ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್​ ಇಂಡಿಯಾ ಗೆದ್ದ ಹಣವೆಷ್ಟು?; ಇದನ್ನು ಆಟಗಾರರಿಗೆ ಹೇಗೆ ಹಂಚಲಾಗುತ್ತೆ ತಿಳಿಯಿರಿ | Champions Trophy

dk - 2025-03-11T165956.379
Published on

Champions Trophy : ಇದೇ ಮಾ.09ರಂದು ದುಬೈನಲ್ಲಿ ನ್ಯೂಜಿಲೆಂಡ್​ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲ್ಲುವ ಮೂಲಕ ಮಿನಿ ವಿಶ್ವಕಪ್​ ಎಂದೇ ಖ್ಯಾತಿಯಾಗಿರುವ ಚಾಂಪಿಯನ್ಸ್​ ಟ್ರೋಫಿ ಕಿರೀಟ ಮುಡಿಗೇರಿಸಿಕೊಂಡಿತು. ಈ ಹಿನ್ನೆಲೆ ಕಿರೀಟದ ಜತೆಗೆ ಬೃಹತ್​ ಮೊತ್ತದ ಹಣದ ಚೆಕ್​ ಅನ್ನು ನೀಡುತ್ತಾರೆ. ಆದರೆ, ಟೂರ್ನಿಯಲ್ಲಿ ಗೆದ್ದ ಹಣವನ್ನು ಆಟಗಾರರಿಗೆ ಹೇಗೆ ಹಂಚುತ್ತಾರೆ ಎಂದು ಯೋಚಿಸಿದ್ದೀರಾ?

12 ವರ್ಷಗಳ ಬಳಿಕ ಟೀಮ್​ ಇಂಡಿಯಾ ಚಾಂಪಯನ್ಸ್​ ಟ್ರೋಫಿ ಗೆದ್ದಿದೆ. ಈ ಮೊದಲುಗಿಂತ ಈ ಬಾರಿಯ ಟ್ರೋಫಿಯ ಮೊತ್ತದ ಅಧಿಕವಾಗಿದ್ದು, ಗೆದ್ದ ತಂಡಕ್ಕೆ 20 ಕೋಟಿ ರೂ. ನೀಡಿದ್ದಾರೆ. ಆದರೆ, ಟೀಮ್​ ಇಂಡಿಯಾದ ವಿರುದ್ಧ ಸೋತಿರುವ ನ್ಯೂಜಿಲೆಂಡ್​ ತಂಡ ಕೂಡ ಬರಿಗೈಲಿ ಹಿಂತಿರುಗಿಲ್ಲ. ಅವರಿಗೂ ಒಂದು ಮೊತ್ತದ ಹಣ ಸಿಕ್ಕಿದೆ. ಈ 20 ಕೋಟಿ ರೂ. ಹಣದಲ್ಲಿ ತಂಡದ ಆಟಗಾರರಿಗೆ ಹೇಗೆ ಹಂಚುತ್ತಾರೆ? ಪ್ರತಿಯೊಬ್ಬ ಆಟಗಾರರಿಗೆ ಎಷ್ಟು ಸಿಗುತ್ತದೆ ಎಂಬುದನ್ನೂ ನೋಡೋಣ.

2024ರ ಟಿ-20 ವಿಶ್ವಕಪ್​ಗೆ ಬಂದ ಹಣ ವಿತರಿಸಿದ್ದೇಗೆ..?

2024ರ ಜುಲೈನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಗೆದ್ದ ಟೀಮ್​ ಇಂಡಿಯಾ ಕಪ್​ ಜತೆಗೆ 125 ಕೋಟಿ ರೂ. ಹಣ ಬಹುಮಾನವಾಗಿ ಸಿಕ್ಕಿತ್ತು. ವರದಿಯ ಪ್ರಕಾರ, ಈ ಅವಧಿಯಲ್ಲಿ ಟೀಮ್​ ಇಂಡಿಯಾದ 15 ಆಟಗಾರರರಿಗೆ ತಲಾ 5 ಕೋಟಿ ರೂ. ವಿತರಿಸಲಾಗಿದೆ. ಅಲ್ಲದೆ, ರಿಂಕು ಸಿಂಗ್​, ಶುಭ್ಮನ್​ ಗಿಲ್, ಅವೇಶ್​ಖಾನ್​ ಮತ್ತು ಖಲೀಲ ಆಹ್ಮದ್​ ಸೇರಿದಂತೆ ನಾಲ್ವರು ಮೀಸಲು ಆಟಗಾರರಿಗೆ ತಲಾ 1 ಕೋಟಿ ರೂ. ಪಡೆದಿದ್ದಾರೆ.

ಇದರ ಜತೆ ಮುಖ್ಯ ಕೋಚ್​ ರಾಹುಲ್​​ ದ್ರಾವಿಡ್​ಗೆ ​2.5 ಕೋಟಿ ರೂ., ಬ್ಯಾಟಿಂಗ್​, ಬೌಲಿಂಗ್​ ಮತ್ತು ಫಿಲ್ಡಿಂಗ್​​ ಕೋಚ್​ಗಳಿಗೆ ತಲಾ 2.5 ಕೋಟಿ ರೂ. ಪಡೆದ್ದಾರೆ. ಬ್ಯಾಕ್​ ರೂಮ್​ ಸಿಬ್ಬಂದಿಗೆ(ಎಲ್ಲ ಸಿಬ್ಬಂದಿ) 2 ಕೋಟಿ ರೂ. ಸೇರಿದಂತೆ ತಂಡದ ಎಲ್ಲಾ 32 ಜನರು ಪಾಲುದಾರಗಿದ್ದಾರೆ.

ಹೀಗೆ, ಈ ಬಾರಿಯ ಚಾಂಪಿಯನ್ಸ್​ ಟ್ರೋಪಿಯಲ್ಲಿ ಕೂಡ 20 ಕೋಟಿ ರೂ. ಇದೇ ರೀತಿ ಹಂಚಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net