ಆದ ಸುರೇಖಾ ಯಾದವ್ ಕಥೆ ಇದು. ಅವರು ಇದೇ ಸೆ. 30ರಂದು ತಮ್ಮ 36 ವರ್ಷಗಳ ಭಾರತೀಯ ರೈಲ್ವೆಯೊಂದಿಗಿನ ವೃತ್ತಿ ಜೀವನಕ್ಕೆ 60ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಜೊತೆಗೆ ಇಂದು ರೈಲ್ವೆಯಲ್ಲಿ ಕೆಲಸ ಮಾಡುವ ಸಾವಿರಾರು ಮಹಿಳಾ ಉದ್ಯೋಗಿಗಳಿಗೆ ಸ್ಪೂರ್ತಿ ನೀಡಿ ನಿವೃತ್ತಿಯಾಗುತ್ತಿದ್ದಾರೆ.

ಯಾರು ಈ ಸುರೇಖಾ ಯಾದವ್? ಸುರೇಖಾ ಯಾದವ್, ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ(ಲೋಕೋ ಪೈಲಟ್​). ಮಹಾರಾಷ್ಟ್ರದ ಸತಾರಾದ ಸಾಧಾರಣ ರೈತನ ಮಗಳು. ಸರ್ಕಾರಿ ಪಾಲಿಟೆಕ್ನಿಕ್ ಕರಾದ್‌ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದ ಬಳಿಕ 1989ರಲ್ಲಿ ಕೇಂದ್ರ ರೈಲ್ವೆಯಲ್ಲಿ ಸಹಾಯಕ ಚಾಲಕಿಯಾಗಿ ಕೆಲಸಕ್ಕೆ ಸೇರಿದರು. ಲೋಕೋಮೋಟಿವ್ ಕ್ಯಾಬಿನ್‌ಗಳನ್ನು ಪುರುಷರಿಗಷ್ಟೇ ಸೀಮಿತ ಎಂದು ನೋಡುತ್ತಿದ್ದ ಕಾಲದಲ್ಲಿ ಸುರೇಖಾ ಅವರು ಆತ್ಮವಿಶ್ವಾಸ ಮತ್ತು ದೃಢನಿಶ್ಚಯದಿಂದ ಕೆಲಸ ಆರಂಭಿಸಿದ ಮೊದಲ ಮಹಿಳೆ.

StartFragment ಏಷ್ಯಾದ ಖಂಡದ ಮೊದಲ ಲೋಕೋಮೋಟಿವ್ ಪೈಲಟ್ ಆಗುವುದರ ಜೊತೆಗೆ, ಇಲಾಖೆಯಲ್ಲಿ ಹಲವು ಮೈಲುಗಳನ್ನು ಸ್ಥಾಪಿಸಿದ್ದಾರೆ. 1996ರಲ್ಲಿ ಮೊದಲು ಗೂಡ್ಸ್​ ರೈಲು ಚಾಲಕರಾದರು, 2000ರಲ್ಲಿ ಮೋಟಾರ್ ವುಮನ್ ಹುದ್ದೆ ನಿಭಾಯಿಸಿದರು. 201 ರ ಹೊತ್ತಿಗೆ, ಅವರಿಗೆ ಭಾರತೀಯ ರೈಲ್ವೆಯಲ್ಲಿ ಅತ್ಯಂತ ಕಠಿಣ ಕೆಲಸಗಳಲ್ಲಿ ಒಂದಾದ ಮುಂಬೈ ಮತ್ತು ಪುಣೆ ನಡುವಿನ ಅಪಾಯಕಾರಿ ಭೋರ್ ಘಾಟ್ ಪ್ರದೇಶದಲ್ಲಿ ರೈಲುಗಳನ್ನು ಓಡಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಇಲ್ಲಿನ ಇಳಿಜಾರುಗಳು 1:37 ರಷ್ಟು ಕಡಿದಾದವು. ಇದು ದೇಶದ ಅತ್ಯಂತ ಸವಾಲಿನ ರೈಲ್ವೆ ಮಾರ್ಗಗಳಲ್ಲಿಒಂದಾಗಿದೆ. ಐಕಾನಿಕ್ ಡೆಕ್ಕನ್ ಕ್ವೀನ್, ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಅಂತಿಮವಾಗಿ, ಆಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿವೆ.  ಇದನ್ನೂ ಓದಿ: ಜಮ್ಮು-ಕಾಶ್ಮೀರದ ಉದಂಪುರದಲ್ಲಿ ಭದ್ರತಾ ಪಡೆಗಳು-ಉಗ್ರರ ನಡುವೆ ಗುಂಡಿನ ಚಕಮಕಿ; ಓರ್ವ ಯೋಧ ಹುತಾತ್ಮ| Soldier martyred ಪ್ರಸ್ತುತ ಥಾಣೆ ನಿವಾಸಿಯಾಗಿರುವ ಸುರೇಖಾ ಯಾದವ್, ತನ್ನ ಯಶಸ್ಸಿಗೆ ತನ್ನ ತಂದೆ-ತಾಯಿಯ ಪ್ರೋತ್ಸಾಹವೇ ಕಾರಣ. ಅವರೆಂದು ಪುರುಷರು ಮಾಡುವಂತಹ ಕೆಲಸವನ್ನು ನೀನೇಕೆ ಮಾಡುತ್ತೀಯಾ ಎಂದು ನನಗೆ ಅಡ್ಡಿ ಪಡಿಸಲಿಲ್ಲ ಎನ್ನುತ್ತಾರೆ. ಅವರ ಪತಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ಇಂಜಿನಿಯರಿಂಗ್ ಮಾಡಿದ್ದು ವಿವಾಹವಾಗಿ ಕೆಲಸ ಮಾಡುತ್ತಿದ್ದಾರೆ.

