ಜಮ್ಮು-ಕಾಶ್ಮೀರದ ಉದಂಪುರದಲ್ಲಿ ಭದ್ರತಾ ಪಡೆಗಳು-ಉಗ್ರರ ನಡುವೆ ಗುಂಡಿನ ಚಕಮಕಿ; ಓರ್ವ ಯೋಧ ಹುತಾತ್ಮ| Soldier martyred

Untitled design (55)
Published on

Soldier martyred: ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದಾನೆ ಎಂದು ಶನಿವಾರ (ಸೆ. 20) ವರದಿಯಾಗಿದೆ.

ಉಧಂಪುರ, ದೋಡಾ ಮತ್ತು ಕಥುವಾ ಜಿಲ್ಲೆಗಳನ್ನು ಸಂಪರ್ಕಿಸುವ ಪರ್ವತ ಶ್ರೇಣಿಯ ತ್ರಿ-ಜಂಕ್ಷನ್ ಆಗಿರುವ ಉಧಂಪುರ ಬಸಂತ್‌ಗಢ ಪ್ರದೇಶದಲ್ಲಿ ಉಗ್ರರಿರುವ ಬಗ್ಗೆ ಗುಪ್ತಚರ ಮಾಹಿತಿ ಆಧಾರಸಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಸೇನೆ‘ ಹೇಳಿದ ಬಳಿಕ ಗುಂಡಿನ ಚಕಮಕಿ ನಡೆದಿದೆ.

ಉಗ್ರರು ಕಾಡಿನಲ್ಲಿ ಯುದ್ಧ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಬಸಂತಗಢದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತವೆ. ಕಳೆದ ಎರಡು ವಾರಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಎರಡನೇ ಪ್ರಮುಖ ಎನ್‌ಕೌಂಟರ್ ಇದಾಗಿದೆ. ಇದಕ್ಕೂ ಮೊದಲು, ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಇಬ್ಬರು ಸೈನಿಕರು ಹುತಾತ್ಮರಾಗಿದ್ದು, ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದರು.

ಭಯೋತ್ಪಾದನೆಯಿಂದ ಮುಕ್ತವಾಗಿದ್ದ ಜಮ್ಮು ಪ್ರದೇಶವು ಕಳೆದ ನಾಲ್ಕು ವರ್ಷಗಳಲ್ಲಿ ಪ್ರಮುಖ ಭದ್ರತಾ ಸವಾಲಾಗಿದೆ. ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚಾದ ಕಾರಣ, ಸರ್ಕಾರವು ಈ ಪ್ರದೇಶದಲ್ಲಿ ಸಾವಿರಾರು ಸೈನಿಕರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net