

H-1B Visa: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ H-1B ವೀಸಾ ಉದ್ಯೋಗಿಗಳ ಮೇಲೆ ವಾರ್ಷಿಕ $100,000 ಶುಲ್ಕ ಏರಿಕೆ ಆದೇಶಕ್ಕೆ ಸಹಿ ಮಾಡಿ ಜಾರಿಗೊಳಿಸುತ್ತಿದ್ದಂತೆ ಮೇಟಾ, ಮೈಕ್ರೋಸಾಫ್ಟ್ ಅಂತ ಐಟಿ ಕಂಪನಿಗಳು ಭಾರತ ಸೇರಿ ವಿದೇಶದಲ್ಲಿರುವ H-1B ವೀಸಾ ಹೊಂದಿರುವ ತನ್ನ ಉದ್ಯೋಗಿಗಳಿಗೆ 24 ಗಂಟೆಯಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟರಲ್ಲೇ ಅಮೆರಿಕಾಗೆ ಮರುಳುವಂತೆ ಇ-ಮೇಲ್ ಮೂಲಕ ಸೂಚಿಸಿವೆ. ಜೊತೆಗೆ 14 ದಿನಗಳವರೆಗೆ ಯಾರು ಅಮೆರಿಕಾ ತೊರೆಯದಂತೆ ಒತ್ತಾಯಿಸಿವೆ ಎಂದು ವರದಿಯಾಗಿದೆ.
ಐಟಿ ಕಂಪನಿಗಳು ಪ್ರಸ್ತುತ ಅಮೆರಿಕದ ಹೊರಗೆ ವಾಸಿಸುತ್ತಿರುವ ತಮ್ಮ ಉದ್ಯೋಗಿಗಳಿಗೆ ಮರು ಪ್ರವೇಶ ನಿರಾಕರಣೆಯನ್ನು ತಪ್ಪಿಸಲು 24 ಗಂಟೆಗಳ ಒಳಗೆ ದೇಶಕ್ಕೆ ಮರಳುವಂತೆ ಒತ್ತಾಯಿಸಿವೆ. ಮುಂದಿನ ಭವಿಷ್ಯಕ್ಕಾಗಿ ನಿರ್ದೇಶನಗಳನ್ನು ಪಾಲಿಸುವಂತೆ ವಿದೇಶಿ ಉದ್ಯೋಗಿಗಳಿಗೆ ಇ-ಮೇಲ್ನಲ್ಲಿ ಸೂಚಿಸಿವೆ.
ಸೆ. 21ರಿಂದ ಜಾರಿಗೆ ಬರುವಂತೆ ಟ್ರಂಪ್ ತಂದಿರುವ ಈ H-1B ವೀಸಾ ಶುಲ್ಕ ನಿಯಮ ಭಾರತ ಮತ್ತು ಚೀನಾದ ಕೌಶಲ್ಯಬರಿತ ಉದ್ಯೋಗಿಗಳನ್ನು ಅವಲಂಬಿಸಿರುವ ಅಮೆರಿಕಾದ ತಂತ್ರಜ್ಞಾನ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ ಎನ್ನಲಾಗೊದೆ. ಈ ಕುರಿತು ಮಾತನಾಡಿರುವ ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ಬದಲಾವಣೆಯನ್ನು ತಂತ್ರಜ್ಞಾನ ವಲಯ ಸ್ವಾಗತಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ನೀವು ಯಾರಿಗಾದರೂ ತರಬೇತಿ ನೀಡಬೇಕು, ಉದ್ಯೋಗಿಗಳು ಬೇಕು ಅಂದ್ರೆ ನಮ್ಮದೇ ದೇಶಾದ್ಯಂತ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚೆಗೆ ಪದವಿ ಪಡೆದ ಒಬ್ಬರಿಗೆ ತರಬೇತಿ ನೀಡಿ ಉದ್ಯೋಗ ಕೊಡಿ. ಅಮೆರಿಕನ್ನೆರಿಗೆ ಕೆಲಸ ನೀಡಿ, ಹೊರಗಿನಿಂದ ಉದ್ಯೋಗಿಗಳನ್ನು ಕರೆತರುವುದು ನಿಲ್ಲಿಸಿ ಎಂದು ಹೇಳಿದ್ದಾರೆ.
H-1B ವೀಸಾ ಎಂದರೇನು?