ಮುಂದಿನ ಪೀಳಿಗೆಗೆ ಸ್ಫೂರ್ತಿ

ಸುರೇಖಾ ಯಾದವ್ ಅವರು ಮೊದಲು ರೈಲ್ವೆ ಲೋಕಕ್ಕೆ ಕಾಲಿಟ್ಟಾಗ, ಮಹಿಳಾ ಲೋಕೋ ಪೈಲಟ್‌ಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಇಂದು ಭಾರತದಾದ್ಯಂತ 1,500 ಕ್ಕೂ ಹೆಚ್ಚು ಮಹಿಳಾ ರೈಲು ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ, ಇದು ಅವರ ಧೈರ್ಯಕ್ಕೆ ಕಾರಣವಾದ ಗಮನಾರ್ಹ ಬದಲಾವಣೆಯಾಗಿದೆ ಎನ್ನಬಹುದು.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಇಲಾಖೆ, ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಶ್ರೀಮತಿ ಸುರೇಖಾ ಯಾದವ್ ಅವರು ತಮ್ಮ 36 ವರ್ಷಗಳ ಅದ್ಭುತ ಸೇವೆಯ ನಂತರ ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದಾರೆ. ನಿಜವಾದ ಮಾರ್ಗದರ್ಶಕಿ. ಎಲ್ಲಾ ಅಡೆತಡೆಗಳನ್ನು ಮುರಿದರು. ಅಸಂಖ್ಯಾತ ಮಹಿಳೆಯರಿಗೆ ಸ್ಫೂರ್ತಿ ನೀಡಿದರು. ಯಾವುದೇ ಕನಸನ್ನು ಸಾಧ್ಯ ಮಾಡಬಹುದು ಎನ್ನುವುದನ್ನು ದೃಢಪಡಿಸಿದರು. ಅವರ ಪ್ರಯಾಣವು ಭಾರತೀಯ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ಸಂಕೇತವಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಪೋಸ್ಟ್ ಹಾಕಿ ಅಭಿನಂದಿಸಿದೆ.

ಸೆಪ್ಟಂಬರ್ 18ರಂಂದು ರೈಲು ಸಂಖ್ಯೆ 22222, ಹಜರತ್ ನಿಜಾಮುದ್ದೀನ್-ಸಿಎಸ್‌ಎಂಟಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಚಲಾಯಿಸಿಕೊಂಡು ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ)ಗೆ ಬಂದ ಸುರೇಖಾ ಯಾದವ್ ಅವರನ್ನು ಅವರ ಸಹ ರೈಲು ಚಾಲಕರು, ಇಲಾಖೆ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಸನ್ಮಾನಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net