ಭಾರತ ಉದ್ಯೋಗಿಗಳಿಗೆ ಟ್ರಂಪಾಘಾತ: H-1B ವೀಸಾಗಳ ಮೇಲೆ 1 ಲಕ್ಷ ಡಾಲರ್​ ಶುಲ್ಕ ಘೋಷಣೆ!

Untitled design - 2025-09-20T101551.269
Published on

ಎಚ್​-1 ವೀಸಾಗಳ(H-1B) ಮೇಲಿನ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್​ಗೆ ಏರಿಕೆ ಮಾಡಲಾಗಿದೆ ಎಂಬ ನಿಯಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಹಿ ಹಾಕಿದ್ದಾರೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಘೋಷಿಸಿದ್ದಾರೆ. ಈ ಮೂಲಕ ಭಾರತ ಉದ್ಯೋಗಿಗಳಿಗ ಮೇಲೆ ಭಾರೀ ಪರಿಣಾಮ ಬಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

H-1B ವೀಸಾ ಹೊಂದಿರುವವರಲ್ಲಿ ಭಾರತೀಯರು 70% ಕ್ಕಿಂತ ಹೆಚ್ಚು ಇರುವುದರಿಂದ, ಈ ನಿರ್ಬಂಧಗಳು ಅಮೆರಿಕದಲ್ಲಿರುವ ಭಾರತೀಯ ವಲಸಿಗರಿಗೆ ವಿಶೇಷವಾಗಿ ಹಾನಿಕಾರಕವಾಗಬಹುದು. ಅಲ್ಲದೆ, ಶ್ರೀಮಂತ ವ್ಯಕ್ತಿಗಳಿಗೆ ಯುಎಸ್ ಪೌರತ್ವದ ಮಾರ್ಗವಾಗಿ 1 ಮಿಲಿಯನ್ ಡಾಲರ್ ಮೌಲ್ಯದ "ಗೋಲ್ಡ್ ಕಾರ್ಡ್" ವೀಸಾವನ್ನು ಹೊರತಂದಿದ್ದಾರೆ.

ಇನ್ನು ಈ ವೀಸಾದ ಪ್ರಸ್ತಾವನೆಯಲ್ಲಿ ಕಂಪನಿಗಳು ಮೂರು ವರ್ಷಗಳ ವೀಸಾ ಅವಧಿಗೆ ಪ್ರತಿ H-1B ಕೆಲಸಗಾರನಿಗೆ $300,000(3 ಲಕ್ಷ ಡಾಲರ್​) ಪಾವತಿಸಬೇಕಾಗುತ್ತದೆ. ಇದು ಕೆಲವು ಕಾನೂನು ಸವಾಲುಗಳನ್ನು ಎದುರಿಸುತ್ತಿದೆ. ಇದು ಕಾನೂನು ಆಗಿ ಜಾರಿಗೆ ಬಂದರೆ, ವೀಸಾ ಬೆಲೆ ಗಗನಕ್ಕೇರಲಿದೆ.

"ಅಮೆರಿಕನ್ನರಿಗೆ ತರಬೇತಿ ನೀಡಿ. ನಮ್ಮ ಕೆಲಸಗಳನ್ನು ತೆಗೆದುಕೊಳ್ಳಲು ಹೊರಗಿನ ಜನರನ್ನು ಕರೆತರುವುದನ್ನು ನಿಲ್ಲಿಸಿ" ಎಂದು ಲುಟ್ನಿಕ್ ಹೇಳಿದ್ದಾರೆ.

H-1B ವೀಸಾ ಎಂದರೇನು?

H-1B ವೀಸಾ ತಾತ್ಕಾಲಿಕ US ಕೆಲಸದ ವೀಸಾ ಆಗಿದ್ದು, ಕಂಪನಿಗಳು ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು 1990ರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ಹೊಂದಿರುವ ಜನರಿಗೆ ರಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net