ಈ H-1B ವೀಸಾವು ಅಮೆರಿಕಾದಲ್ಲಿ ತಾತ್ಕಾಲಿಕವಾಗಿ ಕೆಲಸದ ಪರವಾನಗಿ ಪಡೆಯುವ ವ್ಯವಸ್ಥೆಯಾಗಿದೆ. ಇದು ಅಮೆರಿಕದ ಕಂಪನಿಗಳು ವಿಶೇಷ ಹುದ್ದೆಗಳಿಗೆ ವಿದೇಶಿ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಹುದ್ದೆಗಳು ಸಾಮಾನ್ಯವಾಗಿ ಐಟಿ, ಎಂಜಿನಿಯರಿಂಗ್, ಗಣಿತ, ವೈದ್ಯಕೀಯ ಮತ್ತು ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಜ್ಞಾನ ಅಥವಾ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿರುವ ವೃತ್ತಿಪರರಿಗೆ ನೀಡಲಾಗುತ್ತದೆ.
ಈ ವೀಸಾ ವ್ಯವಸ್ಥೆಯು ಅರ್ಹ ವೃತ್ತಿಪರರನ್ನು ಆರಂಭದಲ್ಲಿ ಮೂರು ವರ್ಷಗಳ ಅವಧಿಗೆ, ನಂತರ ಆರು ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ. ಅಮೆರಿಕದ ಕೌಶಲ್ಯ ಕಾರ್ಮಿಕರ ಕೊರತೆಯನ್ನು ಇದು ನೀಗಿಸಲು ಸಹಾಯ ಮಾಡುತ್ತದೆ. ಈ ವೀಸಾ ಹೊಂದಿರುವವರು ಕಂಪನಿಯಲ್ಲಿ ಉದ್ಯೋಗವನ್ನು ನಿರ್ವಹಿಸುತ್ತಾ ಅಮೆರಿಕದಲ್ಲಿ ಕಾನೂನುಬದ್ಧವಾಗಿ ವಾಸಿಸಬಹುದು ಮತ್ತು ಕೆಲಸ ಮಾಡಬಹುದು.
ಪ್ರಸ್ತುತ H-1B ವೀಸಾ ವೆಚ್ಚ ಎಷ್ಟು?
ಅಸ್ತಿತ್ವದಲ್ಲಿರುವ H-1B ವೀಸಾ ಅರ್ಜಿ ಶುಲ್ಕಗಳು ಈಗಾಗಲೇ ಹೆಚ್ಚಾಗಿದೆ. ಈ ಕುರಿತು ವರದಿ ಮಾಡಿರುವ ಸಿಬಿಎಸ್ ನ್ಯೂಸ್ ಪ್ರಕಾರ, ಇದು $1,700 ರಿಂದ $4,500 ರ ನಡುವೆ ಬದಲಾಗುತ್ತದೆ, ಹೆಚ್ಚಿನ ಮೊತ್ತವು ತ್ವರಿತ ಪ್ರಕ್ರಿಯೆಗೆ ಅನ್ವಯಿಸುತ್ತದೆ ಎಂದು ಹೇಳಿದೆ. ಉದ್ಯೋಗಿಗಳು ಈ ಶುಲ್ಕವನ್ನು ಸಾಮಾನ್ಯವಾಗಿ ಈ ವೆಚ್ಚವನ್ನು ಕಾರ್ಯಾಚರಣೆಯ ವೆಚ್ಚವೆಂದು ವರ್ಗೀಕರಿಸುತ್ತಾರೆ. H-1B ವೀಸಾಗಳಿಗೆ ಉದ್ಯೋಗಿಗಳಿಗೆ ಪ್ರಸ್ತುತ ಪಾವತಿಸಬೇಕಾದ $4,500 ಶುಲ್ಕಕ್ಕಿಂತ ಶೇ.22.2ರಷ್ಟು ಹೆಚ್ಚಿಸಲಾಗಿದೆ.
H-1B ವೀಸಾ ಶುಲ್ಕದಿಂದ ಭಾರತೀಯ ಐಟಿ ಉದ್ಯೋಗಿಗಳಿಗೆ ಕಷ್ಟ
ಅಮೆರಿಕಾದ H-1B ವೀಸಾ ಪಡೆಯುವ ಉದ್ಯೋಗಿಗಳಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆ. ಕಳೆದ ವರ್ಷವೂ H-1B ವೀಸಾಗಳನ್ನು ಪಡೆದವರಲ್ಲಿ ಭಾರತೀಯರು ಶೇ. 71ರಷ್ಟು ಪಡೆದಿದ್ದಾರೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳುತ್ತಿವೆ. ಚೀನಾ 11.7% ರಷ್ಟಿದೆ. 2025ರ ಮೊದಲಾರ್ಧದಲ್ಲಿ, ಅಮೆಜಾನ್ ಮತ್ತು ಅದರ ಕ್ಲೌಡ್ ಘಟಕ AWS 12,00 ಕ್ಕೂ ಹೆಚ್ಚು H-1B ವೀಸಾಗಳಿಗೆ ಅನುಮೋದನೆಯನ್ನು ಪಡೆದುಕೊಂಡಿವೆ. ಆದರೆ ಮೈಕ್ರೋಸಾಫ್ಟ್ ಮತ್ತು ಮೆಟಾ ತಲಾ 5,000 ಕ್ಕೂ ಹೆಚ್ಚು ಅನುಮೋದನೆಗಳನ್ನು ಪಡೆದಿವೆ.
ಈ ಶುಲ್ಕ ಏರಿಕೆಯಿಂದ ತಂತ್ರಜ್ಞಾನ ವಲಯದ ಜೊತೆ ಭಾರತೀಯ ಐಟಿ ವಲಯದಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿದ. ಅಮೆರಿಕಾದ ಕಂಪನಿಗಳು ವಿದೇಶಗಳಿಂದ H-1B ವೀಸಾಗಳಲ್ಲಿ ವೃತ್ತಿಪರರನ್ನು ನೇಮಿಸಿಕೊಳ್ಳುವ ಸಂಸ್ಥೆಗಳು ಪ್ರತಿ ಅರ್ಜಿಗೆ $100,000 ಭಾರಿ ಶುಲ್ಕ ಪಾವತಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸುತ್ತವೆ. ಇದರಿಂದ ಅಮೆರಿಕದಲ್ಲಿರುವ ಭಾರತೀಯ ಐಟಿ ವೃತ್ತಿಪರರು ಮತ್ತು ಕಾರ್ಮಿಕರ ಪರಿಣಾಮ ಬೀರುತ್ತವೆ ಎನ್ನಲಾಗಿದೆ.
H-1B ವೀಸಾ ಶುಲ್ಕ ಹೆಚ್ಚಳದಿಂದ ಯಾವ ಕಂಪನಿಗಳ ಮೇಲೆ ಪರಿಣಾಮ?
ಫೆಡರಲ್ ಮಾಹಿತಿ ಪ್ರಕಾರ, ಜೂನ್ 2025 ರ ಹೊತ್ತಿಗೆ ಅಮೆಜಾನ್ 10,044 H-1B ವೀಸಾ ಅನುಮೋದನೆ ಪಡೆದು ಮುಂಚೂಣಿಯಲ್ಲಿದೆ. TCS 5,505 ಅನುಮೋದಿತ ವೀಸಾಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೈಕ್ರೋಸಾಫ್ಟ್ ಮತ್ತು ಮೆಟಾ ಕ್ರಮವಾಗಿ 5,189 ಮತ್ತು 5,123 ಅನುಮೋದನೆಗಳೊಂದಿಗೆ ಹಿಂದೆ-ಮುಂದಿನ ಸ್ಥಾನದಲ್ಲಿವೆ. ಆಪಲ್ 4,202 ವೀಸಾ, ಗೂಗಲ್ 4,181 ವೀಸಾ . ಡೆಲಾಯ್ಟ್ 2,353, ಇನ್ಫೋಸಿಸ್ 2,004, ವಿಪ್ರೋ 1,523 ಮತ್ತು ಟೆಕ್ ಮಹೀಂದ್ರಾ ಅಮೆರಿಕಾಸ್ 951 ವೀಸಾ ಅನುಮೋದನೆಗಳನ್ನು ಪಡೆದಿವೆ ಎಂದು ಪಿಟಿಐ ವರದಿ ಮಾಡಿದೆ. ಹೊಸ ಶುಲ್ಕ ನೀತಿಯಿಂದ ಈ ಎಲ್ಲಾ ಕಂಪನಿಗಳ ಮೇಲೆ ಪರಿಣಾಮ ಬೀರಬಹುದೆಂದು ಅಂದಾಜಿಸಲಾಗಿದೆ. (ಏಜೆನ್ಸೀಸ್)